More

    ಹಳ್ಳಿ ಅಡುಗೆ ಆರೋಗ್ಯಕ್ಕೆ ಪೂರಕ: ಆಷಾಢ ಆಹಾರಮೇಳದಲ್ಲಿ ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ ಅಭಿಪ್ರಾಯ

    ಹೆಬ್ರಿ: ಉಡುಪಿ ಜಿಪಂ, ಹೆಬ್ರಿ ತಾಪಂ, ಗ್ರಾಪಂ ಹಾಗೂ ಧನಲಕ್ಷ್ಮೀ ಸಂಜೀವಿನಿ ಒಕ್ಕೂಟ ಆಶ್ರಯದಲ್ಲಿ ಆಷಾಢ ಆಹಾರ ಮೇಳ ಆಟಿ ಕಾರ್ಯಕ್ರಮ ಹೆಬ್ರಿಯಲ್ಲಿ ಶುಕ್ರವಾರ ನಡೆಯಿತು.
    ಗ್ರಾಪಂ ಅಧ್ಯಕ್ಷೆ ಮಾಲತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವ ಜನತೆ ಫಾಸ್ಪ್ ಪುಡ್‌ನತ್ತ ಆಕರ್ಷಿತರಾಗಿದ್ದಾರೆ. ಹಳ್ಳಿಯ ಸ್ವಾದಿಷ್ಟ ಅಡುಗೆ ಸೇವನೆ ಆರೋಗ್ಯವೃದ್ಧಿಗೆ ಪೂರಕ ಎಂದರು.

    ಗ್ರಾಪಂ ಸದಸ್ಯ ಜನಾರ್ದನ್ ಎಚ್. ಆಟಿ ತಿಂಗಳು ಮತ್ತು ಆಹಾರದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ 25 ಬಗೆಯ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು.
    ಗ್ರಾಪಂ ಸದಸ್ಯರಾದ ಸುಧಾಕರ ಹೆಗ್ಡೆ, ಸುಮಾ ಅಡ್ಯಂತಾಯ, ಸುರೇಖಾ ಶೆಟ್ಟಿ, ಸುಶೀಲಾ, ಆಶಾ, ಆಶಾಲತಾ ಹೆಗ್ಡೆ, ಕೃಷ್ಣ ನಾಯ್ಕ, ತಾರನಾಥ ಬಂಗೇರ, ಎಚ್.ಬಿ.ಸುರೇಶ್, ಸಂತೋಷ್ ನಾಯಕ್, ಕರುಣಾಕರ ಸೇರಿಗಾರ್,ಪಿಡಿಒ ಸದಾಶಿವ ಸೇರ್ವೆಗಾರ್, ಕಾರ್ಯದರ್ಶಿ ಅಮೃತ ಕುಲಾಲ್, ಪಂಚಾಯಿತಿ ಸಿಬ್ಬಂದಿ, ಸ್ವಸಹಾಯ ಸಂಘದ ಉಷಾ, ಜಯಂತಿ ಶೆಟ್ಟಿ ಮೊದಲಾದವರಿದ್ದರು. ಪ್ರಸಾದ್ ಶೆಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts