More

    ಇಂದಿನಿಂದ ಅಬುಧಾಬಿಯಲ್ಲಿ ಟಿ10 ಕ್ರಿಕೆಟ್ ಹಬ್ಬ, ಭಾರತದಲ್ಲೂ ನೇರಪ್ರಸಾರ

    ಅಬುಧಾಬಿ: ಕಳೆದ ವರ್ಷ ಐಪಿಎಲ್ ಟಿ20 ಟೂರ್ನಿ ನಡೆದಿದ್ದ ಅರಬ್ ನೆಲದಲ್ಲಿ ಇದೀಗ ಟಿ10 ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಿದ್ಧಗೊಂಡಿದೆ. ಅಬುಧಾಬಿ ಟಿ10 ಲೀಗ್‌ನ 4ನೇ ಆವೃತ್ತಿಗೆ ಗುರುವಾರ ಚಾಲನೆ ಸಿಗಲಿದ್ದು, ತಲಾ 10 ಓವರ್‌ಗಳ ಪಂದ್ಯದಲ್ಲಿ ರೋಚಕ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಕ್ರಿಸ್ ಗೇಲ್, ಕೈರಾನ್ ಪೊಲ್ಲಾರ್ಡ್, ಸುನೀಲ್ ನಾರಾಯಣ್, ಡ್ವೇನ್ ಬ್ರಾವೊ, ಆಂಡ್ರೆ ರಸೆಲ್, ಇಮ್ರಾನ್ ತಾಹಿರ್, ಶಾಹಿದ್ ಅಫ್ರಿದಿ ಸಹಿತ ಹಲವು ಟಿ20 ಕ್ರಿಕೆಟ್ ತಾರೆಯರು ಟೂರ್ನಿಯಲ್ಲಿ ಆಡಲಿದ್ದಾರೆ.

    ಫೆಬ್ರವರಿ 10ರವರೆಗೆ ನಡೆಯಲಿರುವ 10 ದಿನಗಳ ಟೂರ್ನಿಯಲ್ಲಿ ಒಟ್ಟು 29 ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ ಆಡಲಿರುವ 8 ತಂಡಗಳನ್ನು 2 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ರೌಂಡ್ ರಾಬಿನ್ ಲೀಗ್ ಹಂತದ ಬಳಿಕ, 2ನೇ ಸುತ್ತಿನಲ್ಲಿ ಉಭಯ ಗುಂಪಿನ ತಂಡಗಳು ಪರಸ್ಪರ ಕಾದಾಡಲಿವೆ. ಅಂತಿಮವಾಗಿ ಅಗ್ರ 4 ತಂಡಗಳು ಪ್ಲೇಆ್ ಹಂತಕ್ಕೇರಲಿವೆ. ಪ್ರವೀಣ್ ತಂಬೆ ಸಹಿತ ನಾಲ್ವರು ಭಾರತೀಯ ಆಟಗಾರರು ಕಣದಲ್ಲಿದ್ದಾರೆ. ಭಾರತದ ಮಾಜಿ ಆಟಗಾರರಾದ ಲಾಲ್‌ಚಂದ್ ರಜಪೂತ್ ಮತ್ತು ರಾಬಿನ್ ಸಿಂಗ್ ಕೋಚ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಐಪಿಎಲ್ ಪಂದ್ಯಗಳು ನಡೆದ ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಕೊನೇಕ್ಷಣದಲ್ಲಿ ಶೇ. 30 ಪ್ರೇಕ್ಷಕರಿಗೆ ಪ್ರವೇಶ ಲಭಿಸುವ ಸಾಧ್ಯತೆ ಇದೆ. ಟೂರ್ನಿಯ ಪಂದ್ಯಗಳು ನೂರಕ್ಕೂ ಅಧಿಕ ದೇಶಗಳಲ್ಲಿ ನೇರಪ್ರಸಾರ ಕಾಣಲಿವೆ. ಭಾರತದಲ್ಲಿ ಸೋನಿ ಸಿಕ್ಸ್ ಮತ್ತು ಸೋನಿ ಟೆನ್ 3 ಚಾನಲ್‌ಗಳಲ್ಲಿ ಪಂದ್ಯಗಳು ನೇರಪ್ರಸಾರ ಕಾಣಲಿವೆ. ರಿಲಯನ್ಸ್ ಜಿಯೋ ಟಿವಿಯಲ್ಲೂ ಪಂದ್ಯಗಳು ನೇರಪ್ರಸಾರಗೊಳ್ಳಲಿವೆ.

    ಗುಂಪುಗಳು:
    ಎ: ಬಾಂಗ್ಲಾ ಟೈಗರ್ಸ್‌, ಡೆಲ್ಲಿ ಬುಲ್ಸ್, ಮರಾಠ ಅರೇಬಿಯನ್ಸ್, ನಾರ್ಥರ್ನ್ ವಾರಿಯರ್ಸ್‌.
    ಬಿ: ಡೆಕ್ಕನ್ ಗ್ಲಾಡಿಯೇಟರ್ಸ್‌, ಪುಣೆ ಡೆವಿಲ್ಸ್, ಖಲಂದರ್ಸ್‌, ಟೀಮ್ ಅಬುಧಾಬಿ.

    ಗುರುವಾರದ ಪಂದ್ಯಗಳು:
    *ಮರಾಠ ಅರೇಬಿಯನ್ಸ್-ನಾರ್ಥರ್ನ್ ವಾರಿಯರ್ಸ್‌
    ಆರಂಭ: ಸಂಜೆ 5.30
    *ಡೆಕ್ಕನ್ ಗ್ಲಾಡಿಯೇಟರ್ಸ್‌-ಪುಣೆ ಡೆವಿಲ್ಸ್
    ಆರಂಭ: ರಾತ್ರಿ 7.45
    ಎಲ್ಲಿ: ಅಬುಧಾಬಿ
    ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಟೆನ್ 3.

    ಹಸೆಮಣೆಗೇರಿದ ಟೀಮ್ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts