More

    ಸಾಧನೆ ಗುರಿ, ಕಠಿಣ ಪ್ರಯತ್ನ ಮುಖ್ಯ

    ವಿಜಯಪುರ: ಯುಪಿಎಸ್​ಸಿ ಅಥವಾ ಶೈಕ್ಷಣಿಕ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಪಡೆಯಲು ರ್ನಿದಿಷ್ಟ ಗುರಿಯೊಂದಿಗೆ ನಿರಂತರ ಕಠಿಣ ಪ್ರಯತ್ನ ಅತ್ಯಗತ್ಯ ಎಂದು ಯುಪಿಎಸ್​ಸಿ ಪರೀಕ್ಷೆಯಲ್ಲಿ 641ನೇ ರ್ಯಾಂಕ್​ ಪಡೆದ ಸಂತೋಷ ಶಿರಡೋಣ ಹೇಳಿದರು.

    ಸೋಮವಾರ ನಗರದ ಕೆಎಸ್​ಆರ್​ಟಿಸಿ ಕಾಲನಿಯ ಎಕ್ಸಲಂಟ್​ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸೇತುಬಂಧ (ಬ್ರಿಜ್​ ಕೋರ್ಸ್​) ಆರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪಿಯು ಶಿಕ್ಷಣ ಪ್ರಮುಖವಾದ ಹಂತವಾಗಿದ್ದು, ಗುರುಗಳ ಮಾರ್ಗದರ್ಶನದೊಂದಿಗೆ ಉತ್ತಮ ಅಧ್ಯಯನವನ್ನು ಮಾಡಿ ಯಶಸ್ಸುಗಳಿಸಿ ಎಂದು ಸಲಹೆ ನೀಡಿದರು.

    ಸಾಮಾಜಿಕ ಜಾಲತಾಣ ಬಳಕೆ ಓದಿಗೆ ಮಾರಕವಾಗದಂತೆ ಜಾಗೃತೆ ವಹಿಸಿ. ಕಾಲೇಜಿನಲ್ಲಿ ಕಲಿತದದ್ದು ಸತತ ಪುನರಾವರ್ತನೆ ಮಾಡುತ್ತಿರಿ. ಶಿಕ್ಷಕರು, ಪಾಲಕರು ಹೇಳಿದ್ದನ್ನು ಗಮನವಿಟ್ಟು ಸಮಾಧಾನದಿಂದ ಕೇಳಿ. ವಿದ್ಯಾರ್ಥಿ ದೆಸೆಯಲ್ಲೇ ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಸಿದ್ಧಪಡಿಸಿ ರ್ಯಾಂಕ್​ ಬರುವಂತೆ ಸಿದ್ಧಪಡಿಸುತ್ತಿರುವ ಎಕ್ಸಲಂಟ್​ ಶಿಕ್ಷಣ ಸಂಸ್ಥೆಯಲ್ಲಿ ನೀವೆಲ್ಲ ಕಲಿಯಲು ಬಂದಿದ್ದು ನಿಮ್ಮ ಸೌಭಾಗ್ಯ. ನಾನೂ ಕೂಡ ಈ ಸಂಸ್ಥೆಯಲ್ಲಿ ಹಿಂದೆ ಕೋಚಿಂಗ್​ ಪಡೆದಿದ್ದೆ ಎಂದು ಹೆಮ್ಮೆಯಿಂದ ಹೇಳಿದರು.

    ಪಿಯುಸಿ ಕೆ&ಸಿಇಟಿ, ನೀಟ್​ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್​ ಬಂದಿದ್ದ ಎಕ್ಸಲಂಟ್​ ಕಾಲೇಜಿನ ಹಳೆಯ ವಿದ್ಯಾರ್ಥಿ ಡಾ. ಶ್ರೀಧರ ದೊಡಮನಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಬೇಕಾದರೆ ಶೈಕ್ಷಣಿಕ ವರ್ಷದ ಆರಂಭದಿಂದಲೇ ನಮ್ಮ ಪ್ರಯತ್ನ ಶುರುವಾಗಬೇಕು. ಬೋರ್ಡ್​ ಪರೀೆ ತಯಾರಿ ಜತೆಗೆ ವೃತ್ತಿಪರ ಕೋರ್ಸುಗಳ ತಯಾರಿ ಮಾಡಬೇಕು.

    ಎನ್​ಸಿಆರ್​ಟಿ ಪಠ್ಯ ರಾಷ್ಟ್ರಮಟ್ಟದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ತಯಾರಿಸುತ್ತಾರೆ. ಮೇಲ್ನೋಟಕ್ಕೆ ಇದು ಕಠಿಣವೆನಿಸಿದರೂ ಗುರುಗಳ ಮಾರ್ಗದರ್ಶನದಿಂದ ಯಶಸ್ಸು ಲಭಿಸಲು ಸಾಧ್ಯ ಎಂದು ಸಲಹೆ ನೀಡಿದರು.

    ಎಕ್ಸಲಂಟ್​ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್​. ಪ್ರಾಸ್ತಾವಿಕವಾಗಿ ಮಾತನಾಡಿದರು. ಯುಪಿಎಸ್​ಸಿ ಟಾಪರ್​ ಸಂತೋಷ ಶಿರಡೋಣ ಮತ್ತು ಡಾ. ಶ್ರೀಧರ ದೊಡಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿ ಅವರಿಗೆ ಚೈತನ್ಯ ತುಂಬಿದರು.

    ವಿದ್ಯಾರ್ಥಿನಿ ಆಕಾಂಕ್ಷಾ ಬಿ., ಪ್ರಾರ್ಥಿಸಿದರು. ಉಪನ್ಯಾಸಕಿ ಶ್ರದ್ಧಾ ಜಾಧವ ಸ್ವಾಗತಿಸಿದರು. ಉಪನ್ಯಾಸಕ ಎಂ.ಎಂ. ಮಲಘಾಣ ನಿರೂಪಿಸಿದರು. ಪರಶುರಾಮ ಭಾವಿಕಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts