More

    ಕರ್ಮಫಲಗಳಿಗೆ ಸೂಕ್ತ ಫಲ ಪ್ರಾಪ್ತಿ

    ಶೃಂಗೇರಿ: ಜೀವನದಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬ ಪರಿಜ್ಞಾನ ನಮಗೆ ಬೇಕು. ನಮ್ಮ ಕರ್ಮಫಲಗಳಿಗೆ ಸರಿಯಾಗಿ ಭಗವಂತ ನಮಗೆ ಫಲ ನೀಡುತ್ತಾನೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.

    ಬೇಗಾರು ಗ್ರಾಪಂ ನೀಲಂದೂರು ಗ್ರಾಮದ ಹೆಗ್ಗರಸು ಶ್ರೀ ಶಾಂತಾ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರ ಮರು ಪ್ರತಿಷ್ಠಾನ ಮಹೋತ್ಸವ ಮತ್ತು ಮಹಾಕುಂಭಾಭಿಷೇಕ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಆಶೀರ್ವಚನ ನೀಡಿದರು.
    ಯಾವ ಕೆಲಸ ಮಾಡಬೇಕು, ಯಾವ ಕಾರ್ಯ ನಿರ್ವಹಿಸಬಾರದು ಎಂಬ ಅರಿವು ನಮ್ಮಲ್ಲಿ ಇಲ್ಲದಿದ್ದರೆ ನಾವು ಹಿರಿಯರಿಂದ ಅಥವಾ ಗುರುಗಳಿಂದ ಅದರ ಜ್ಞಾನ ಪಡೆಯಬೇಕು. ಶುದ್ಧ ಮನಸ್ಸಿನಿಂದ ಕೆಲಸ ಮಾಡಿ ಭಗವಂತನನ್ನು ಆರಾಧಿಸಿದಾಗ ಮಾತ್ರ ಪುಣ್ಯ ಲಭಿಸಲು ಸಾಧ್ಯ ಎಂದರು.
    ರೋಟರಿ ಸಂಸ್ಥೆ ಹಾಗೂ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ಉದ್ಘಾಟಿಸಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಲು ಭಗವಂತನ ಧ್ಯಾನ ಅಗತ್ಯ ಎಂದರು.
    ರಾಜಲಕ್ಷ್ಮೀ ಜೋಷಿ, ಸಮಿತಿ ಅಧ್ಯಕ್ಷ ಸಂಪತ್‌ಕುಮಾರ್, ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್, ಸಮಿತಿ ಪದಾಧಿಕಾರಿಗಳು ಇದ್ದರು.

    ಭಗವಂತ ಸರ್ವಜ್ಞ, ಸರ್ವವಿತ
    ಭಗವಂತ ಸರ್ವಜ್ಞ ಹಾಗೂ ಸರ್ವವಿತ ಎಂದು ಉಪನಿಷತ್ತಿನಲ್ಲಿ ಉಲ್ಲೇಖವಿದೆ. ಸಾಮಾನ್ಯ ಜ್ಞಾನ ಮನುಷ್ಯನಿಗೆ ಇದ್ದರೆ ಈ ಜ್ಞಾನದ ಜತೆ ವಿಶೇಷ ಜ್ಞಾನ ದೇವರು ಪಡೆದಿರುತ್ತಾನೆ. ಆತನು ಪ್ರಪಂಚದ ಎಲ್ಲ ಆಗು-ಹೋಗುಗಳನ್ನು ಅರಿತಿರುತ್ತಾನೆ. ಕರ್ಮಫಲಗಳಲ್ಲಿ ಪ್ರಬಲ ಹಾಗೂ ದುರ್ಬಲ ಫಲಗಳಿವೆ. ಪ್ರಬಲ ಕರ್ಮ ಫಲದ ಎದುರು ದುರ್ಲಬ ಕರ್ಮಫಲಗಳು ಹೆಚ್ಚಿನ ಸಾಮರ್ಥ್ಯ ಹೊಂದಿರುವುದಿಲ್ಲ. ನದಿಗಳು 365 ದಿನಗಳೂ ವೇಗವಾಗಿ ಹರಿಯುವುದಿಲ್ಲ. ನಾವು ಹೇಗೆ ಈಜಿ ದಡ ದಾಟಬೇಕು ಎಂಬ ಅರಿವು ಇರಬೇಕು. ಅಂತೆಯೇ ಭಗವಂತ ನಮಗೆ ಉನ್ನತ ಅವಕಾಶ ನೀಡಿದ್ದಾನೆ. ಪುಣ್ಯ-ಪಾಪಕಾರ್ಯಗಳ ನಡುವೆ ಇರುವ ಪರಿಜ್ಞಾನದ ಕುರಿತು ಅರಿವು ಇರಬೇಕು. ಆಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

    ಮುನ್ನೂರು ವರ್ಷಗಳಿಂದಲೂ ನಮ್ಮ ಹಿರಿಯರು ಶಿಲ್ಪಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹಿರಿಯರು ನನಗೆ ನೀಡಿದ್ದು ಉಳಿ, ಸುತ್ತಿಗೆ ಹಾಗೂ ಶಿಲ್ಪಾಶಾಸ್ತ್ರದ ಜ್ಞಾನ. ಕೇದಾರನಾಥ ದೇವಾಲಯದಲ್ಲಿ ಶ್ರೀ ಆದಿಶಂಕರಾಚಾರ್ಯ ವಿಗ್ರಹವನ್ನು ಕೆತ್ತಿರುವುದು ನನ್ನ ಜೀವನದ ದೊಡ್ಡ ತಿರುವು. ಶ್ರೀ ಶಂಕರರ ಅನುಗ್ರಹ ಹಾಗೂ ಶ್ರೀರಾಮನ ಆಶೀರ್ವಾದದಿಂದ ನಾನು ಕೆತ್ತಿದ ಶ್ರೀ ರಾಮಲಲ್ಲಾನ ವಿಗ್ರಹ ಅಯೋಧ್ಯೆಯಲ್ಲಿ ಸ್ಥಾಪನೆ ಮಾಡಲು ಸಾಧ್ಯವಾಯಿತು.
    ಅರುಣ್ ಯೋಗಿರಾಜ್, ಮೈಸೂರಿನ ಶಿಲ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts