More

    ಭದ್ರಾವತಿ ಶಾಸಕರಿಂದ ಅಽಕಾರ ದುರ್ಬಳಕೆ: ಶಾರದಾ ಅಪ್ಪಾಜಿ

    ಭದ್ರಾವತಿ: ಪೊಲೀಸ್ ಅಽಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಬೇಕೇ ಹೊರತು ರಾಜಕಾರಣಿ, ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡಬಾರದು ಎಂದು ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಹೇಳಿದರು.

    ಶಾಸಕ ಸಂಗಮೇಶ್ವರ್, ಮತ್ತವರ ಮಕ್ಕಳು, ಬೆಂಬಲಿಗರು ಕ್ಷೇತ್ರದಲ್ಲಿ ದಬ್ಬಾಳಿಕೆ ಮಾಡುತ್ತ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ತಾಲೂಕು ಕಚೇರಿ ಎದುರು ಜೆಡಿಎಸ್ ಹಾಗೂ ಬಿಜೆಪಿ ಬೆಂಬಲದೊAದಿಗೆ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
    ಶಾಸಕರನ್ನಾಗಿ ಆರಿಸಿದ ನಂತರ ಅದಕ್ಕೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಬೇಕೇ ಹೊರತು ಅಽಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ದಬ್ಬಾಳಿಕೆ ನಡೆಸಬಾರದು. ಇನ್ನಾದರೂ ಶಾಸಕರು ಹಾಗೂ ಅವರ ಬೆಂಬಲಿಗರು ತಿದ್ದಿಕೊಳ್ಳಬೇಕು ಎಂದರು.
    ಜೆಡಿಎಸ್ ಅಧ್ಯಕ್ಷ ಆರ್.ಕರುಣಾಮೂರ್ತಿ ಮಾತನಾಡಿ, ಕ್ಷೇತ್ರದ ಶಾಸಕರು ಅಕ್ರಮ ಚಟುವಟಿಕೆಗಳನ್ನು ತಡೆದು ಊರಿನ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು. ಆದರೆ ತಮ್ಮ ಬೆಂಬಲಿಗರೊAದಿಗೆ ಕಾನೂನು ಬಾಹಿರವಾಗಿ ಅಕ್ರಮ ದಂಧೆಗಳಿಗೆ ಪ್ರೋತ್ಸಾಹ ನೀಡುತ್ತ ಅಽಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು.
    ಶಿಮುಲ್ ಮಾಜಿ ಅಧ್ಯಕ್ಷ ಆನಂದ್ ಮಾತನಾಡಿ, ಶಾಸಕರು ಹಾಗೂ ಕಾಂಗ್ರೆಸ್ ಅಧ್ಯಕ್ಷ ಕುಮಾರ್ ಅವರು ಕೀಳು ರಾಜಕೀಯ ಮಾಡುವುದನ್ನು ನಿಲ್ಲಿಸಲಿ. ಕಾಚಗೊಂಡನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಮಾದರಿ ಸಂಘವಾಗಿದೆ. ಅಲ್ಲಿ ನಡೆದ ಚುನಾವಣೆಯಲ್ಲಿ ನನ್ನ ವಿರುದ್ಧ ರಾಜಕೀಯ ಮಾಡಲು ಬಂದವರಿಗೆ ಜನತೆ ಸೋಲಿನ ರುಚಿ ತೋರಿಸಿ ತಕ್ಕ ಪಾಠಕಲಿಸಿದ್ದಾರೆ ಎಂದರು.
    ಬಿಜೆಪಿ ಮಂಡಲ ಅಧ್ಯಕ್ಷ ಧರ್ಮಪ್ರಸಾದ್, ಮುಖಂಡರಾದ ಮಂಗೋಟೆ ರುದ್ರೇಶ್, ನಕುಲ್ ಹಾಗೂ ಜೆಡಿಎಸ್ ಮುಂಖಡರಾದ ಉಮೇಶ್, ರಾಜು, ಧರ್ಮಪ್ಪ ಮಾತನಾಡಿದರು. ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಗೊಂದಿ ಜಯರಾಂ, ಧರ್ಮೇಗೌಡ, ಕುಂಬ್ರಿ ಚಂದ್ರಣ್ಣ, ಎಚ್.ಬಿ.ರವಿಕುಮಾರ್, ಎ.ಟಿ.ರವಿ, ಎಂ.ರಾಜು, ಉಮೇಶ್, ಗುಣಶೇಖರ್, ಮಧುಸೂದನ್, ಎಪಿಎಂಸಿ ಜಯರಾಂ, ಉದಯಕುಮಾರ್, ರೇಖಾ ಪ್ರಕಾಶ್, ದಿಲೀಪ್, ಮಂಜುಳಾ ಸುಬ್ಬಣ್ಣ, ರೂಪಾವತಿ, ನಾಗರತ್ನಾ, ಸಾವಿತ್ರಮ್ಮ, ರಾಧಾ ಪ್ರಭಾಕರ್, ಭಾಗ್ಯಮ್ಮ, ಎ.ರಾಧಾ, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts