ಕಿರಣ್​ಗೆ ಡಿವೋರ್ಸ್ ನೀಡಿದ ಅಮೀರ್​ಗೆ ಫಾತೀಮಾ 3ನೇ ಹೆಂಡತಿ!? ಟ್ರೆಂಡಿಂಗ್​ನಲ್ಲಿ ದಂಗಲ್ ನಟಿ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್, ಕಿರಣ್ ರಾವ್ ಅವರೊಂದಿಗಿನ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರು ಪರಸ್ಪರ ಒಪ್ಪಿಗೆಯೊಂದಿಗೆ ಡಿವೋರ್ಸ್​ ಪಡೆದುಕೊಂಡಿರುವುದಾಗಿ ಹೇಳಲಾಗಿದೆ. ಆದರೆ ಈ ಡಿವೋರ್ಸ್ ವಿಚಾರ ಹೊರಬರುತ್ತಿದ್ದಂತೆಯೇ ನಟಿ ಫಾತೀಮಾ ಸನಾ ಶೇಖ್ ಟ್ವಿಟ್ಟರ್​ನ ಟ್ರೆಂಡಿಂಗ್ ಆಗಿದ್ದಾರೆ. ಅಷ್ಟಕ್ಕೂ ಅವರಿಬ್ಬರ ನಡುವಿನ ಸಂಬಂಧ ಏನು? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ..

ಫಾತೀಮಾ ಅವರು ಅಮೀರ್ ಖಾನ್ ಜತೆಗೆ ದಂಗಲ್ ಸಿನಿಮಾದಲ್ಲಿ ನಟಿಸಿದ್ದರು. ಆಕೆ ಗೀತಾ ಫೋಗಾಟ್ ಪಾತ್ರದಲ್ಲಿ ನಟಿಸಿದ್ದರೆ ಅಮೀರ್ ಅವರು ಆಕೆಯ ತಂದೆ ಮಹವೀರ್ ಪಾತ್ರದಲ್ಲಿ ನಟಿಸಿದ್ದರು. ಇಬ್ಬರೂ ಜತೆಯಾಗಿ ಥಗ್ಸ್ ಆಫ್ ಸಿನಿಮಾದಲ್ಲೂ ನಟಿಸಿದ್ದರು. ದಂಗಲ್ ಸಿನಿಮಾ ನಂತರ ಅಮೀರ್ ಹಾಗೂ ಫಾತೀಮಾ ಡೇಟ್​ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು. ಅನೇಕ ಮಾಧ್ಯಮಗಳಲ್ಲಿ ಅದರ ಕುರಿತಾಗಿ ಸುದ್ದಿಯೂ ಆಗಿತ್ತು.

ಇದೀಗ ಅಮೀರ್ ಖಾನ್ ತಮ್ಮ ಎರಡನೇ ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ಹಾಗಿದ್ದರೆ ಇನ್ನೊಂದು ಸ್ವಲ್ಪ ದಿನಗಳಲ್ಲಿ ಅವರು ಫಾತೀಮಾರನ್ನು ಮದುವೆಯಾಗಬಹುದು ಎನ್ನುವ ಮಾತುಗಳು ಕೇಳಿಬರಲಾರಂಭಿಸಿದೆ. ಅವರಿಬ್ಬರ ಡಿವೋರ್ಸ್ ಫಾತೀಮಾಳಿಗೆ ಅತಿ ಹೆಚ್ಚು ಸಂತೋಷವುಂಟು ಮಾಡಿದೆ ಎನ್ನುವಂತಹ ಟ್ರೋಲ್​ಗಳು ಕಾಣುತ್ತಿವೆ. ಇಂತಹ ಮಾತುಗಳ್ಯಾವುದಕ್ಕೂ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನಟಿ ಫಾತೀಮಾ ತಿರುಗೇಟು ಕೊಟ್ಟಿದ್ದಾರೆ. ಒಟ್ಟಿನಲ್ಲಿ ಅಮೀರ್ ಖಾನ್ ಅವರ ಡಿವೋರ್ಸ್​ನಿಂದಾಗಿ ಫಾತೀಮಾ ಟ್ವಿಟ್ಟರ್ ಟ್ರೆಂಡಿಂಗ್ ಆಗುವಂತಾಗಿದೆ. (ಏಜೆನ್ಸೀಸ್)

ವೀಕೆಂಡ್​ ಕರ್ಫ್ಯೂ ಇಲ್ಲ, ಮಾಲ್​ಗಳು ಓಪನ್, ಸಂಪೂರ್ಣ ಸಾರಿಗೆಗೆ ಅವಕಾಶ: ಅನ್​ಲಾಕ್ 3 ಘೋಷಣೆ

ಐ ಹೇಟ್ ಮೈ ಲೈಫ್ ಎಂದು ನೋಟ್ ಬುಕ್ ತುಂಬ ಬರೆದಿಟ್ಟು ನೇಣಿಗೆ ಶರಣಾದ 9ನೇ ಕ್ಲಾಸ್ ಬಾಲಕಿ!

Share This Article

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…