More

    ಕೊಪ್ಪಳ ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರಗಳು ಶುರು

    ಕೊಪ್ಪಳ: ಜಿಲ್ಲಾದ್ಯಂತ ಅಂಗನವಾಡಿಗಳು ಮರು ಆರಂಭವಾಗಿದ್ದು, ಸೋಮವಾರ ಕೇಂದ್ರಗಳಿಗೆ ಬಂದ ಮಕ್ಕಳಿಗೆ ಸಿಹಿ ತಿನಿಸಿ, ಹೂ ನೀಡುವ ಮೂಲಕ ಸ್ವಾಗತ ಕೋರಲಾಯಿತು.

    ಜಿಲ್ಲೆಯಲ್ಲಿ 1850 ಅಂಗನವಾಡಿ ಕೇಂದ್ರಗಳು ಆರಂಭಗೊಂಡವು. ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ, ತಳಿರು-ತೋರಣದಿಂದ ಸಿಂಗರಿಸಲಾಗಿತ್ತು. ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕೇಂದ್ರ ಆರಂಭ ಕುರಿತು ಪಾಲಕರಿಗೆ ಮಾಹಿತಿ ನೀಡಿ ಮಕ್ಕಳನ್ನು ಕರೆ ತಂದರು. ಮೊದಲ ದಿನವಾದ್ದರಿಂದ ಮಕ್ಕಳೊಂದಿಗೆ ಪಾಲಕರನ್ನೂ ಆಹ್ವಾನಿಸಲಾಗಿತ್ತು. ಜನಪ್ರತಿನಿಧಿಗಳು ಆರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಿಗೆ ಸಿಹಿ ತಿನ್ನಿಸಿದರು.

    ಕೆಲವೆಡೆ ಶೇ.100 ಹಾಜರಾತಿ ಕಂಡುಬಂತು. ಬಹುತೇಕ ಶೇ.50 ಮಕ್ಕಳು ಮೊದಲ ದಿನ ಹಾಜರಾದರು. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸಮಯ ನಿಗದಿ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ ನಗರದ ಕೋಟೆ ಪ್ರದೇಶ ಸೇರಿದಂತೆ ಇತರ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

    ಜಿಲ್ಲೆಯ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪ್ರಸಕ್ತ ಸಾಲಿಗೆ 1550 ಮಕ್ಕಳು ಎಲ್‌ಕೆಜಿ, ಯುಕೆಜಿಗೆ ಪ್ರವೇಶ ಪಡೆದಿದ್ದಾರೆ. ಸೋಮವಾರ ಮಕ್ಕಳು ತರಗತಿಗಳಿಗೆ ಹಾಜರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts