More

    ಲಾಕ್​ಡೌನ್​ ಬಳಿಕ 25 ದಿನ ಪೂರೈಸಿದ ಮೊದಲ ಸಿನಿಮಾ ಆ್ಯಕ್ಟ್ 1978

    ಬೆಂಗಳೂರು: ಲಾಕ್​ಡೌನ್​ ಬಳಿಕ ಕನ್ನಡದ ಮೊದಲ ಹೊಸ ಸಿನಿಮಾ ಬಿಡುಗಡೆ ಆಗಿದ್ದು ಮಂಸೋರೆ ನಿರ್ದೇಶನದ ‘ಆ್ಯಕ್ಟ್ 1978’. ಇದೀಗ ಈ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ.

    ಈ ಖುಷಿಯ ವಿಚಾರಕ್ಕೆ ಇಡೀ ತಂಡ ಇತ್ತೀಚೆಗೆ ಮಾಧ್ಯಮದವರ ಮುಂದೆ ಬಂದು ಸಂತೋಷ ಹಂಚಿಕೊಂಡಿತು. ಕೊರೊನಾ ಭಯದ ನಡುವೆಯೂ ಚಿತ್ರವು 25 ದಿನ ಪೂರೈಸಿದ ಬಗೆಯನ್ನು ಚಿತ್ರತಂಡದವರು ಹಂಚಿಕೊಂಡರು.

    ಇದನ್ನೂ ಓದಿ: ಧೂಳೆಬ್ಬಿಸುತ್ತಿದೆ ಶ್ರೀಮುರಳಿ ಅಭಿನಯದ ‘ಮದಗಜ’ ಟೀಸರ್​ …

    ನನಗೆ ಈ ವ್ಯವಹಾರದ ಬಗ್ಗೆ ಗೊತ್ತಿಲ್ಲ ಎಂದ ಹಿರಿಯ ನಟ ದತ್ತಣ್ಣ, ‘ಎರಡನೇ ದಿನ ನಾನು ಈ ಸಿನಿಮಾ ನೋಡಿದೆ. ನಾನು ಸಿನಿಮಾವನ್ನು ವಿಮರ್ಶಾತ್ಮಕವಾಗಿ ನೋಡ್ತೇನೆ. ಯಾವ ಸಿನಿಮಾವನ್ನೂ ನಾನು ಅಷ್ಟು ಸುಲಭವಾಗಿ ಮೆಚ್ಚಿಕೊಳ್ಳುವುದಿಲ್ಲ. ಈ ಸಿನಿಮಾ ತುಂಬ ಹಿಡಿಸಿತು. ಹಲವು ಜನರಿಗೆ ಹೇಳಿದ್ದೆ. ಚಿತ್ರಮಂದಿರದಲ್ಲಿ ಡಿಸಿಪ್ಲೇನ್ ಮೇಂಟೆನ್ ಮಾಡಿದ್ದಾರೆ ಬಂದು ನೋಡ್ರಪ್ಪ ಎಂದಿದ್ದೆ. ಅದರಂತೆ ಇದೀಗ 25 ದಿನ ಪೂರೈಸಿದೆ’ ಮೆಚ್ಚಿಕೊಂಡವರಿಗೆಲ್ಲ ಧನ್ಯವಾದ’ ಎಂದರು.

    ಈ ಚಿತ್ರ ಕಮರ್ಷಿಯಲ್ ಹಿಟ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ, ನಮ್ಮ ಸಂತೋಷಕ್ಕೆ ಸಿನಿಮಾ ಮಾಡಿದರಾಯ್ತು ಎಂದು ಈ ಸಿನಿಮಾ ಪ್ರಾರಂಭಿಸಿದರಂತೆ ನಿರ್ಮಾಪಕ ದೇವರಾಜ್​. ಇದೀಗ ಚಿತ್ರವು 25ನೇ ದಿನ ಮುಗಿಸಿ ಮುನ್ನುಗ್ಗುತ್ತಿದ್ದು ಅವರಿಗೆ ಖುಷಿ ತಂದಿದೆ. ‘ಇದೆಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಸಿನಿಮಾ ನೋಡಿ ಪಿಡಿಒ ಮಹಿಳೆಯೊಬ್ಬರು ತಮಗಾದ ಅನ್ಯಾಯವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ನಾವು ಅಂದುಕೊಂಡ ಕೆಲಸ ಸಾರ್ಥಕವಾಯ್ತು’ ಎಂದರು.

    ಇದನ್ನೂ ಓದಿ: ಸಮಂತಾ ಅಕ್ಕಿನೇನಿ ಪಡೆದಿದ್ದು 1 ಕೋಟಿ ರೂಪಾಯಿ!

    ಸಂಚಾರಿ ವಿಜಯ್ ಸಹ ಸಿನಿಮಾಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಸಂತಸದಲ್ಲಿದ್ದಾರೆ. ಇಡೀ ತಂಡ ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್​ಗಳಿಗೆ ಹೋಗಿ ಪ್ರೇಕ್ಷಕರ ಪ್ರತಿಕ್ರಿಯೆ ಪಡೆದುಕೊಂಡು ಬಂದಿರುವ ಬಗ್ಗೆ ಅವರು ಹೇಳಿಕೊಂಡರು. ಅದೇ ರೀತಿ ಛಾಯಾಗ್ರಾಹಕ ಸತ್ಯ ಹೆಗಡೆ, ‘ಇದೊಂದು ನೋಡುವ ಸಿನಿಮಾ ಅಲ್ಲ, ಕಾಡುವ ಸಿನಿಮಾ’ ಎಂದು ಬಣ್ಣಿಸಿದರು.

    ಡಿ ಕ್ರಿಯೇಷನ್ಸ್ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗಿರುವ ‘ಆ್ಯಕ್ಟ್ 1978’ ಚಿತ್ರವನ್ನು ಮಂಸೋರೆ ನಿರ್ದೇಶನ ಮಾಡಿದ್ದಾರೆ. ಟಿ.ಕೆ ದಯಾನಂದ್ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದರೆ, ನಾಗೇಂದ್ರ ಅವರ ಸಂಕಲನ ಚಿತ್ರಕ್ಕಿದೆ.

    ಶ್ರೀಮುರಳಿ ಹೊಸ ಚಿತ್ರ ‘ಬಘೀರ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts