More

    ಕಿಕ್ ಬಾಕ್ಸಿಂಗ್​ ನಲ್ಲಿ ಭಟ್ಕಳ ವಿದ್ಯಾರ್ಥಿಗಳ ಸಾಧನೆ

    ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಿಕ್ ಬಾಕ್ಸಿಂಗ್​ನ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐದು ಚಿನ್ನದ ಪದಕ, ಮೂರು ಬೆಳ್ಳಿಯ ಪದಕ ಹಾಗೂ ಎರಡು ಕಂಚಿನ ಪದಕಗಳಿಸಿ, ಜಾರ್ಖಂಡ್​ನ ರಾಂಚಿಯಲ್ಲಿ ನಡೆಯುವ ನಡೆಯುವ ರಾಷ್ಟ್ರ ಮಟ್ಟದ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

    ಮೈಸೂರಿನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಾಕೋ ಕರ್ನಾಟಕ ಕಿಕ್ ಬಾಕ್ಸಿಂಗ್​ನಲ್ಲಿ ವಿದ್ಯಾರ್ಥಿಗಳು ೕ ಈ ಸಾಧನೆ ಮಾಡಿದ್ದಾರೆ.

    7-9 ವರ್ಷದ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ-19ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಮ್ಯೂಸಿಕಲ್ ಫಾಮ್ರ್ ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾಳೆ. ಆಧ್ಯಾ ರವಿ ನಾಯ್ಕ -22ಕೆಜಿ ವಿಭಾಗದ ಪಾಯಿಂಟ್ ಫೈಟಿಂಗ್ ನಲ್ಲಿ ಚಿನ್ನದ ಪದಕ ಹಾಗೂ ಕ್ರಿಯೇಟಿವ್ ಫಾಮ್ರ್ ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾಳೆ.

    10-12 ವರ್ಷದ ವಿಭಾಗದಲ್ಲಿ ಜೀವಲ್ ಭಾಸ್ಕರ ಮೊಗೇರ -28ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ ಹಾಗೂ ಮ್ಯೂಸಿಕಲ್ ಫಾಮ್ರ್ ನಲ್ಲಿ ಐದನೇ ಸ್ಥಾನ ಪಡೆದಿದ್ದಾನೆ. ಚಿರಾಗ್ ಮಹೇಶ ನಾಯ್ಕ -30ಕೆಜಿ ವಿಭಾಗದ ಪಾಯಿಂಟ್ ಫೈಟ್​ನಲ್ಲಿ ಕಂಚಿನ ಪದಕ ಹಾಗೂ ಕ್ರಿಯೇಟಿವ್ ಫಾಮ್ರ್ ನಲ್ಲಿ ನಾಲ್ಕನೇ ಸ್ಥಾನ. ಜುರಾರ ಲೌನಾ -42ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ. ಮೊಹಮ್ಮದ್ ದಾಮಿಲ್ +47ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

    13-15 ವರ್ಷದ ವಿಭಾಗದಲ್ಲಿ ಲಿಖಿತಾ ಶಂಕರ ನಾಯ್ಕ -47ಕೆಜಿ ಪಾಯಿಂಟ್ ಫೈಟ್ ಚಿನ್ನದ ಪದಕ, ಯಶಸ್ ವಾಮನ ಮೊಗೇರ -42ಕೆಜಿ ಪಾಯಿಂಟ್ ಫೈಟ್ ಐದನೇ ಸ್ಥಾನ ಲಿಖಿತ್ ಲಕ್ಷ್ಮಣ ದೇವಾಡಿಗ ಕ್ರಿಯೆಟಿವ್ ಫಾಮರ್್​ನಲ್ಲಿ ಕಂಚಿನ ಪದಕ ಹಾಗೂ ಪಾಯಿಂಟ್ ಫೈಟ್​ನಲ್ಲಿ ಐದನೇ ಸ್ಥಾನ. ಮೊಹಮ್ಮದ್ ಯುಶಾ -57ಕೆಜಿ ಪಾಯಿಂಟ್ ಫೈಟ್​ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts