More

    ಎಕರೆಗೆ 20 ಸಾವಿರ ರೂ. ಪರಿಹಾರ ನೀಡಿ

    ಮಾನ್ವಿ: ಬರ ಪರಿಹಾರವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ರಾಜು ಪಿರಂಗಿಗೆ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

    ಇದನ್ನೂ ಓದಿ: ಗ್ರಾಪಂ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ

    ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಇದುವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಬರ ಪರಿಹಾರ ಬಾರದೆ ರೈತರು ಸಂಕಷ್ಟದಲ್ಲಿದ್ದಾರೆ.

    ಒಂದು ಎಕರೆ ಜಮೀನಿಗೆ ಕನಿಷ್ಠ 20 ಸಾವಿರ ರೂ. ಜಮಾ ಮಾಡಬೇಕು, ತಾಲೂಕಿನಲ್ಲಿ ಹಿಂಗಾರು ಜೋಳ ಮತ್ತು ಭತ್ತದ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ತಾಸು ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಲಾಯಿತು.

    ಬರ ಪರಿಹಾರ ಬಾರದೆ ರೈತರ ಸಂಕಷ್ಟ

    ರೈತರಾದ ಶರಣಪ್ಪ ಗವಿಗಟ್, ಬಸವರಾಜ, ಲಿಂಗಾರೆಡ್ಡಿ ಪಾಟೀಲ್, ಅಮರೇಶ ಆಲ್ದಾಳ, ವಿಠೋಬ ತುಪ್ಪದೂರು, ಚನ್ನಬಸವ ಗವಿಗಟ್, ಶಿವರಾಜ ಗವಿಗಟ್, ಎಂ.ಹನುಮಂತ, ವೀರೇಶ ಗವಿಗಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts