More

    ಕಾಡುಹಂದಿ ಬೇಟೆಗಾರನ ಬಂಧನ

    ಶಿವಮೊಗ್ಗ: ತಂತಿ ಬೇಲಿಗೆ ವಿದ್ಯುತ್ ಹರಿಸಿ ಕಾಡುಹಂದಿ ಬೇಟೆಯಾಡಿ ಮಾಂಸ ಸಾಗಣೆ ಮಾಡಿದ ಆರೋಪದ ಮೇರೆಗೆ ಇಲ್ಲಿನ ಐವರ ವಿರá-ದ್ಧ ಪ್ರಕರಣ ದಾಖಲಿಸಿರá-ವ ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ಒಬ್ಬನನ್ನು ಬಂಧಿಸಿದ್ದಾರೆ.

    ಕಾರ್ಗಲ್​ನ ಮಣಿ (30) ಬಂಧಿತ ಆರೋಪಿ. ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜು, ತಿರುಮಲೈ, ಗೋವರ್ಧನ್ ಹಾಗೂ ಮೇಘರಾಜ್ ತಲೆತಪ್ಪಿಸಿಕೊಂಡಿದ್ದಾರೆ ಎಂದು ಆರ್​ಎಫ್​ಒ ಛಾಯಾ ತಿಳಿಸಿದ್ದಾರೆ.

    ಆರೋಪಿಗಳು ಸಮೀಪದ ಮಂಡವಳ್ಳಿ ಗ್ರಾಮದ ಗೋವರ್ಧನ್ ಎಂಬುವವರ ತೋಟದ ತಂತಿ ಬೇಲಿಗೆ ವಿದ್ಯುತ್ ನೀಡಿ ಕಾಡುಹಂದಿ ಬೇಟೆಯಾಗಿದ್ದರು. ಬಳಿಕ ಮಾಂಸವನ್ನು ತಿರುಮಲೈ ಮತ್ತು ತಾನು ಬೈಕ್​ನಲ್ಲಿ ಕಾರ್ಗಲ್​ನ ಭಾಗ್ಯ ಮಂದಿರ ಕಾಲನಿಗೆ ತಂದಿದ್ದಾಗಿ ಎಂದು ಆರೋಪಿ ತಿಳಿಸಿದ್ದಾನೆ. ಬುಧವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಭಾಗ್ಯ ಮಂದಿರ ಕಾಲನಿ ತೋಟದ ಮನೆಯೊಂದರ ಮೇಲೆ ದಾಳಿ ಮಾಡಿದ ಸಂದರ್ಭ ಮಣಿ ಎಂಬಾತ ಮಾತ್ರ ಸಿಕ್ಕಿ ಬಿದ್ದಿದ್ದು ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಆರೋಪಿಗಳಿಂದ ಅಂದಾಜು 40 ಕೆಜಿ ಮಾಂಸ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಎಸಿಎಂಫ್ ಎಂ.ಶ್ರೀಧರ್ ಮಾರ್ಗದರ್ಶನದಲ್ಲಿ ಆರ್​ಎಫ್​ಒ ಛಾಯಾ, ಡಿಆರ್​ಎಫ್​ಒ ಮೈಲಾರಪ್ಪ, ಪ್ರಮೋದ್, ಗಾರ್ಡ್​ಗಳಾದ ಇರ್ಫಾನ್, ವಿಶಾಲಾಕ್ಷಿ, ಹನುಮಕ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts