More

    ರಾಜ್ಯದಲ್ಲಿ ಅಪಘಾತ ಸಂಖ್ಯೆ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದ ಅಪಘಾತಗಳ ಸಂಖ್ಯೆ 2019ರಲ್ಲಿ ಇಳಿಕೆಯಾಗಿದೆ. ಕೇಂದ್ರ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಂತೆ ರಾಜ್ಯದಲ್ಲಿ 2018ಕ್ಕಿಂತ 1,049 ಕಡಿಮೆ ಅಪಘಾತವಾಗಿದೆ. ಆಮೂಲಕ ದೇಶದ ಅಪಘಾತ ಪಟ್ಟಿಯಲ್ಲಿ ರಾಜ್ಯ 5ನೇ ಸ್ಥಾನಕ್ಕೆ ಕುಸಿದಿದೆ.

    ಅಪಘಾತಗಳ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮ ಕೈಗೊಳ್ಳುತ್ತಿದ್ದರೂ, ಅದನ್ನು ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಪಘಾತ ತಡೆ ಹಾಗೂ ಸಾರಿಗೆ ನಿಯಮ ಪಾಲನೆಗಾಗಿ ದುಬಾರಿ ದಂಡದ ಪ್ರಯೋಗವನ್ನು ಮಾಡಲಾಗಿದೆ. ಅದರೂ, ನಿಯಮ ಉಲ್ಲಂನೆ, ಅಪಘಾತಗಳ ಸಂಖ್ಯೆ ಕಡಿಮೆಯಾಗಿಲ್ಲ. ಆದರೆ, ಕರ್ನಾಟಕದ ಮಟ್ಟಿಗೆ ಹಲವು ಕಟ್ಟುನಿಟ್ಟಿನ ಕ್ರಮಗಳು ಕೊಂಚ ನಿರಾಳತೆಯನ್ನುಂಟು ಮಾಡಿದ್ದು, 2018ಕ್ಕೆ ಹೋಲಿಸಿದರೆ 2019ರಲ್ಲಿ ಅಪಘಾತ, ಅದರಿಂದ ಸಾವನ್ನಪು$್ಪವವರ ಸಂಖ್ಯೆ ಕಡಿಮೆಯಾಗಿದೆ. 2018ರಲ್ಲಿ 41,707 ಅಪಘಾತಗಳಾಗಿದ್ದವು. ಅದೇ 2019ರಲ್ಲಿ 40,658 ರಸ್ತೆ ಅಪಘಾತ ದಾಖಲಾಗಿದೆ.

    ರಾಜ್ಯಕ್ಕೆ 5ನೇ ಸ್ಥಾನ: ಕಳೆದ ಬಾರಿ ಅಪಘಾತಗಳ ಸಂಖ್ಯೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಅಪಘಾತ ಕಡಿಮೆಯಾದ ಕಾರಣ 5ನೇ ಸ್ಥಾನಕ್ಕೆ ಕುಸಿದಿದೆ. ಮೊದಲ ಸ್ಥಾನದಲ್ಲಿ ತಮಿಳುನಾಡು ಇದೆ. ಅದೇ ರೀತಿ ಕ್ರಮವಾಗಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಕೇರಳ ರಾಜ್ಯಗಳು ನಂತರದ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.

    32 ಸಾವು ಕಡಿಮೆ: ಅಪಘಾತಗಳ ಸಂಖ್ಯೆಯಷ್ಟೇ ಅಲ್ಲದೆ, ಅದರಿಂದ ಸಾವನ್ನಪು$್ಪವವರ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಅದರಂತೆ 2018ರಲ್ಲಿ 10,990 ಜನರು ಅಪಘಾತಗಳಿಂದ ಮರಣ ಹೊಂದಿದ್ದರು. ಅದನ್ನು ಗಮನಿಸಿದರೆ ಪ್ರತಿ 100 ಅಪಘಾತಗಳಲ್ಲಿ 27 ಜನರು ಮರಣ ಹೊಂದಿರುವುದು ದಾಖಲಾಗಿದೆ. ಅದೇ 2019ರಲ್ಲಿ ಆ ಸಂಖ್ಯೆ 10958ಕ್ಕೆ ಇಳಿದಿದೆ. ಅದೇ ರೀತಿ ಗಾಯಗೊಂಡವರ ಸಂಖ್ಯೆ 2018ರಲ್ಲಿ 51,562 ಇದ್ದರೆ, 2019ರಲ್ಲಿ 50,447ಕ್ಕಿಳಿದಿದೆ. ಗಂಭೀರ ಗಾಯಗೊಂಡವರ ಸಂಖ್ಯೆ 2018ರಲ್ಲಿ 10,093 ಇದ್ದರೆ, 2019ರಲ್ಲಿ 10,060 ಕುಸಿದಿದೆ.

    ಇತರ ರಸ್ತೆಗಳಲ್ಲೇ ಹೆಚ್ಚು ಅಪಘಾತ:
    ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಿಗಿಂತ ಇತರ ರಸ್ತೆಗಳಲ್ಲಿಯೇ ಹೆಚ್ಚಿನ ಅಪಘಾತವಾಗಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ 13,363 ಮತ್ತು ರಾಜ್ಯ ಹೆದ್ದಾರಿಯಲ್ಲಿ 10,446 ಅಪಘಾತ ಸಂಭವಿಸಿದೆ. ಅದೇ ಇತರ ರಸ್ತೆಗಳ ಪೈಕಿ 16,849 ಅಪಘಾತ ಉಂಟಾಗಿದೆ.

    ದ್ವಿಚಕ್ರದಿಂದ ಹೆಚ್ಚು ಅಪಘಾತ:
    ಅಪಘಾತಕ್ಕೀಡಾದವರ ಪೈಕಿ ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿದ್ದಾರೆ. 15,549 ದ್ವಿಚಕ್ರ ಸವಾರರು, 6,654 ಪಾದಚಾರಿಗಳು, 7,879 ಕಾರು ಸೇರಿ ಇನ್ನಿತರ ಲು ಮೋಟಾರು ವಾಹನ ಸವಾರರು, 208 ಸೈಕಲ್​ ಸವಾರರು ಅಪಘಾತಕ್ಕೀಡಾಗಿದ್ದಾರೆ. ಉಳಿದಂತೆ ಲಾರಿ, ಬಸ್​, ಮೋಟಾರು ರಹಿತ ವಾಹನಗಳು ಹೀಗೆ ಹಲವು ಬಗೆಯ ವಾಹನಗಳು ಅಪಘಾತಕ್ಕೀಡಾಗಿವೆ.

    ಬೆಳಕಿರುವಾಗಲೇ ಅಪಘಾತ: ಮಳೆ ಅಥವಾ ಮೋಡ ಮುಸುಕಿದ ವಾತಾವರಣಕ್ಕಿಂತ ಬೆಳಕು ಉತ್ತಮವಾಗಿದ್ದಾಗಲೇ ಅಪಘಾತ ಹೆಚ್ಚಾಗಿ ಆಗಿದೆ. ಅದರಂತೆ 35,753 ಅಪಘಾತಗಳು ಉತ್ತಮ ಬೆಳಕಿದ್ದಾಗ ಸಂಭವಿಸಿವೆ. ಮಳೆಗಾಲದಲ್ಲಿ 3,181, ಮಂಜು ಮುಸುಕಿದ ವಾತಾವರಣದಲ್ಲಿ 1,654 ಹಾಗೂ ಆಲಿಕಲ್ಲು ಮಳೆಯಾಗುವಾಗ 70 ಅಪಘಾತ ಉಂಟಾಗಿದೆ.

    ಬೆಂಗಳೂರಿಗೆ 3ನೇ ಸ್ಥಾನ: 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ನಗರಗಳ ಪೈಕಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಚೆನ್ನೆ ಮತ್ತು ಎರಡನೇ ಸ್ಥಾನದಲ್ಲಿ ದೆಹಲಿ ಪಡೆದುಕೊಂಡಿವೆ. ಬೆಂಗಳೂರಿನಲ್ಲಿ 2019ರಲ್ಲಿ 4,684 ಅಪಘಾತ ಸಂಭವಿಸಿದ್ದು, 768 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ 4,250 ಜನರು ಗಾಯಗೊಂಡಿದ್ದಾರೆ. ಅದರಲ್ಲಿ ಸಾವಿನ ಸಂಖ್ಯೆಯಲ್ಲಿ ದೇಶದಲ್ಲಿ 4ನೇ ಸ್ಥಾನದಲ್ಲಿದ್ದರೆ, ಗಾಯಗೊಂಡವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts