ಇಟ್ಟಿಗೆ ಸೀಗೋಡಲ್ಲಿ ಸಂಭ್ರಮದ ನೇಮೋತ್ಸವ

kola

ಬಾಳೆಹೊನ್ನೂರು: ಇಟ್ಟಿಗೆ ಸೀಗೋಡಿನ ಬ್ರಹ್ಮರಗುಂಡ ದೇವಸ್ಥಾನ ಸಮಿತಿಯಿಂದ ಬ್ರಹ್ಮರಗುಂಡ ದೈವಗಳ ಹಾಗೂ ಮಹಾಕಾಳಿ ದೇವಾಲಯದ ದೈವಗಳ ನೇಮೋತ್ಸವ (ಕೋಲ) ಶನಿವಾರದಿಂದ ಸೋಮವಾರದವರೆಗೆ ವಿಜೃಂಭಣೆಯಿಂದ ನಡೆಯಿತು.
ಶನಿವಾರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಭಂಡಾರ ಇಳಿದು ಧರ್ಮರಸು, ಮಹಾಕಾಳಿ ನೇಮೋತ್ಸವ ಸಂಪ್ರದಾಯಬದ್ಧವಾಗಿ ಜರುಗಿತು.
ಭಾನುವಾರ ಎಡ್ಮೂರ ಮಯಕಾರ ಮತ್ತು ತನಿಮನಿಗ ದೈವಗಳ ನೇಮೋತ್ಸವ, ಸೋಮವಾರ ಕೊರಗಜ್ಜ ದೈವ ಹಾಗೂ ಅಲೇರ ಪಂಜುರ್ಲಿ ದೈವದ ನೇಮೋತ್ಸವವು ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ನಡೆಯಿತು.
ಮೂರು ದಿನಗಳ ಕಾಲ ನಡೆದ ದೈವಗಳ ನೇಮೋತ್ಸವದಲ್ಲಿ ವಿವಿಧ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದಿದ್ದು ದೈವಗಳಿಂದ ಭಕ್ತರಿಗೆ ಹೇಳಿಕೆ ಕೇಳಿಕೆ, ಭಕ್ತರಿಂದ ಹರಕೆ ಸಲ್ಲಿಕೆ ಮುಂತಾದವು ನಡೆದವು. ಮೂರು ದಿನಗಳ ಪರ್ಯಂತ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ನೇಮೋತ್ಸವದಲ್ಲಿ ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಇಟ್ಟಿಗೆ, ಶಿವನಗರ, ಸೀಗೋಡು, ಆದರ್ಶನಗರ, ಸಿಆರ್‌ಎಸ್, ದೇವಗೋಡು, ಹೇರೂರು, ಪೇಟೆಕೆರೆ, ಬನ್ನೂರು, ಕಡ್ಲೇಮಕ್ಕಿ, ಅಕ್ಷರನಗರ, ರಂಭಾಪುರಿ ಮಠ, ಮೆಣಸುಕೊಡಿಗೆ ಮುಂತಾದ ಕಡೆಗಳ ಭಕ್ತರು ಭಾಗವಹಿಸಿದ್ದರು.

Share This Article

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…