More

    ಕರೊನಾ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯ ಸಾವು; ಊರಲ್ಲಿ ಆತಂಕ

    ಬಳ್ಳಾರಿ: ಕರೊನಾ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಕುರುಗೋಡು ತಾಲೂಕಿನ ಬಾದನಹಟ್ಟಿಯಲ್ಲಿ ನಡೆದಿದೆ. ಭೀಮಕ್ಕ ಮೃತರು. ಇವರ ಸಾವು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಇದನ್ನೂ ಓದಿ:  ಒಂದೇ ಕುಟುಂಬದ ಮೂವರ ದುರ್ಮರಣ; ಗಂಗಾಪುರ ಗೇಟ್ ಬಳಿ ಬೈಕ್‌ಗೆ ಕಾರು ಡಿಕ್ಕಿ

    ಭೀಮಕ್ಕ ಕೊವಿಡ್​-19ಕ್ಕೆ ಸಂಬಂಧಪಟ್ಟ ಕರ್ತವ್ಯದಲ್ಲಿದ್ದರು. ತೀವ್ರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದ್ದಾರೆಂದು ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಈ ಮಧ್ಯೆ ಕರೊನಾ ಸೋಂಕು ತಗುಲಿಯೇ ಮೃತಪಟ್ಟಿರಬಹುದಾ ಎಂಬ ಆತಂಕ ಕಾಡುತ್ತಿದೆ.

    ಭೀಮಕ್ಕ ಅವರ ಮೃತದೇಹಕ್ಕೆ ಕರೊನಾ ಟೆಸ್ಟ್​ ಮಾಡಲಾಗಿದ್ದು, ವರದಿ ಇನ್ನೂ ಬಂದಿಲ್ಲ. ವರದಿಗಾಗಿ ಕಾಯುತ್ತಿರುವ ಜಿಲ್ಲಾಡಳಿತ ಇನ್ನೂ ಏನನ್ನೂ ನಿಖರವಾಗಿ ಹೇಳಿಲ್ಲ.

    ಇದನ್ನೂ ಓದಿ: ಶ್ರೀನಿವಾಸಪುರದ ಆಲವಾಟ ಕೆರೆಗೆ ಕೆ.ಸಿ. ವ್ಯಾಲಿ ನೀರು

    ಭೀಮಕ್ಕನವರು 2005ರಿಂದಲೂ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಇವರಿಗೆ 50 ಲಕ್ಷ ರೂ. ಆರೋಗ್ಯ ವಿಮೆ ಕೊಡಬೇಕು ಎಂದು ಅಂಗನವಾಡಿ ಕಾರ್ಯರ್ತೆಯರ ಸಂಘ ಪಟ್ಟು ಹಿಡಿದಿದೆ.

    ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts