More

    ಐತಿಹಾಸಿಕ ನಿರ್ಧಾರದಿಂದಾಗಿ ಪಶ್ಚಿಮದ ನೆರೆಯ ರಾಷ್ಟ್ರದ ‘ಛಾಯಾ ಸಮರ’ಕ್ಕೆ ಭಾರಿ ಅಡಚಣೆ: ಸೇನಾ ಮುಖ್ಯಸ್ಥ ಜನರಲ್​ ಎಂ.ಎಂ.ನರವಣೆ ಅಭಿಮತ

    ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದುಗೊಳಿಸಿದ ಕ್ರಮ ಐತಿಹಾಸಿಕವಾದುದು. ಆ ಐತಿಹಾಸಿಕ ಹೆಜ್ಜೆಯಿಂದಾಗಿ “ಪಶ್ಚಿಮದ ನೆರೆಯ ರಾಷ್ಟ್ರ” ನಡೆಸುತ್ತಿದ್ದ “ಛಾಯಾ ಸಮರ”ಕ್ಕೆ ಭಾರಿ ಅಡಚಣೆ ಉಂಟಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಪಾಕಿಸ್ತಾನದ ಹೆಸರು ಉಲ್ಲೇಖಿಸದೆಯೇ  ಅಭಿಪ್ರಾಯ ಪಟ್ಟಿದ್ದಾರೆ.

    ಅವರು ಮಂಗಳವಾರ ನವದೆಹಲಿಯ ಕಾರ್ಯಪ್ಪ ಪರೇಡ್ ಗ್ರೌಂಡ್​ನಲ್ಲಿ ನಡೆದ 72ನೇ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

    ಸಶಸ್ತ್ರ ಪಡೆಗಳು ಯಾವುದೇ ಕಾರಣಕ್ಕೂ ಭಯೋತ್ಪಾದನೆ, ಉಗ್ರಕೃತ್ಯಗಳನ್ನು ಸಹಿಸಿಕೊಂಡಿರಬೇಕಾದ್ದಿಲ್ಲ. ಈ ವಿಷಯದಲ್ಲಿ ಜೀರೋ ಟಾಲರೆನ್ಸ್​ ನೀತಿ ಅನುಸರಿಸಬೇಕು. ಭಯೋತ್ಪಾದನೆಯನ್ನು ಬೆಂಬಲಿಸುವವರು ಮತ್ತು ಅದಕ್ಕೆ ಉತ್ತೇಜನ ನೀಡುವವರನ್ನು ಎದುರಿಸಲು ನಮಗೆ ಸಾಕಷ್ಟು ಅವಕಾಶಗಳು, ಆಯ್ಕೆಗಳಿವೆ. ಅವುಗಳನ್ನು ಬಳಸುವುದಕ್ಕೆ ನಮಗೆ ಯಾವುದೇ ರೀತಿಯ ಮುಜುಗರ, ಹಿಂಜರಿಯುವ ಮನೋಭಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts