More

    ಬಡಜನರ ಹಸಿವು ನೀಗಿಸಲು ಸರ್ಕಾರದಿಂದ ಕ್ರಮ

    ಬೈಂದೂರು: ಸರ್ಕಾರ ಬಡಜನರ ಹಸಿವು ನೀಗಿಸಲು ಪಡಿತರ ವಿತರಿಸುತ್ತಿದೆ. ಫಲಾನುಭವಿಗಳು ಸುಲಭದಲ್ಲಿ ಪಡೆಯುವಂತಾಗಲು ಗ್ರಾಮಗಳ ವಿವಿಧೆಡೆ ವಿತರಣಾ ಕೇಂದ್ರಗಳನ್ನು ನಡೆಸುವುದು ಅಗತ್ಯ. ಬಿಜೂರಿನ ಹೊಸ ಪಡಿತರ ವಿತರಣೆ ಕೇಂದ್ರದ ಹೊಣೆಯನ್ನು ಗ್ರಾಮ ಪಂಚಾಯಿತಿಗೆ ಒಪ್ಪಿಸಿದ್ದು, ಅದನ್ನು ಜನಸ್ನೇಹಿಯಾಗುವಂತೆ ನಿರ್ವಹಿಸಬೇಕು ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.

    ಬಿಜೂರು ಸರ್ಕಾರಿ ಪ್ರೌಢಶಾಲೆಯ ಬಳಿ ಗ್ರಾಮದ 3 ಮತ್ತು 4ನೇ ವಾರ್ಡ್ ನಿವಾಸಿಗಳ ಅನುಕೂಲಕ್ಕಾಗಿ ಆರಂಭಿಸಿದ ಪಡಿತರ ವಿತರಣಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ಬಿಜೂರಲ್ಲಿ ಉಪ್ಪು ನೀರು ಸಮಸ್ಯೆ ನಿಯಂತ್ರಿಸಲು ಸುಮನಾವತಿ ನದಿಗೆ ಸುಬ್ಬರಡಿ ಎಂಬಲ್ಲಿ ಉಪ್ಪುನೀರು ತಡೆ ಕಟ್ಟು ನಿರ್ಮಿಸಲಾಗುತ್ತಿದೆ. ವಾರಾಹಿ ನದಿ ನೀರನ್ನು ಬೈಂದೂರು ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಗೂ ಶೀಘ್ರ ಚಾಲನೆ ನೀಡಲಾಗುವುದು. 1.5 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿಯಿಂದ ಬಿಜೂರು ಶಾಲೆ ಕಡೆಯ ರಸ್ತೆ ಸಂಚಾರ ಯೋಗ್ಯವಾಗುವಂತೆ ದುರಸ್ತಿಪಡಿಸಲಾಗುವುದು. ಬಿಜೂರು ವೆಂಟೆಡ್ ಡ್ಯಾಮ್ ಮೂಲಕ ಕೃಷಿ ಭೂಮಿಗೆ ನುಗ್ಗುವ ಬಿಡಾಡಿ ಜಾನುವಾರುಗಳನ್ನು ತಡೆಯಲು ಕೌಗೇಟ್ ನಿರ್ಮಿಸಲಾಗುವುದು. ಅಂಗನವಾಡಿಗೆ ನೂತನ ಕಟ್ಟಡ ರಚಿಸಲಾಗುವುದು ಎಂದರು.

    ರಾಜ್ಯ ಯೋಜನಾ ಮಂಡಳಿ ಸದಸ್ಯೆ ಪ್ರಿಯದರ್ಶಿನಿ ಬೆಸ್ಕೂರ್ ಸ್ವಾಗತಿಸಿದರು. ಪಡಿತರ ಗ್ರಾಹಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶ್ರೀಧರ ಬಿಜೂರು ಪ್ರಾಸ್ತಾವಿಕ ಮಾತನಾಡಿ, ಪ್ರದೇಶದ ಜನರು ಸನಿಹದಲ್ಲಿ ಪಡಿತರ ಪಡೆಯಲು ನಡೆಸಿದ ಪ್ರಯತ್ನದಲ್ಲಿ ನೆರವಾದ ಶಾಸಕರು, ಅನ್ಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸ್ಮರಿಸಿದರು.

    ಜಿಪಂ ಸದಸ್ಯರಾದ ಗೌರಿ ದೇವಾಡಿಗ, ಸುರೇಶ ಬಟವಾಡಿ, ತಾಪಂ ಸದಸ್ಯ ಜಗದೀಶ ದೇವಾಡಿಗ, ಪ್ರಮುಖರಾದ ಜಯರಾಮ ಶೆಟ್ಟಿ, ರಮೇಶ ಬಿ. ದೇವಾಡಿಗ, ವೀರೇಂದ್ರ ಶೆಟ್ಟಿ, ರಾಜೇಂದ್ರ ಬಿಜೂರು, ರಾಘವೇಂದ್ರ ದೇವಾಡಿಗ, ಜಿ.ಎಸ್. ಹೆಗಡೆ, ಅಭಿವೃದ್ಧಿ ಅಧಿಕಾರಿ ನಾಗವೇಣಿ ಇದ್ದರು. ಸುರೇಶ ಬಿಜೂರು ವಂದಿಸಿದರು. ಮಂಜುನಾಥ ದೇವಾಡಿಗ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts