More

    ಕೊಪ್ಪಳದ ಕುಡಿಯುವ ನೀರಿನ ಸಮಸ್ಯೆಗೆ ಎಬಿಬಿಯ ಹೈಟೆಕ್‌ ಪರಿಹಾರ

    ಕೊಪ್ಪಳ: ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲು ಈಗ ಎಬಿಬಿ ಇಂಡಿಯಾ ಕಂಪೆನಿಯ ಡಿಜಿಟಲ್‌ ತಂತ್ರಜ್ಞಾನದ ಸಹಕಾರ ದೊರಕಲಿದೆ. ಕರ್ನಾಟಕ ಸರ್ಕಾರಕ್ಕಾಗಿ ಎಲ್‌ ಆ್ಯಂಡ್​‌ ಟಿ ಕನ್ಸ್‌ಟ್ರಕ್ಷನ್‌ ವಾಟರ್‌ ಆ್ಯಂಡ್‌ ಎಫ್ಲುಯೆಂಟ್‌ ಟ್ರೀಟ್‌ಮೆಂಟ್‌ನ ನಾಯಕತ್ವದಲ್ಲಿ ನಡೆಯಲಿರುವ ಯೋಜನೆಯೊಂದರಡಿ ತನ್ನ ಹೈಟೆಕ್‌ ಫ್ಲೋಮೀಟರ್‌ ಆದಿಯಾಗಿ ಅನೇಕ ಆಧುನಿಕ ಜಲನಿರ್ವಹಣಾ ಉಪಕರಣಗಳು ನೀರಿನ ಸದ್ಬಳಕೆ ಮತ್ತು ವಿತರಣಾ ಕಾರ್ಯಗಳಲ್ಲಿ ತೊಡಗಲಿವೆ ಎಂದು ಎಬಿಬಿ ಸಂಸ್ಥೆಯು ತಿಳಿಸಿದೆ.
    ಭಾರತದ ನೈರುತ್ಯ ವಲಯದ ಈ ಬರಗಾಲ-ಪೀಡಿತ ಪ್ರದೇಶದಲ್ಲಿ ನೀರಿನ ಬಳಕೆಯನ್ನು ಟ್ರ್ಯಾಕ್‌ ಮಾಡುವ, ಅಳೆಯುವ ಮತ್ತು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಜಲ ಪ್ರಾಧಿಕಾರಗಳಿಗೆ ಅಗತ್ಯ ಪರಿಹಾರೋಪಕರಣಗಳ ಮೂಲಕ ಸಹಾಯ ಒದಗಿಸಲಾಗುವುದು. ಜೊತೆಗೇ ಇಲ್ಲಿನ ಹಳ್ಳಿ ಮನೆಗಳಿಗೆ ಪರಿಷ್ಕರಿಸಿದ ಶುದ್ಧ ನದಿ ನೀರನ್ನು ಪಂಪ್‌ ಮಾಡಿ ವಿತರಿಸುವಲ್ಲಿ ಕೂಡ ಎಬಿಬಿ ಯ ಆಧುನಿಕ ತಂತ್ರಜ್ಞಾನವು ಸಹಾಯಕವಾಗಲಿದೆ. ೬೩೫ ಡಿಜಿಟಲ್‌ ಫ್ಲೋ ಮೀಟರ್‌ ಗಳು ಹಾಗೂ ನೀರಿನ ಪಂಪಿಂಗ್‌ ಸ್ಟೇಷನ್ ಮತ್ತು ಜಲಾಶಯಗಳಲ್ಲಿ ನಿಯಂತ್ರಣವನ್ನು ಹೆಚ್ಚಿಸಲು ಬೇಕಾದ ತಂತ್ರಜ್ಞಾನಗಳ ಬಳಕೆಯು ಈ ಪರಿಹಾರೋಪಾಯದ ಭಾಗವಾಗಿದೆ ಎಂದು ಎಬಿಬಿ ಸಂಸ್ಥೆಯ ಹೇಳಿಕೆಯು ತಿಳಿಸಿದೆ.

    ಸುಮಾರು ಒಂದು ಮಿಲಿಯನ್‌ ಜನಸಂಖ್ಯೆಯುಳ್ಳ ಕೊಪ್ಪಳ ಜಿಲ್ಲೆಯು ನಿಯಮಿತವಾಗಿ ನೀರಿನ ಕೊರತೆಯನ್ನು ಎದುರಿಸುತ್ತಲೇ ಬಂದಿದೆ. ಈವರೆಗೆ ಈ ಸಮಸ್ಯೆಯನ್ನೆದುರಿಸಲು ಪುರಾತನ ಭಾವಿಗಳನ್ನು ಸಂರಕ್ಷಿಸುವ ಮತ್ತು ಹಳೆಯ ಜಲ ಸಂರಕ್ಷಣಾ ವಿಧಾನಗಳನ್ನು ಅನುಸರಿಸುವಷ್ಟಕ್ಕೇ ಆಡಳಿತದ ಕ್ರಮಗಳು ಸೀಮಿತವಾಗಿದ್ದವು. ಈಗ ಡಿಜಿಟಲ್‌ ತಂತ್ರಜ್ಞಾನದ ದೆಸೆಯಿಂದ ಬಹುಗ್ರಾಮ ಮಟ್ಟದ ಶುದ್ಧ ಕುಡಿಯುವ ನೀರು ಯೋಜನೆಯ ಭಾಗವಾಗಿ ಕುಷ್ಟಗಿ ಮತ್ತು ಎಲ್ಬುರ್ಗಾ ಗ್ರಾಮಗಳು ಎಬಿಬಿಯ ಡಿಜಿಟಲ್‌ ಜಲನಿರ್ವಹಣಾ ವಿಧಾನಗಳ ಪ್ರಯೋಜನ ಪಡೆಯಲಿವೆ.

    ನೀರಿನ ಹರಿವನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಮತ್ತು ವರಮಾನೇತರ ಜಲವ್ಯಯವನ್ನು ಕಡಿಮೆ ಮಾಡಲು ಸೋರಿಕೆಯನ್ನು ನಿರ್ವಹಿಸುವ ಮಾರ್ಗೋಪಾಯಗಳ ಅವಶ್ಯಕತೆಯು ಕೊಪ್ಪಳಕ್ಕಿತ್ತು. ಅದೇ ರೀತಿ ಬಹಳ ವಿಸ್ತಾರವಾಗಿ ಹರಡಿದ ಜಲವಿತರಣೆಯ ಜಾಲವನ್ನು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸಾಧಿಸುವ ಅಗತ್ಯವಿದೆ. ಎಬಿಬಿಯ ಸಹಭಾಗಿತ್ವದಿಂದ ನದಿಯಲ್ಲಿನ ಪಂಪಿಂಗ್‌ ಸ್ಟೇಷನ್‌ ನಿಂದ ಹಿಡಿದು ಶುದ್ಧ ಕುಡಿಯುವ ನೀರಿನ ಪರಿಷ್ಕರಣೆಯವರೆಗೆ ಯೋಜನೆಯಲ್ಲಿ ಎಲ್ಲವೂ ಸ್ವಯಂಚಾಲಿತವಾಗಿ ನಡೆಯಲಿವೆ. ಈ ಯೋಜನೆಯಡಿ ಬರುವ ಮಾರ್ಗವು ೬೨೦ ಓವರ್‌ ಹೆಡ್‌ ಟ್ಯಾಂಕ್​ಗಳು ಮತ್ತು ೧೬ ಜಲಾಶಯಗಳನ್ನು ಒಳಗೊಂಡಿದೆ.

    ಕೊಪ್ಪಳದ ಕುಡಿಯುವ ನೀರಿನ ಸಮಸ್ಯೆಗೆ ಎಬಿಬಿಯ ಹೈಟೆಕ್‌ ಪರಿಹಾರ

    “ಭಾರತವು ಜಾಣ – ಸ್ವಯಂಧಾರಣಾಶಕ್ತಿಯುಳ್ಳ (ಸ್ಮಾರ್ಟ್‌ – ಸಸ್ಟೇನಬಲ್‌) ಹಳ್ಳಿಗಳು, ಪಟ್ಟಣ ಮತ್ತು ನಗರಗಳೆಡೆಗೆ ಹೆಜ್ಜೆ ಹಾಕುತ್ತಿರುವಾಗ, ಜಲನಿರ್ವಹಣೆಯು ಮುಖ್ಯ ಸವಾಲುಗಳಲ್ಲೊಂದು. ಎಬಿಬಿಯ ಡಿಜಿಟಲ್‌ ಜಲನಿರ್ವಹಣಾ ಪರಿಹಾರಗಳನ್ನು ಕೇವಲ ನಗರಗಳಲ್ಲಷ್ಟೇ ಅಲ್ಲ, ನಮ್ಮ ಕೃಷಿಪ್ರಧಾನ ಆರ್ಥಿಕತೆಯಲ್ಲಿ ಮುಖ್ಯವಾಗಿರುವ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಕೂಡ ಉಪಯುಕ್ತವಾಗಬಲ್ಲವು ಎಂಬುದನ್ನು ಈ ಯೋಜನೆ ತೋರಿಸುತ್ತದೆ” ಎಂದು ಎಬಿಬಿ ಮೆಷರ್ಮೆಂಟ್‌ ಆ್ಯಂಡ್ ಅನಾಲಿಟಿಕ್ಸ್‌ ಭಾರತದ ಮುಖ್ಯಸ್ಥ ಜಿ. ಶ್ರೀನಿವಾಸ ರಾವ್‌ ಹೇಳಿದರು.
    ಎಬಿಬಿಯ ಫ್ಲೋ ಮೀಟರ್​ಗಳು ಈಗಾಗಲೇ ದೆಹಲಿ, ಬೆಂಗಳೂರು, ಸೂರತ್‌, ರಾಂಚಿ, ಕೋಲ್ಕತ, ಉದಯಪುರ, ಚೆನ್ನೈ ಸೇರಿ ಭಾರತದ ವಿವಿಧ ನಗರಗಳಲ್ಲಿ ಮತ್ತು ಕರ್ನಾಟಕದ ಗದಗ ಹಾಗೂ ರಾಜಾಸ್ತಾನದ ಜವಾಯಿಯಂತಹ ಪಟ್ಟಣ ಮತ್ತು ಗ್ರಾಮಾಂತರ ಭಾಗಗಳಲ್ಲಿ ಬಳಕೆಯಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts