More

    ಪೊಲೀಸರ ಭರ್ಜರಿ ಬೇಟೆ: ಕಳವಾಗಿದ್ದ 24 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ವಶಕ್ಕೆ

    ವಿಜಯನಗರ: ಹೊಸಪೇಟೆಯ ಗ್ರಾಮೀಣ ಪೊಲೀಸರ ಕಾರ್ಯಾಚರಣೆಯ ಫಲವಾಗಿ ಕಳೆದ ತಿಂಗಳಲ್ಲಿ ನಡೆದಿದ್ದ ದೊಡ್ಡ ಕಳ್ಳತನದ ಪ್ರಕರಣ ಸುಖಾಂತ್ಯ ಕಂಡಿದೆ. ಕಳುವಾಗಿದ್ದ 23,94,450 ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳು, ಬೆಳ್ಳಿ ಸಾಮಾನು ಮತ್ತು ರಾಡೋ ವಾಚ್​ಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅ.26 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿವೇಕಾನಂದ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಒಬ್ಬ ಅಪ್ರಾಪ್ತ ವಯಸ್ಕ ಆರೋಪಿ ಸೇರಿದಂತೆ 6 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಆನಂದ್, ತಾಯಪ್ಪ, ಮಂಜುನಾಥ, ಸಿದ್ದರಾಜು, ನಿತಿನ್ ಎಂದು ಗುರುತಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಕಳುವಾಗಿದ್ದ 508 ಗ್ರಾಂ ಬಂಗಾರ, 3.797 ಕೆಜಿ ಬೆಳ್ಳಿ ಸಾಮಾನು ಹಾಗೂ 2 ರಾಡೋ ಕಂಪೆನಿಯ ವಾಚ್​ಗಳನ್ನು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ್ ಮೇಟಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಸಿಬ್ಬಂದಿಗಳಾದ ಕೊಟ್ರೇಶ್, ಪ್ರಕಾಶ್, ರಮೇಶ್, ಜೆ.ಕೊಟ್ರೇಶ್, ಅಡಿವೆಪ್ಪ, ಬಿ.ನಾಗರಾಜ್, ಚಂದ್ರಪ್ಪ, ವಿ.ನಾಗರಾಜ್, ತಿಪ್ಪೇಶ, ಮಲ್ಲಿಕಾರ್ಜುನ್ ಹಾಗೂ ಜೀಪ್ ಚಾಲಕ ನಾಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ವಿಜಯನಗರ ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

    ದಾವೂದ್​​ ನಂಟು, ನಕಲಿ ನೋಟು ದಂಧೆಗೆ ಶ್ರೀರಕ್ಷೆ! ಮಾಜಿ ಸಿಎಂ ವಿರುದ್ಧ ನವಾಬ್​ ಮಲಿಕ್​ ಆರೋಪ

    ಪೊಲೀಸ್​ ಠಾಣೆಯಲ್ಲಿ ಸಾವಪ್ಪಿದ ಯುವಕ; ‘ನಿರ್ಲಕ್ಷ್ಯ’ಕ್ಕಾಗಿ ಐವರು ಸಸ್ಪೆಂಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts