More

    ಸೊಸೈಟಿ ಸಾಲ ಮನ್ನಾಕ್ಕೆ ಕ್ರಮ

    ಮುಂಡಗೋಡ: ಸೊಸೈಟಿಯಲ್ಲಿ ಅನೇಕ ರೈತರ ಸಾಲ ಮನ್ನಾ ಆಗಿದೆ. ಇನ್ನು ಅನೇಕರ ಸಾಲ ಮನ್ನಾ ಆಗಬೇಕಿದೆ. ಮನ್ನಾ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ತಾಲೂಕಿನ ಚವಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂ. ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಶನಿವಾರ ನೆರವೇರಿಸಿ ಅವರು ಮಾತನಾಡಿದರು.

    ಸುಮಾರು 500 ಕೋಟಿ ರೂಪಾಯಿ ಅನುದಾನದಲ್ಲಿ ತಾಲೂಕಿಗೆ ನೀರಾವರಿ ಯೋಜನೆ ತರಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ಅನುಕೂಲವಾಗಲಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ವಣವಾಗಿವೆ ಎಂದರು.

    ವಿಶೇಷವಾಗಿ ಮನೆ-ಮನೆಗೆ ನಲ್ಲಿ ಮೂಲಕ 50 ಲೀಟರ್ ಕುಡಿಯುವ ನೀರು ಪೂರೈಸುವ ಮನೆ-ಮನೆಗೆ ಗಂಗೆ ಎಂಬ 25 ಲಕ್ಷ ರೂಪಾಯಿ ಅನುದಾನದ ಯೋಜನೆ ತರಲಾಗಿದೆ. ತಾಲೂಕಿನ ಎಲ್ಲ ರೈತರು ಆರ್ಥಿಕವಾಗಿ ಮುಂದುವರಿಯಬೇಕು. ಕೃಷಿಕ ಮತ್ತು ಕೃಷಿ ಕಾರ್ವಿುಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

    ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಮಾತನಾಡಿ, ಗ್ರಾ.ಪಂ. ಸದಸ್ಯರು ತಮಗೆ ಬಂದ ಅನುದಾನದಲ್ಲಿ ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡಬೇಕು. ರೈತರಲ್ಲಿ ಹೊಂದಾಣಿಕೆ ಇರಬೇಕು ಎಂದರು. ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ ಮಾತನಾಡಿ, ಇತ್ತೀಚಿಗೆ ಎನ್​ಆರ್​ಇಜಿ ಯೋಜನೆ ಅನುಷ್ಠಾನಕ್ಕೆ ಪಂಚಾಯಿತಿಯವರು ಹಿಂದೇಟು ಹಾಕುತ್ತಿದ್ದಾರೆ. ಸಾಕಷ್ಟು ಅನುದಾನ ತರಲು ಅವಕಾಶವಿದ್ದು, ಇದು ಗ್ರಾಮೀಣ ಭಾಗಗಳಲ್ಲಿ ಅತಿ ಅವಶ್ಯವಿದೆ ಎಂದರು.

    ಇದೇ ಸಂದರ್ಭದಲ್ಲಿ ಬ್ಯಾನಳ್ಳಿ ಗ್ರಾಮದಲ್ಲಿ ಪಕ್ಕಾ ಗಟಾರ್, ಹೊಲಗಳ ಸುತ್ತಲೂ ಆನೆ ಟ್ರೆಂಚ್, ವಿದ್ಯುತ್ ಟಿಸಿ ವ್ಯವಸ್ಥೆ, ಆಂಜನೇಯ ದೇವಸ್ಥಾನ ನಿರ್ವಣದ ಬೇಡಿಕೆಗಳ ಮನವಿಯನ್ನು ಗ್ರಾಮಸ್ಥರು ಸಚಿವರಿಗೆ ನೀಡಿದರು. ತಾ.ಪಂ. ಅಧ್ಯಕ್ಷೆ ರಾಧಾ ಶಿಂಗನಳ್ಳಿ, ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಅಶೋಕ ಚಲವಾದಿ, ತುಕಾರಾಮ ಇಂಗಳೆ, ಸಿ.ಕೆ. ಅಶೋಕ, ನಿಂಗಜ್ಜ ಕೋಣನಕೇರಿ, ಮಂಜುನಾಥ ಕಟಗಿ, ಪರಶುರಾಮ ತಹಶೀಲ್ದಾರ್, ವೈ.ಪಿ. ಪಾಟೀಲ, ವೈ.ಪಿ. ಭುಜಂಗಿ, ಪ್ರದೀಪ ಚವ್ಹಾಣ, ಗ್ರಾ.ಪಂ. ಸದಸ್ಯರು ಇದ್ದರು.

    ಉದ್ಘಾಟನೆಗೊಂಡ ಕಾಮಗಾರಿಗಳು: ಕ್ಯಾಸನಕೇರಿ ಗ್ರಾಮದ ಕಾಂಕ್ರೀಟ್ ರಸ್ತೆ, ಮಲವಳ್ಳಿ ಗ್ರಾಮದ ವಿಠೋಬಾ ದೇವಸ್ಥಾನದ ಅಡಿಗಲ್ಲು ಸ್ಥಾಪನೆ ಮತ್ತು ಮನೆ-ಮನೆಗೆ ಗಂಗೆ, ಲಕ್ಕೊಳ್ಳಿ ಗ್ರಾಮದ ಕಾಂಕ್ರೀಟ್ ರಸ್ತೆ, ಬ್ಯಾನಳ್ಳಿ ಗ್ರಾಮದಲ್ಲಿ ಮನೆ-ಮನೆಗೆ ಗಂಗೆ ಹಾಗೂ ಚವಡಳ್ಳಿ ಗ್ರಾಮದ ನೂತನ ಗ್ರಾ.ಪಂ. ಕಟ್ಟಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts