More

    3 ವರ್ಷದಲ್ಲಿ 5 ಸಲ ರೇಡ್ ಆಗಿದೆ; ನಾವು ಆತ್ಮಹತ್ಯೆ ಮಾಡಿಕೊಳ್ಳೋ ಸ್ಥಿತಿಯಲ್ಲಿದ್ದೀವಿ!

    ನೆಲಮಂಗಲ: ನಮ್ಮ ಮನೆಯ ಮೇಲೆ ಇವತ್ತು ನಡೆದ ಎಸಿಬಿ ಅಧಿಕಾರಿಗಳ ದಾಳಿಯ ಹಿಂದೆ ರಾಜಕೀಯ ಕುಮ್ಮಕ್ಕು ಇದೆ. ಕೇವಲ 3 ವರ್ಷಗಳಲ್ಲಿ ನಾಲ್ಕೈದು ಬಾರಿ ದಾಳಿ ಮಾಡಿದರೆ ನಮ್ಮ ಗತಿ ಏನಾಗಬೇಕು? ನಾವು ಈಗ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಂದಿಟ್ಟಿದ್ದಾರೆ.

    ಎಸಿಬಿ ದಾಳಿ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದವರು ಸಕಾಲ ಆಡಳಿತಾಧಿಕಾರಿ ಎಲ್.ಸಿ. ನಾಗರಾಜ್ ಅವರ ಪತ್ನಿ ನಾಗರತ್ನಾ. ಮಧುಗಿರಿ ಕಡೆಯ ರಾಜಕಾರಣಿಗಳ ಕೈವಾಡ-ಕುಮ್ಮಕ್ಕಿನಿಂದಾಗಿ ಎಸಿಬಿ ಅಧಿಕಾರಿಗಳು ನಮ್ಮ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಲ್ಲಿ ಮಾತ್ರವಲ್ಲ, ನನ್ನ ಸಂಬಂಧಿಕರ ಮನೆ ಮೇಲೂ ದಾಳಿ ಮಾಡಿದ್ದಾರೆ. ನನ್ನ ತಾಯಿಗೆ ಹಾರ್ಟ್ ಅಟ್ಯಾಕ್ ಆಗಿ ಹಾಸಿಗೆ ಹಿಡಿದಿದ್ದಾರೆ. ಅವರ ಮನೆಗೂ ಹೋಗಿ ಅವರನ್ನು ಹೊರಗೆ ಕೂರಿಸಿ ಒಳಗೆ ತಪಾಸಣೆ ಮಾಡಿದ್ದಾರೆ.

    ನಮ್ಮ ಅಣ್ಣನ ಮನೆಯಲ್ಲಿ ಮದುವೆ ಇದೆ ಅವರ ಮನೆಯಲ್ಲೂ ಹೀಗೇ ಮಾಡಿದ್ದಾರೆ. ಇವರ ಇಂತಹ ವರ್ತನೆಯಿಂದ ನಮ್ಮ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಿ ಬೇರೆಯವರಿಗೆ ಮುಖ ತೋರಿಸುವುದಕ್ಕೂ ಅಂಜುತ್ತಿದ್ದಾರೆ ಎಂದು ನಾಗರತ್ನಾ ವಿವರಿಸಿದರು.

    ನಮ್ಮ ಮದುವೆ ವೇಳೆ ತಂದೆ ದಾನವಾಗಿ ಕೊಟ್ಟ ಎಂಟು ಎಕರೆ ಜಮೀನಿತ್ತು. ಅದನ್ನೇ ಲೇಔಟ್ ಮಾಡಿ, ಮಾರಿದ್ದೇವೆ. ಆ ಹಣದಲ್ಲಿ ಫ್ಲೋರಿಕಲ್ಚರ್ ಶುರು ಮಾಡಿದ್ದೇವೆ. ದಾಳಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಸಿಕ್ಕಿದ್ದು ಕೇವಲ ನೂರು ಗ್ರಾಂ ಬಂಗಾರ. ಕೇಜಿಗಟ್ಟಲೇ ಸಿಕ್ಕಿತು ಅನ್ನುವಂತೆ ಬಿಂಬಿಸುತ್ತಿದ್ದಾರೆ. ಲೋಹದ ಪಾತ್ರೆಗಳನ್ನೂ ಬೆಳ್ಳಿ ಪಾತ್ರೆಗಳು ಅಂತ ಬರೆದುಕೊಂಡಿದ್ದರು. ನಾನು ಗಲಾಟೆ ಮಾಡಿ ಸರಿ ಮಾಡಿಸಿದ್ದೇನೆ. ಇದನ್ನೆಲ್ಲ ನೋಡಿದರೆ ಅವರಿಗೆ ನಮ್ಮ ವಿರುದ್ಧ ಯಾವುದೋ ದ್ವೇಷ ಇದ್ದಂತೆ ಕಾಣುತ್ತದೆ. ರಾಜಕಾರಣಿಗಳು ಯಾರೋ ಹೇಳಿ ಕಳಿಸಿ ಮಾಡಿಸುತ್ತಿದ್ದಾರೆ ಎನ್ನಿಸುತ್ತಿದೆ ಎಂದು ಹೇಳಿದರು.

    ಮೇಕೆ ಕಳ್ಳರಿಂದ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣ: ಬಂಧಿತ ಮೂವರಲ್ಲಿ ಇಬ್ಬರ ವಯಸ್ಸು 9 ಮತ್ತು 14

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts