More

    ಮಾಜಿ ರಾಜ್ಯಸಭಾ ಸದಸ್ಯ, ಶಿಕ್ಷಣ ತಜ್ಞ ಅಬ್ದುಲ್ ಸಮಾದ್​ ಸಿದ್ದಿಕಿ ವಿಧಿವಶ: ರಾಯಚೂರಿನಲ್ಲಿ ಅಂತ್ಯಕ್ರಿಯೆ

    ರಾಯಚೂರು: ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸಮಾದ್​ ಸಿದ್ದಿಕಿ (87) ಅವರು ಸೋಮವಾರ ತಡರಾತ್ರಿ ಕೊನೆಯುಸಿರೆಳೆದರು.

    ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಿಕಿ ಅವರನ್ನು ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ (ನ.21) ತಡರಾತ್ರಿ ಮೃತಪಟ್ಟಿದ್ದಾರೆ.

    ಸಿದ್ದಿಕಿ ಅವರ ಅಂತ್ಯಕ್ರಿಯೆ ರಾಯಚೂರು ನಗರದ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಇಂದು ನಡೆಯಲಿದೆ.

    ಸಮದ್ ಸಿದ್ದಿಕಿ ಅವರು ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಜನತಾದಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 1988 ರಿಂದ 1994 ರವರೆಗೆ ಹೈದರಾಬಾದ್ ಕರ್ನಾಟಕ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದರು. ಅಲ್ಲದೆ, ಅವರೊಬ್ಬ ಭಾರತೀಯ ಶಿಕ್ಷಣ ತಜ್ಞರು ಹೌದು. ಉತ್ತರ ಕರ್ನಾಟಕ ಪ್ರದೇಶದ ಪ್ರಸಿದ್ಧ ಮುಸ್ಲಿಂ ನಾಯಕರಲ್ಲಿ ಒಬ್ಬರು.

    ಸಮದ್ ಸಿದ್ದಿಕಿ ಅವರು ಶಿಕ್ಷಣ ತಜ್ಞ ಮತ್ತು ರಾಜಕಾರಣಿಯಾಗಿ ತಮ್ಮ ಜೀವನದ ಕೊನೆಯ 35 ವರ್ಷಗಳಲ್ಲಿ ರಾಯಚೂರು ನಗರದಾದ್ಯಂತ ನ್ಯೂ ಎಜುಕೇಶನ್ ಸೊಸೈಟಿ, ಮಿಲ್ಲತ್ ಎಜುಕೇಶನ್ ಸೊಸೈಟಿ ಮುಂತಾದ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

    ಜನತಾ ದಳದ ವಿಭಜನೆಯ ನಂತರ ಅವರು ರಾಮಕೃಷ್ಣ ಹೆಗಡೆ ಮತ್ತು ಅನೇಕ ಜನತಾ ದಳ ನಾಯಕರೊಂದಿಗೆ ಒಮ್ಮೆ ಕರ್ನಾಟಕದಲ್ಲಿ ರಾಜ್ಯ ಪಕ್ಷವಾಗಿದ್ದ ಲೋಕಶಕ್ತಿಯನ್ನು ಸಹ-ಸ್ಥಾಪಿಸಿದರು. ಸಮದ್ ಸಿದ್ದಿಕಿ ಅವರು ಲೋಕಶಕ್ತಿಯ ಪ್ರಾರಂಭದಿಂದಲೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಫೆ.2013ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. (ದಿಗ್ವಿಜಯ ನ್ಯೂಸ್​)

    ಮಾಜಿ ರಾಜ್ಯಸಭಾ ಸದಸ್ಯ, ಶಿಕ್ಷಣ ತಜ್ಞ ಅಬ್ದುಲ್ ಸಮಾದ್​ ಸಿದ್ದಿಕಿ ವಿಧಿವಶ: ರಾಯಚೂರಿನಲ್ಲಿ ಅಂತ್ಯಕ್ರಿಯೆ

    ಈಕೆಯ ಮೋಹದ ಜಾಲಕ್ಕೆ ಬಿದ್ದ ವೃದ್ಧ ಕಳೆದುಕೊಂಡ ಹಣದ ಮೊತ್ತ ಕೇಳಿದ್ರೆ ಹುಬ್ಬೇರಿಸ್ತೀರಾ! ವಿಡಿಯೋ ರಹಸ್ಯವಿದು…

    ನಟನೆಗಿಳಿದ ನಿರ್ದೇಶಕ ಸತ್ಯಪ್ರಕಾಶ್; ತಮ್ಮದೇ ಜೀವನದಲ್ಲಿ ನಡೆದ ನೈಜ ಘಟನೆಗಳಿಗೆ ಸಿನಿಮಾ ರೂಪ

    ಬೆಂದಕಾಳೂರು ಥಂಡಾ: 10 ವರ್ಷಗಳ ನಂತರ ಬೆಂಗಳೂರಲ್ಲಿ ಅತಿ ಕಡಿಮೆ ಉಷ್ಣಾಂಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts