More

    ಲೆಕ್ಕಪತ್ರ ನಿರ್ವಹಣೆಯು ಪ್ರಥಮ ಆದ್ಯತೆಯಾಗಲಿ

    ಹುಬ್ಬಳ್ಳಿ: ವ್ಯಾಪಾರೋದ್ಯಮದಲ್ಲಿ ಮಾರಾಟ, ಖರೀದಿಗಿಂತ ಲೆಕ್ಕ ನಿರ್ವಹಣೆಯು ಮೊದಲ ಆದ್ಯತೆಯಾಗಬೇಕು. ಕೊನೆಯ ಕ್ಷಣದಲ್ಲಿ ಲೆಕ್ಕಪತ್ರ ನಿರ್ವಹಣೆಯು ಸಮಂಜಸ ಕ್ರಮವಲ್ಲ ಎಂದು ಲೆಕ್ಕ ಪರಿಶೋಧಕ ಗಿರೀಶ ಉಪಾಧ್ಯಾಯ ಹೇಳಿದರು.

    ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ‘ತೆರಿಗೆ ನವೀಕರಣ ಹಾಗೂ ಭಾರತ- ಚೀನಾ ರಪ್ತು ಅವಕಾಶಗಳು’ ಕುರಿತು ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ನೇರ ತೆರಿಗೆ ವಿಷಯವಾಗಿ ಮಾತನಾಡಿದರು.

    ವ್ಯಾಪಾರೋದ್ಯಮಿಗಳು ನಿಯಮಿತವಾಗಿ ಲೆಕ್ಕಪತ್ರ ನಿರ್ವಹಣೆಯ ಬಗ್ಗೆ ಗಮನ ಹರಿಸುವುದಿಲ್ಲ. ಹಣಕಾಸು ವರ್ಷದ ಕೊನೆಯಲ್ಲಿ ಲೆಕ್ಕಪತ್ರದ ಬಗ್ಗೆ ಗಮನ ಹರಿಸುತ್ತಾರೆ. ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಪ್ರತಿ ತ್ರೖೆಮಾಸಿಕಕ್ಕೆ ಅನುಗುಣವಾಗಿ ಮುಂಗಡವಾಗಿ ಆದಾಯ ತೆರಿಗೆ ಪಾವತಿಸುವ ಉತ್ತಮ ಅವಕಾಶವನ್ನು ವ್ಯಾಪಾರೋದ್ಯಮಿಗಳು ಬಳಸಿಕೊಳ್ಳಬೇಕು. ಇದರಿಂದ ವರ್ಷವೀಡಿ ನೆಮ್ಮದಿಯಿಂದ ವ್ಯಾಪಾರ-ವಹಿವಾಟು, ಉದ್ಯಮವನ್ನು ನಡೆಸಬಹುದು ಎಂದು ಹೇಳಿದರು.

    ಆದಾಯ ತೆರಿಗೆ ಪಾವತಿ ಮತ್ತು ರಿಫಂಡ್ ವ್ಯವಸ್ಥೆಯು ಇಂದು ಮುಖ ರಹಿತ (ಫೇಸ್ ಲೆಸ್) ಉಪಕ್ರಮವನ್ನು ಹೊಂದಿದೆ. ಮುಂದೆ ಕೃತಕ ಬುದ್ಧಿಮತ್ತೆ (ಐಎ) ವ್ಯವಸ್ಥೆಯು ಬಳಕೆಗೆ ಬರಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ಬಳಿಕ ಐಎ ಪರಿಶೋಧನೆಗೆ ಒಳಪಡಲಿದೆ. ಆಧಾರ್-ಪ್ಯಾನ್ ಕಾರ್ಡ್ ಜೋಡಣೆಯು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ವಿವರಿಸಿದರು.

    ಜಿಎಸ್​ಟಿ ಬಗ್ಗೆ ಲೆಕ್ಕ ಪರಿಶೋಧಕ ಕಪೀಲ ಭಂಡಾರಕರ್ ಹಾಗೂ ಉದ್ಯಮಿ ಬಸವರಾಜ ಉಳ್ಳಾಗಡ್ಡಿ ಮಾತನಾಡಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ ಅಗಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts