More

    ಹಳೇ ಪಿ.ಬಿ ರಸ್ತೆಯಲ್ಲಿ ಹೆಚ್ಚುತ್ತಿವೆ ಅಪಘಾತ

    ರಾಣೆಬೆನ್ನೂರ: ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಹಳೆ ಪಿ.ಬಿ. ರಸ್ತೆಯನ್ನು ಚತುಷ್ಪಥವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಗುತ್ತಿಗೆದಾರರ ಎಡವಟ್ಟು ಮತ್ತು ಸಂಚಾರ ನಿಯಮ ಉಲ್ಲಂಘನೆಯಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ.

    ನಗರದಿಂದ ಹರಿಹರಕ್ಕೆ ಸಂಪರ್ಕ ಕಲ್ಪಿಸುವ ಹಳೆ ಪಿ.ಬಿ. ರಸ್ತೆಯನ್ನು ಅಭಿವೃದ್ಧಿ ಪಡಿಸಿ ಮೂರು ತಿಂಗಳು ಕಳೆದಿದೆ. ನಗರದ ಹೊರವಲಯದ ಹೊಸ ಎಲ್​ಐಸಿ ಹಾಗೂ ನೇಕಾರ ಕಾಲನಿ ಮಧ್ಯದ ರಸ್ತೆಯಲ್ಲಿ ಒಂದೂವರೆ ತಿಂಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಮೂವರು ಬೈಕ್ ಸವಾರರು ಪ್ರಾಣ ಕಳೆದುಕೊಂಡಿದ್ದರೆ, ಕೆಲವರು ಗಾಯಗೊಂಡಿದ್ದಾರೆ.

    ವಾಹನ ಸವಾರರು ನಿಯಮ ಪಾಲಿಸದಿರುವುದು ಅಪಘಾತಕ್ಕೆ ಒಂದು ಕಾರಣವಾಗಿದ್ದರೆ, ರಸ್ತೆ ನಿರ್ವಿುಸಿದ ಗುತ್ತಿಗೆದಾರರು ಸಂಚಾರಕ್ಕೆ ಸಂಬಂಧಿಸಿ ಸೂಚನಾ ಫಲಕ ಅಳವಡಿಸದಿರುವುದು ಮತ್ತೊಂದು ಪ್ರಮುಖ ಕಾರಣ. ಎಲ್ಲ ಸರ್ವಿಸ್ ರಸ್ತೆಗಳಿಗೂ ಚತುಷ್ಪಥದಲ್ಲಿ ತಿರುವುಗಳನ್ನು ನಿರ್ವಿುಸಲಾಗಿದೆ. ನಿತ್ಯವೂ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ರಸ್ತೆ ತಿರುವು ಇದ್ದಲ್ಲಿ, ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ, ಶಾಲಾ-ಕಾಲೇಜ್ ಇರುವಲ್ಲಿ ಗುತ್ತಿಗೆದಾರರು ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಹೀಗಾಗಿ ಕಾರು, ಬಸ್ ಹಾಗೂ ಲಾರಿ ಚಾಲಕರು ಪಿ.ಬಿ. ರಸ್ತೆ ಎಂದುಕೊಂಡು ಅತೀ ವೇಗದಲ್ಲಿ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಇದರ ಅರಿವಿಲ್ಲದ ಬೈಕ್ ಸವಾರರು ಸರ್ವಿಸ್ ರಸ್ತೆಯಿಂದ ಏಕಾಏಕಿ ಪಿ.ಬಿ. ರಸ್ತೆಗೆ ನುಗ್ಗುತ್ತಿರುವುದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ.

    ಸೂಕ್ತ ವ್ಯವಸ್ಥೆ ಮರೀಚಿಕೆ: ಹಳೇ ಪಿ.ಬಿ. ರಸ್ತೆಯ ಯಾವ ಭಾಗದಲ್ಲೂ ವಾಹನ ರ್ಪಾಂಗ್ ವ್ಯವಸ್ಥೆಯಿಲ್ಲ. ರಸ್ತೆಯುದ್ದಕ್ಕೂ ಬ್ಯಾಂಕ್, ಬಾರ್ ಆಂಡ್ ರೆಸ್ಟೊರೆಂಟ್, ಹೋಟೆಲ್, ವಸತಿಗೃಹಗಳಿವೆ. ಆದರೆ, ಯಾವ ಕಟ್ಟಡಕ್ಕೂ ರ್ಪಾಂಗ್ ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲ ವಾಹನಗಳನ್ನು ರಸ್ತೆಯಲ್ಲೆ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಗೆ ಸೂಕ್ತ ಸೂಚನಾ ಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಸಂಚಾರ ಠಾಣೆ ಪೊಲೀಸರು ರಸ್ತೆಯುದ್ದಕ್ಕೂ ಸೂಕ್ತ ರ್ಪಾಂಗ್ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳ ವೇಗವನ್ನು 40 ಕಿ.ಮೀ.ಗೆಸೀಮಿತಗೊಳಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ಹಳೇ ಪಿ.ಬಿ. ರಸ್ತೆ ಮೂಲಕ ನಡೆದುಕೊಂಡು ಹೋಗಲು ಭಯವಾಗುತ್ತದೆ. ವಾಹನ ಸವಾರರು ಮನಬಂದಂತೆ ಓಡಿಸುವ ಕಾರಣ ಅಪಘಾತಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
    | ಇಂದಿರಾ ಹಲಗೇರಿ ಕಾನೂನು ವಿದ್ಯಾರ್ಥಿನಿ


    ಪಿ.ಬಿ. ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಿರುವ ಕಾರಣ ಸುರಕ್ಷತೆ ಕ್ರಮ ಕೈಗೊಳ್ಳಲು ಈಗಾಗಲೇ ಸಿಬ್ಬಂದಿಗೆ ಸೂಚಿಸಿದ್ದೇನೆ. ರಸ್ತೆ ವಿಭಜಕದ ತಿರುವುಗಳಲ್ಲಿ ಸೂಚನಾ ಫಲಕ ಅಳವಡಿಸಲು ಸಂಬಂಧಿಸಿದ ಇಲಾಖೆಯವರಿಗೆ ತಿಳಿಸಲಾಗುವುದು. ಜನ ಕೂಡ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು.
    | ಟಿ.ವಿ. ಸುರೇಶ ಡಿವೈಎಸ್ಪಿ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts