More

  ಸಂಘಟನೆಯಿಂದ ಆರ್ಥಿಕ ಸಬಲೀಕರಣ

  ಅಳವಂಡಿ: ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಬಲೀಕರಣಗೊಳಿಸುವುದು ಸಂಜೀವಿನಿ ಸಂಸ್ಥೆಯ ಉದ್ದೇಶ ಎಂದು ಸಂಜೀವಿನಿ ಸಂಘದ ಸುಗಮಗಾರರಾದ ಅನ್ನಪೂರ್ಣಾ ತಿಳಿಸಿದರು.

  ಸಮೀಪದ ಹಟ್ಟಿ ಗ್ರಾಮದಲ್ಲಿ ತಾಪಂ, ತಾಲೂಕು ಅಭಿಯಾನ ನಿರ್ವಹಣಾ ಘಟಕ, ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕನಕಜ್ಯೋತಿ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಗ್ರಾಪಂ ಮಟ್ಟದ ಒಕ್ಕೂಟದ ದೂರದೃಷ್ಟಿ ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆಯ ತಯಾರಿಕಾ ಕಾರ್ಯಾಗಾರ ಉದ್ದೇಶಿಸಿ ಬುಧವಾರ ಮಾತನಾಡಿದರು.

  ಬಡ ಮಹಿಳೆಯನ್ನು ಸಂಘಟನೆ ವ್ಯಾಪ್ತಿಗೆ ತಂದು ಉದ್ಯೋಗಾವಕಾಶ ಕಲ್ಪಿಸಿ ಮಾರುಕಟ್ಟೆ ಸೌಲಭ್ಯ ನೀಡುವುದು ಮತ್ತು ಆ ಮೂಲಕ ಕುಟುಂಬದ ಆದಾಯದಲ್ಲಿ ಗಮನಾರ್ಹ ಪ್ರಗತಿ ಕಾಣುವುದು, ಆಸ್ತಿ ಸೃಜನೆಗೆ ಒತ್ತು ನೀಡಿ ಸುಸ್ಥಿರ ಅಭಿವೃದ್ಧಿ ಸಾಧಿಸುವುದು, ಸೌಲಭ್ಯಗಳು ಕಟ್ಟ ಕಡೆಯ ವ್ಯಕ್ತಿಯೂ ತಲುಪುವಂತೆ ಮಾಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

  ಒಕ್ಕೂಟದ ಅಧ್ಯಕ್ಷೆ ದುರುಗವ್ವ, ಉಪಾಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಗಂಗಮ್ಮ, ಸಹ ಕಾರ್ಯದರ್ಶಿ ದೇವಮ್ಮ, ಖಜಾಂಚಿ ಸಾವಿತ್ರಿ, ಎಂಬಿಕೆ ಭಾರತಿ ನಾಗಣ್ಣ, ಎಲ್‌ಸಿಆರ್‌ಪಿ ರೇಖಾ ವಾಲಿಕಾರ, ವಿಜಯಲಕ್ಷ್ಮೀ ಮೇಗಳಮನಿ, ಕೃಷಿ ಸಖಿ ಇಮಾಂಬಿ ಹಾಗೂ ಸಂಘದ ಸದಸ್ಯೆಯರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts