More

    ಸಾಧನೆಗೆ ಯೋಜನೆ ಅಗತ್ಯ

    ಬೆಳಗಾವಿ: ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆಗೆ ಅಡ್ಡ ಮಾರ್ಗಗಳಿಲ್ಲ. ಸೂಕ್ತ ಯೋಜನೆಯೊಂದಿಗೆ ಶ್ರಮವಹಿಸಿ ದುಡಿದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

    ನಗರದ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾವು ಉತ್ಪಾದಿಸುವ ಗುಣಮಟ್ಟದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಮಧ್ಯವರ್ತಿ ಲಾಭ ಗಳಿಸುತ್ತಾನೆ. ಇದಕ್ಕೆ ಆಸ್ಪದ ನೀಡಬಾರದು.

    ಗುಣಮಟ್ಟದ ಸೇವೆ ನೀಡುವ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದರು. ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಮಾತನಾಡಿ, ಹೊಸ ಕೈಗಾರಿಕೆ ನೀತಿ ಜಾರಿಗೆ ತರಲಾಗಿದ್ದು, ಉದ್ಯಮಿಗಳು ಮಾಡುವ ಬಂಡವಾಳ ಹೂಡಿಕೆಗೆ ಶೇ.25 ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದೆ. ಲಾಭ ಪಡೆದುಕೊಳ್ಳಬೇಕು ಎಂದರು. ಮಾಧವ ಆಚಾರ್ಯ ಅವರಿಗೆ ದಿಲೀಪ ಧಾಮಲೆ ಸ್ಮಾರಕ ಟ್ರಸ್ಟ್ ಪ್ರಶಸ್ತಿ, ದೀಪಕ ಠಕ್ಕರ್ ಅವರಿಗೆ ಬಸಪ್ಪ ಕಗ್ಗಣಗಿ ಸ್ಮಾರಕ ನಿಧಿ ಪ್ರಶಸ್ತಿ ಹಾಗೂ ಮೇಘನ್ ನಾಯ್ಕ ಅವರಿಗೆ ದಿ.ಮಧುಕರ ಹೆರವಾಡಕರ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪಂಚಾಕ್ಷರಿ ಚೊನ್ನದ, ಗೌರವ ಕಾರ್ಯದರ್ಶಿ ಕಿರಣ ಅಗಡಿ,
    ಉಪಾಧ್ಯಕ್ಷರಾದ ಸಿ.ಸಿ.ಹೊಂಡದಕಟ್ಟಿ, ಹೇಮೇಂದ್ರ ಪೋರವಾಲ್, ಸಂಜಯ ಪೋತದಾರ, ಪ್ರಭಾಕರ ನಾಗರಮುನ್ನೋಳಿ ಇದ್ದರು.

    ಸಂಸದರಿಗೆ ಮನವಿ: ಉದ್ಯಮಬಾಗ್ ಕೈಗಾರಿಕೆ ಪ್ರದೇಶದಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸಬೇಕು. ಇಎಸ್‌ಐ ಕಾರ್ಪೋರೇಷನ್ ಉಪ ಪ್ರಾದೇಶಿಕ ಕಚೇರಿ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಮನವಿ ಸಲ್ಲಿಸಿದರು. ರೋಹನ ಜುವಳಿ, ಶ್ರೀಧರ ಉಪ್ಪಿನ, ಬಸವರಾಜ ರಾಮಾಪುರೆ, ಸತೀಶ ನೆರ್ಲೇಕರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts