More

    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ

    ಕಕ್ಕೇರಾ: ಸಹಾಯಕ ಅಯುಕ್ತರು ಹಾಗೂ ಪುರಸಭೆ ಆಡಳಿತಾಧಿಕಾರಿಗಳಾದ ಡಾ.ಹಂಪಣ್ಣ ಸಜ್ಜನ್ ಶುಕ್ರವಾರ ಬೆಳಗ್ಗೆ ಪುರಸಭೆಗೆ ಹಾಗೂ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿ ಆಡಳಿತ ವೈಖರಿಯನ್ನು ಪರಿಶೀಲಿಸಿದರು.

    ಮೊದಲು ಪುರಸಭೆಗೆ ಭೇಟಿ ನೀಡಿ ಕಚೇರಿಯಲ್ಲಿನ ನೌಕರರ ಹಾಜರಿ ಪರಿಶೀಲಿಸಿದ ಸಹಾಯಕ ಆಯುಕ್ತರು, ಹಾಜರಿ ಪುಸ್ತಕದಲ್ಲಿ ಸಹಿ ಮಾಡದೇ ಗೈರು ಹಾಜರಾದವರಿಗೆ ಒಂದು ದಿನದ ವೇತನವನ್ನು ಕಡಿತಗೊಳಿಸುವಂತೆ ಮುಖ್ಯಾಧಿಕಾರಿ ಪ್ರವೀಣಕುಮಾರ ಅವರಿಗೆ ಸೂಚಿಸಿ ಕಚೇರಿಗೆ ಬರುವ ನಾಗರಿಕರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸುವಂತೆ ಎಚ್ಚರಿಕೆ ನೀಡಿದರು.

    ನಂತರ ನಾಡಕಚೇರಿಗೂ ತೆರಳಿ ಆಧಾರ್ ತಿದ್ದುಪಡಿ, ವೃದ್ಧಾಪ್ಯ, ವಿಧವಾ ವೇತನ ಮಂಜೂರಿ ಇತ್ಯಾದಿಗಳನ್ನು ಪರಿಶೀಲಿಸಿ ಸಾರ್ವಜನಿಕರು ಕಚೇರಿಗೆ ಹಲವಾರು ಸಲ ಅಲೆದಾಡದಂತೆ ಅವರ ಕೆಲಸಗಳನ್ನು ಬೇಗನೆ ಮಾಡಿ ಕೊಡುವಂತೆ ಉಪತಹಸೀಲ್ದಾರ್ ರೇವಪ್ಪ ತೆಗ್ಗಿನಮನಿ ಅವರಿಗೆ ತಿಳಿಸಿದರು.
    ಪುರಸಭೆ ಸಿಬ್ಬಂದಿ , ಗ್ರಾಮ ಆಡಳಿತಾಧಿಕಾರಿ ಬಸವರಾಜ ಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts