More

    ದಾಂಧಲೆಕೋರರ ವಿರುದ್ಧ ಕಠಿಣ ಕ್ರಮ ಅಗತ್ಯ

    ಸಿಂಧನೂರು: ತಾಲೂಕಿನಲ್ಲಿ ವಾಸವಾಗಿರುವ ಬಾಂಗ್ಲಾ ನಿರಾಶ್ರಿತರಿಗೆ ತೊಂದರೆ ಆಗಲು ಅವಕಾಶ ನೀಡುವುದಿಲ್ಲ. ಆರ್.ಎಚ್.ಕ್ಯಾಂಪ್ 2ರಲ್ಲಿ ನಡೆದಿರುವ ದಾಂಧಲೆಯಿಂದ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

    ಆರ್.ಎಚ್. ಕ್ಯಾಂಪ್ 2ಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಯಾರದಾದರೂ ಭಾವನೆಗಳಿಗೆ ಧಕ್ಕೆಯಾದಾಗ ಕಾನೂನಿನ ಮೊರೆ ಹೋಗಬೇಕು ಹೊರತು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಆದರೆ ಏಕಾ ಏಕಿ ಮಾರಕಾಸ್ತ್ರಗಳಿಂದ ದಾಂಧಲೆ ನಡೆಸಿ ಭಯ ಹುಟ್ಟಿಸುವುದು ಸರಿಯಲ್ಲ. ಭಾನುವಾರ ನಡೆದ ದಾಂಧಲೆಯಿಂದ ಶಾಲೆ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಐಜಿ ಹಾಗೂ ಎಸ್‌ಪಿಯೊಂದಿಗೆ ಮಾತನಾಡಿ ಭದ್ರತೆ ಕಲ್ಪಿಸಲು ಕೋರುವುದಾಗಿ ತಿಳಿಸಿದರು.

    ಕ್ಯಾಂಪ್‌ನಲ್ಲಿ ನಡೆದ ದಾಂಧಲೆ ವಿಚಾರವಾಗಿ ಯಾರೂ ರಾಜಕೀಯ ಮಾಡುವದು ಸರಿಯಲ್ಲ. ಘಟನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಗುಂಪು ಕಟ್ಟಿಕೊಂಡು ಬಂದು ದಾಂಧಲೆ ನಡೆಸಿದರೂ ಪೊಲೀಸರು ಸೂಕ್ತ ಪ್ರಕರಣ ದಾಖಲಿಸಿಲ್ಲ. ಇದರಿಂದಾಗಿ ದಾಂಧಲೆಕೋರರಿಗೆ ಜಾಮೀನು ಸಿಕ್ಕಿದೆ ಎನ್ನುವ ಮಾಹಿತಿ ನನಗೆ ಬಂದಿದೆ. ಸರಿಯಾದ ಪ್ರಕರಣಗಳಡಿ ದಾಂಧಲೆಕೋರರನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದು ಸಂಗಣ್ಣ ಕರಡಿ ಆಗ್ರಹಿಸಿದರು.

    ಪ್ರಮುಖರಾದ ರಾಮನಗೌಡ ವಕೀಲ, ಸಿದ್ದು ಹೂಗಾರ, ಕ್ಯಾಂಪ್‌ನ ಪ್ರಮುಖರಾದ ಸುನಿಲ್ ಮೇಸ್ತ್ರಿ, ಕೃಷ್ಣ ಬಿಸ್ವಾಸ್, ವಿಮಿತ್ ಮಂಡಲ್, ಅಮರೇಶಪ್ಪ ಮೈಲಾರ, ಪ್ರಣಬ್ ಬಾಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts