More

    ಎಸಿಬಿ ದಾಳಿ ಮುಕ್ತಾಯ: ಕೆಎಎಸ್​ ಅಧಿಕಾರಿ ಸುಧಾ ಮನೆಯಿಂದ ಎಸಿಬಿ ಅಧಿಕಾರಿಗಳು ಹೊತ್ತೊಯ್ದಿದ್ದೇನು?

    ಬೆಂಗಳೂರು: ಕೆಎಎಸ್​ ಅಧಿಕಾರಿ ಸುಧಾರ ನಿವಾಸದ ಮೇಲೆ ನಡೆದ ಎಸಿಬಿ ದಾಳಿ ಮುಕ್ತಾಯಗೊಂಡಿದ್ದು, ಮನೆಯಲ್ಲಿ ಸಿಕ್ಕ ಬಂಗಾರ, ನಗದು ಹಾಗೂ ಆಸ್ತಿ ದಾಖಲೆ ಪತ್ರಗಳ ಪಂಚನಾಮೆ ಮುಗಿಸಿ ಅಧಿಕಾರಿಗಳು ಹೊರಟಿದ್ದಾರೆ.

    ಅಧಿಕಾರಿಗಳ ಶೋಧ ಕಾರ್ಯ ನಡುವೆ ಎಸಿಬಿ ಐಜಿಪಿ ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಕೆಲ ಮಾಹಿತಿ ನೀಡಿದರು. ಎಸಿಬಿ ದಾಳಿ ಮುಕ್ತಾಯ: ಕೆಎಎಸ್​ ಅಧಿಕಾರಿ ಸುಧಾ ಮನೆಯಿಂದ ಎಸಿಬಿ ಅಧಿಕಾರಿಗಳು ಹೊತ್ತೊಯ್ದಿದ್ದೇನು?ಇಂದು ಕೆಎಎಸ್​ ಅಧಿಕಾರಿ ಸುಧಾರ ಮನೆ ಮೇಲೆ ದಾಳಿ ಮಾಡಿದ್ದೇವೆ. ಸುಧಾ ಅವರು ಬಿಡಿಎನಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದಾರೆ. ಎಫ್ಐಆರ್ ದಾಖಲು ಮಾಡಿ ಸುಧಾ ಅವರಿಗೆ ಸಂಬಂಧಿಸಿದ ಎರಡು ಕಡೆ ದಾಳಿ ಮಾಡಲಾಗಿದೆ. 5 ಕಡೆ ಶೋಧ ಕಾರ್ಯ ಆರಂಭವಾಗಿದೆ. ಮತ್ತೊಂದು ಕಡೆ ಶೋಧ ಕಾರ್ಯ ಆಗಬೇಕಿದೆ. ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

    ಬೆಂಗಳೂರು, ಉಡುಪಿ ಮತ್ತು ಮೈಸೂರಿನಲ್ಲಿ ದಾಳಿ ನಡೆಸಲಾಗಿದೆ. ಕಡತಗಳು ಮತ್ತು ಚಿನ್ನಾಭರಣ ಎಲ್ಲವೂ ಸಿಕ್ಕಿದೆ. ಯಲಹಂಕ ಫ್ಲ್ಯಾಟ್​ನಲ್ಲಿ ಶೋಧ ಆರಂಭವಾಗಬೇಕಿದೆ. ಆದರೆ, ಫ್ಲ್ಯಾಟ್​ ಮುಚ್ಚಿದೆ. ಅಲ್ಲಿ ಏನಾದ್ರೂ ಸಿಗಬಹುದು ಎಂಬ ಶಂಕೆ ಇದೆ. ಸುಧಾ ಅವರು ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿರುವ‌ ಶಂಕೆ ಇದ್ದು, ಬೇರೆ ಏನಾದರೂ ಮಾಹಿತಿ ಸಿಕ್ಕಿದ್ರೆ ಮತ್ತಷ್ಟು ಆಪ್ತರ ಮನೆ ಮೇಲೂ ದಾಳಿ ಮಾಡಲಾಗುತ್ತದೆ ಎಂದು ಚಂದ್ರಶೇಖರ್ ಹೇಳಿದರು.

    ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಹಚ್ಚಬಹುದು! ಆದರೆ ಈ ಗೈಡ್ ಲೈನ್ಸ್ ಪಾಲಿಸೋದು ಕಡ್ಡಾಯ

    ದಾಳಿ ಮುಕ್ತಾಯ
    ಸುಧಾ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಮುಕ್ತಾಯವಾಗಿದೆ. ಹೆಬ್ಬಾಳ ಬಳಿಯ ಕೋಡಿಗೆಹಳ್ಳಿಯ ಸುಧಾ ಮನೆಯಿಂದ ದಾಖಲೆಗಳೊಂದಿಗೆ ಎಸಿಬಿ ಅಧಿಕಾರಿಗಳು ಹೊರ ಹೋಗಿದ್ದಾರೆ. ಮನೆಯಲ್ಲಿ ಸಿಕ್ಕ ಬಂಗಾರ, ನಗದು, ಆಸ್ತಿ ದಾಖಲೆ ಪತ್ರಗಳ ಪಂಚನಾಮೆ ಮುಗಿಸಿ ಅಧಿಕಾರಿಗಳು ತೆರಳಿದ್ದಾರೆ. ಸತತ 12 ಗಂಟೆಗಳವರೆಗೆ ಎಸಿಬಿ ದಾಳಿ ಮಾಡಿದೆ. (ದಿಗ್ವಿಜಯ ನ್ಯೂಸ್​)

    ಜಾಲಾಡಿದಷ್ಟೂ ಸಿಕ್ತಿದೆ ಡಾ.ಸುಧಾ ಆಸ್ತಿ; ಹುದ್ದೆಯನ್ನೇ ಅಪಾರ್ಥ ಮಾಡ್ಕೊಂಡ್ರಾ ಭೂ-ಸ್ವಾಧೀನಾಧಿಕಾರಿ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts