More

    ಗಾಜಿಯಾಬಾದ್​ನ 7ರ ಪೋರಿ ಈಗ ವಿಶ್ವದ ಅತ್ಯಂತ ಕಿರಿಯ ಲೇಖಕಿ; ಲಾಕ್​ಡೌನ್​ನಲ್ಲಿ ಅರಳಿದ ಪ್ರತಿಭೆ

    ಗಾಜಿಯಾಬಾದ್​: ಲಾಕ್​ಡೌನ್​ ಸಮಯದಲ್ಲಿ ಯಾರ್ಯಾರು ಏನೇನು ಮಾಡಿದ್ದೀರಿ ಎಂದು ಕೇಳಿದರೆ, ಕೆಲವೊಂದಿಷ್ಟು ಜನರ ತಮ್ಮ ಹೊಸ ರುಚಿಯ ಅಡುಗೆಗಳ ಬಗ್ಗೆ ಹೇಳಬಹುದು. ಇನ್ನೊಂದಿಷ್ಟು ಜನ ತಾವು ಓದಿದ ಪುಸ್ತಕಗಳ ಬಗ್ಗೆ ಹೇಳಿಕೊಳ್ಳಬಹುದು. ಇನ್ನು ಅನೇಕರು ನಿದ್ರೆ, ಫೇಸ್​ಬುಕ್​, ಇನ್​ಸ್ಟಾದಲ್ಲೇ ಕಾಲ ಕಳೆದಿದ್ದಾಗಿ ಹೇಳಿಕೊಳ್ಳಬಹುದು. ಆದರೆ ಏಳು ವರ್ಷದ ಪೋರಿಯೊಬ್ಬಳು ತನ್ನ ಬರೆಯುವ ಆಸಕ್ತಿಗೆ ಇನ್ನಷ್ಟು ಉತ್ತೇಜನ ನೀಡಿ, ಮಕ್ಕಳ ಪುಸ್ತಕವೊಂದನ್ನು ಬಿಡುಗಡೆ ಮಾಡಿ, ಜನರ ಹುಬ್ಬೇರುವಂತೆ ಮಾಡಿದ್ದಾಳೆ. ಈ ಬಾಲಕಿ ಇದೀಗ ವಿಶ್ವದ ಅತ್ಯಂತ ಕಿರಿಯ ಲೇಖಕಿ ಎನ್ನುವ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ.

    ರಾಷ್ಟ್ರಕವಿ ಮೈಥಿಲಿ ಶರಣ್​ ಗುಪ್ತಾ ಮತ್ತು ಸಂತಕವಿ ಸಿಯಾರಾಮ್​ಶರಣ್​ ಗುಪ್ತಾ ದಂಪತಿ ನಿಮಗೆ ಗೊತ್ತಿರಬಹುದು. ಈಗ ಈ ನೂತನ ದಾಖಲೆ ಬರೆದಿರುವುದು ಇವರ ಮೊಮ್ಮಗಳೇ. ಈ ದಂಪತಿಯ ಮೊಮ್ಮಗಳು ಅಭಿಜಿತಾ ಗುಪ್ತಾ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ತನ್ನ ತಂದೆ ತಾಯಿಯೊಂದಿಗೆ ನೆಲೆಸಿದ್ದಾಳೆ. ಈಕೆಗೆ ಮೊದಲಿನಿಂದಲೂ ಪುಸ್ತಕ, ಬರವಣಿಗೆ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಆದರೆ ವಿದ್ಯಾಭ್ಯಾಸದ ಕಾರಣದಿಂದಾಗಿ ಅದರತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ಸಮಯ ಸಿಕ್ಕ ಹಿನ್ನೆಲೆಯಲ್ಲಿ, ತನ್ನದೇ ಆದ ಒಂದು ಪುಸ್ತಕವನ್ನು ಬರೆದಿದ್ದಾಳೆ. ಒಂದು ಪುಟ್ಟ ಮಗುವಿನಿಂದ ಮಕ್ಕಳಿಗಾಗಿ ಬರೆಯಲಾದ ಹ್ಯಾಪಿನೆಸ್​ ಆಲ್​ ಅರೌಂಡ್​ ಪುಸ್ತಕವನ್ನು ಪ್ರಕಟಿಸಲಾಗಿದೆ.

    ಇದನ್ನೂ ಓದಿ: ವಿಧಾನಸಭೆಯಿಂದ ಅರ್ನಬ್‌ ಗೋಸ್ವಾಮಿಗೆ ಹಕ್ಕುಚ್ಯುತಿ ನೋಟಿಸ್‌: ‘ಸುಪ್ರೀಂ’ ಅಸಮಾಧಾನ

    ಗಾಜಿಯಾಬಾದ್​ನ 7ರ ಪೋರಿ ಈಗ ವಿಶ್ವದ ಅತ್ಯಂತ ಕಿರಿಯ ಲೇಖಕಿ; ಲಾಕ್​ಡೌನ್​ನಲ್ಲಿ ಅರಳಿದ ಪ್ರತಿಭೆ
    ಹ್ಯಾಪಿನೆಸ್​ ಆಲ್​ ಅರೌಂಡ್​ ಪುಸ್ತಕದಲ್ಲಿ ಅಭಿಜಿತಾ ಬರೆದಿರುವ ಕವನಗಳು

    ಬಾಲಕಿಯ ಈ ಸಾಧನೆ ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲಾಗಿದೆ. ವಿಶ್ವದ ಅತ್ಯಂತ ಕಿರಿಯ ಲೇಖಕಿ ಎಂದು ನಮೂದಿಸಲಾಗಿದೆ. ಏಷ್ಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಗ್ರ್ಯಾಂಡ್​ ಮಾಸ್ಟರ್​ ಇನ್​ ರೈಟಿಂಗ್​ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ.

    ಅಭಿಜಿತಾ ತನ್ನ ನಾಲ್ಕನೇ ವಯಸ್ಸಿನಿಂದಲೂ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಳಂತೆ. ಆ ವಯಸ್ಸಿಗೆ ತನಗೆ ಬರುತ್ತಿದ್ದ ನಾಲ್ಕೈದು ಪದಗಳನ್ನೇ ಬಳಸಿಕೊಂಡು ಕಥೆಯೊಂದನ್ನು ಬರೆದಿದ್ದಳು. ಮನುಷ್ಯನಿಗೆ ಊಟ ಏಕೆ ಮುಖ್ಯ ಎಂದು ಬರೆದಿದ್ದ ಆ ಕಥೆಯನ್ನು ಪೂರ್ತಿ ಕುಟುಂಬ ಮೆಚ್ಚಿಕೊಂಡಿತ್ತು ಎನ್ನುತ್ತಾರೆ ಅಭಿಜಿತಾ ತಾಯಿ ಅನುಪ್ರಿಯಾ.

    ಉದ್ಯಾನವನದ ಹಾಟ್​ಸ್ಟ್ರಿಂಗ್​ನಲ್ಲೇ ಚಿಕನ್​ ಅಡುಗೆ ಮಾಡಿದ ಯುವಕ; ತಕ್ಕ ಶಿಕ್ಷೆ ಕೊಟ್ಟ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts