More

    ಚುನಾವಣಾ ಕರ್ತವ್ಯ ಲೋಪ ಎಸಗಿದರೆ ಕ್ರಮ

    ಕೋಲಾರ: ಈಗಾಗಲೇ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಅಕ್ರಮಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ. ಪೊಲೀಸ್​ ಅಧಿಕಾರಿಗಳು, ಸಿಬ್ಬಂದಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.

    ನಗರದ ಪೊಲೀಸ್​ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್​ ಪೆರೇಡ್​ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣಾ ಕರ್ತವ್ಯವನ್ನು ಜವಬ್ದಾರಿಯಿಂದ ನಿರ್ವಹಿಸಬೇಕು, ಅದು ಬಿಟ್ಟು ಲೋಪ ಎಸಗಿದರೆ ತಪ್ಪಿಸಿಕೊಳ್ಳಲು ಸಾಧ್ಯವಾವುದಿಲ್ಲ ಎಂದು ಎಚ್ಚರಿಸಿದರು.
    ಚುನಾವಣೆ ಸಂಬಂಧ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್​ ಪೋಸ್ಟ್​ಗಳನ್ನು ಸ್ಥಾಪನೆ ಮಾಡಿ, ಪೊಲೀಸ್​ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅವರು ಕಡ್ಡಾಯವಾಗಿ ಎಲ್ಲಾ ವಾಹನಗಳ ಶೋಧ ನಡೆಸಬೇಕು. ದಾಖಲೆಗಳು ಇಲ್ಲದೆ ಹಣ, ಮತದಾರರನ್ನು ಸೆಳೆಯಲು ಉಡುಗೋರೆಗಳನ್ನು ಸಾಗಿಸುತ್ತಿರುವುದು ಕಂಡು ಬಂದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಪ್ರಕರಣ ದಾಖಲಿಸಬೇಕು. ಮಾಲನ್ನು ವಶಪಡಿಸಿಕೊಳ್ಳಬೇಕು. ಅಕ್ರಮಗಳನ್ನು ತಡೆಗಟ್ಟಲು ಯಾವುದೇ ರೀತಿ ರಾಜೀಗೆ ಒಳಗಾಗಬಾರದು ಎಂದು ಎಚ್ಚರಿಕೆ ನೀಡಿದರು.
    ಕರ್ತವ್ಯದ ವೇಳೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಅಶಿಸ್ತು ತೋರಿದರೆ ಸಹಿಸುವುದಿಲ್ಲ. ಈ ಸಂದರ್ಭದಲ್ಲಿ ಲೋಪ ಎಸಗಿದರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಚ್ಚರಿಕೆಯಿಂದ ವೃತ್ತಿ ಗೌರವಕ್ಕೆ ಧಕ್ಕೆಯಾದಂತೆ ಕಾರ್ಯನಿರ್ವಹಿಸಬೇಕು. ಗ್ರಾಮಗಳಿಗೆ ಪೊಲೀಸ್​ ಭೇಟಿ ನೀಡುತ್ತಾರೆ ಎಂದರೆ ಅದು ಇಡೀ ಇಲಾಖೆ ಭೇಟಿ ನೀಡಿದಾಗೆ. ಪೊಲೀಸ್​&ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು, ಅಗ ಮಾತ್ರ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
    ಬಹಳ ವರ್ಷಗಳ ನಂತರ ಡಿಎಸ್​ಆರ್​ ವಸತಿ ಗೃಹಗಳ ಆವರಣದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಹಂತಹಂತವಾಗಿ ಹೊಸ ಸೋಲಾರ್​ ನಿಮಾರ್ಣ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಜತೆಗೆ ಎಲ್ಲಾ ಠಾಣೆಗಳಲ್ಲಿ ನೀರಿನ ಸಮಸ್ಯೆ ಇರಬಾರದು ಎಂಬ ಉದ್ದೇಶದಿಂದ ಯರಗೋಳ್​ ಯೋಜನೆ ಮತ್ತು ಜಲ ಜೀವನ್​ ಮಿಷನ್​ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.
    ಪೊಲೀಸ್​ ಟೈಪಿಂಗ್​ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮಾಲೂರು ಕ್ವಾರ್ಟಸ್​, ಗೌನಿಪಲ್ಲಿ ಹೊಸ ಠಾಣೆ ಯೋಜನೆ ಮಾಡಲಾಗಿದೆ. ಇದೇ ರೀತಿ ಇಲಾಖೆಯನ್ನು ಉತ್ತಮಪಡಿಸಲು ಕ್ರಮವಹಿಸಲಾಗಿದ್ದು ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
    ಬೀಟ್​ ವ್ಯವಸ್ಥೆಯ ಜತೆಗೆ ಮಹಿಳಾ ಪೊಲೀಸ್​ ಪಡೆ ರಚನೆ ಮಾಡಲಾಗಿದೆ. ಇದಕ್ಕೆ ಕೋಲಾರಮ್ಮ ಪಡೆ ಎಂದು ಹೆಸರಿಟ್ಟಿದ್ದು ಅಪರಾಧ ಚಟುವಟಿಕೆಗಳನ್ನು ತಡೆಯಲು ಕಾರ್ಯನಿರ್ವಹಿಸಲಿದ್ದಾರೆ. ಪಡೆಯಲ್ಲಿರುವ ಪ್ರತಿಯೊಬ್ಬ ಮಹಿಳಾ ಪೊಲೀಸ್​ಗೆ ಬೈಕ್​ ಕೊಡಿಸಲಾಗುವುದು. ಅಪರಾಧ ಚಟುವಟಿಕೆಗಳಿಗೆ ಎಡೆ ಮೂರಿ ಕಟ್ಟುವ ರೀತಿ ಸೇವೆ ಸಲ್ಲಿಸಲಿಬೇಕು ಎಂದು ಸೂಚಿಸಿದರು.
    ಅವಣಿ ಜಾತ್ರೆಯಲ್ಲಿ ಅನುಮಾಸ್ಪ ವ್ಯಕ್ತಿಗಳನ್ನು ಮುಳಬಾಗಿಲು ಪೊಲೀಸರು ಹಿಡಿದು ತಪಾಸಣೆ ನಡೆಸಿ ವಾಪಸ್​ ಮನೆಗೆ ಕಳುಹಿಸಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಿದ್ದಾರೆ. ಸೇವೆಯಲ್ಲಿ ಇದಷ್ಟು ದಿನ ಉತ್ತಮ ಕೆಲಸ ಮಾಡಿ ಅದರ್ಶಪ್ರಾಯವಾಗಬೇಕು. ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
    ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಪೊಲೀಸ್​ ಅಧಿಕಾರಿಗಳಿಗೆ, ಸಿಬ್ಬಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ಪೊಲೀಸ್​ ವಿವಿಧ ಠಾಣ ತುಕಡಿಗಳಿಂದ ಪಥಸಂಚಲನ ನಡೆಯಿತು.
    ಕಾರ್ಯಕ್ರಮದಲ್ಲಿ ಹೆಚ್ಚುವರಿ ವರಿಷ್ಠಾಧಿಕಾರಿ ರವಿಶಂಕರ್​, ಜಗದೀಶ್​, ಕೆಎಸ್​ಆರ್​ಸಿಟಿ ಡಿಸಿ ಬಸವರಾಜು, ಹೋಂ ಗಾರ್ಡ್​ ಕಮಾಂಡರ್​ ಕಿರೆಣ್​, ಅಗ್ನಿ ಶಾಮಕ ಜಿಲ್ಲಾಧಿಕಾರಿ ಹನುಮಂತಯ್ಯ, ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್​.ಎನ್​.ವಿಜಯ್​ ಕುಮಾರ್​, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕಿ ಗೀತಾ, ಭಾರತ್​ ಸ್ಕೌಟ್ಸ್​ ಅಂಡ್​ ಗೈಡ್ಸ್​ ಸಂಸ್ಥೆಯ ಸುರೇಶ್​ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts