More

    3266 ರೈತಮಿತ್ರ ಹುದ್ದೆ ಭರ್ತಿಗೆ ಕ್ರಮ

    ವಿಜಯವಾಣಿ ಸುದ್ದಿಜಾಲ ಮುಂಡರಗಿ

    ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಸಹಾಯಧನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುತ್ತದೆ. ಕೋವಿಡ್-19 ಹಿನ್ನೆಲೆ ಅನುದಾನ ಬಿಡುಗಡೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಕಲಕೇರಿ ಗ್ರಾಮದ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ ನಿವಾಸಕ್ಕೆ ಶನಿವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಬೀಜ, ಗೊಬ್ಬರ ದಾಸ್ತಾನು ಸಾಕಷ್ಟಿದೆ. ಕಳೆದ ವರ್ಷ ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶದಲ್ಲಿ ನೆರೆ ಬಂದಿದ್ದರಿಂದ ಸೋಯಾಬೀನ್ ಬೀಜಗಳ ಕೊರತೆ ಉಂಟಾಗಿದೆ ಎಂದರು.

    ರೈತ ಅನುವುಗಾರರ ಬದಲಾಗಿ ಹೊಸದಾಗಿ 3266 ರೈತಮಿತ್ರ ಎಂಬ ಹುದ್ದೆಗಳನ್ನು ತುಂಬಿಕೊಳ್ಳಲಾಗುತ್ತಿದೆ. ರೈತಮಿತ್ರ ಹುದ್ದೆಗೆ ಡಿಪ್ಲೊಮಾ ಅಗ್ರಿ ಕೋರ್ಸ್ ಮುಗಿಸಿದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ಬೋರ್​ವೆಲ್ ಕೊರೆಸುವ ರೈತರು 5 ಎಚ್​ಪಿ ಟಿಸಿ ಕೂರಿಸಿ ಹೊಸ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಹೆಸ್ಕಾಂಗೆ 10 ಸಾವಿರ ರೂ.ಗಿಂತ ಹೆಚ್ಚು ಠೇವಣಿ ತುಂಬಬೇಕಾಗುತ್ತಿದೆ. ಇದು ರೈತರಿಗೆ ಹೊರೆಯಾಗುವುದಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇದು ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದರು.

    ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ‘ಬಿ.ಸಿ. ಪಾಟೀಲ ಅವರಿಗೆ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿ ಕೆಲಸ ಮಾಡಲು ಉತ್ತಮ ಅವಕಾಶ ದೊರೆತಿದೆ. ಅವರು ಈ ಇಲಾಖೆಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು. ಶಿವಕುಮಾರಗೌಡ ಪಾಟೀಲ, ಲಿಂಗರಾಜಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಪಿ.ಎಂ. ಪಾಟೀಲ, ಮಹೇಶ ದ್ರಾಕ್ಷಿ, ಆನಂದಗೌಡ ಪಾಟೀಲ, ಮೈಲಾರಪ್ಪ ಕಲಕೇರಿ, ಮಂಜುನಾಥಗೌಡ ಪಾಟೀಲ, ಬಿ.ಎಸ್.ರಡ್ಡಿ, ಹನುಮವ್ವ ಚಿಕ್ಕವಡ್ಡಟ್ಟಿ, ಶಂಕರ ದೇವರಮನಿ, ದೊಡ್ಡನಿಂಗಪ್ಪ ಮಡೇಹೊಲದ, ಉಮ್ಮಕ್ಕ ತಳವಾರ, ಹನುಮವ್ವ ಭಜಂತ್ರಿ, ವಿಜಯಲಕ್ಷ್ಮೀ ಪೂಜಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts