More

    10 ಲಕ್ಷ ರೂ. ಲಂಚ ಪಡೆದ ಆರೋಪದ ಮೇರೆಗೆ ಇನ್ಸ್​ಪೆಕ್ಟರ್​ ವಿರುದ್ಧ ಎಫ್​ಐಆರ್​

    ಬೆಂಗಳೂರು: ಹತ್ತು ಲಕ್ಷ ರೂಪಾಯಿ ಲಂಚ ಪಡೆದಿದ್ದ ಆರೋಪದ ಮೇಲೆ ಪೊಲೀಸ್ ಇನ್​​ಸ್ಪೆಕ್ಟರ್​ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಬೆಂಗಳೂರಿನ ಇಂದಿರಾನಗರ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ರಾಮಮೂರ್ತಿ ವಿರುದ್ಧ ಎಸಿಬಿಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಎಸಿಬಿ ಅಧಿಕಾರಿಗಳಿಂದ ತನಿಖೆ ಮುಂದುವರಿದಿದೆ.

    ಇಂದಿರಾನಗರ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ಅವರು ನೀಡಿದ್ದ ದೂರಿನ ಮೇರೆಗೆ ಎಸಿಬಿಯಲ್ಲಿ ಈ ಎಫ್​ಐಆರ್ ದಾಖಲಾಗಿದೆ. ಇಂದಿರಾನಗರ ಕ್ಲಬ್ ಸದಸ್ಯ ರಾಮ್​ಮೋಹನ್ ಅವರು ಲಾಕ್​ಡೌನ್​ ಸಂದರ್ಭದಲ್ಲಿ ಅತಿಕ್ರಮವಾಗಿ ಕ್ಲಬ್​ಗೆ ಪ್ರವೇಶಿಸಿದ್ದು, ಆಗ ಅದನ್ನು ಪ್ರಶ್ನಿಸಿದ್ದ ಸೆಕ್ಯುರಿಟಿ ಗಾರ್ಡ್​ಗೆ ಕೊಲೆ ಬೆದರಿಕೆ ಹಾಕಿದ್ದರು.

    ಇದನ್ನೂ ಓದಿ: ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…

    ಸೆಕ್ಯುರಿಟಿ ಗಾರ್ಡ್​ಗೆ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕ್ಲಬ್​ ಕಾರ್ಯದರ್ಶಿ ನಾಗೇಂದ್ರ ಅವರು ರಾಮ್​ಮೋಹನ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಆಗ ಪ್ರಕರಣ ದಾಖಲಿಸಿಕೊಂಡಿದ್ದ ಇನ್​ಸ್ಪೆಕ್ಟರ್ ರಾಮಮೂರ್ತಿ, ಸೂಕ್ತ ತನಿಖೆ ನಡೆಸದೆ ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಅಲ್ಲದೆ ಬಿ-ರಿಪೋರ್ಟ್ ಸಲ್ಲಿಸುವ ಸಂಬಂಧ ರಾಮ್​ಮೋಹನ್​ರಿಂದ 10 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಇನ್​ಸ್ಪೆಕ್ಟರ್ ವಿರುದ್ಧ ನಾಗೇಂದ್ರ ಎಸಿಬಿಗೆ ದೂರು ನೀಡಿದ್ದರು. ಈ ದೂರನ್ನು ಪರಿಶೀಲಿಸಿದ ಎಸಿಬಿ ಅಧಿಕಾರಿಗಳು ಇನ್​ಸ್ಪೆಕ್ಟರ್ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

    Video | ಕಲ್ಯಾಣಮಂಟಪದಲ್ಲೇ ಕೈ ಎತ್ತಿದ ಮದುಮಗ, ಬಿದ್ದುಬಿದ್ದು ನಕ್ಕಳು ಮದುಮಗಳು; ಎಲ್ಲದಕ್ಕೂ ಕಾರಣನು ಅವನು…

    ಕತ್ತರಿಸಿದ ಗಾಯಕ್ಕೂ ಇನ್ನು ಹೊಲಿಗೆ ಬೇಕಾಗಿಲ್ಲ; ಸಜ್ಜಾಗಿದೆ ಗಾಯ ಮಾಯವಾಗಿಸೋ ಅಂಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts