ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ 10 ಅಂಶ ಹೊಂದಿರುವ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಪಕ್ಷದ ಪ್ರಣಾಳಿಕೆಯನ್ನುಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಿಡುಗಡೆ ಮಾಡಿದರು.
ಮನೆ ಬಾಗಿಲಿಗೆ ಪಡಿತರ, ಗುಣಮಟ್ಟದ ಶಿಕ್ಷಣ, ಶಾಲೆಗಳಲ್ಲಿ ದೇಶಭಕ್ತಿ ಪಠ್ಯ ಅಳವಡಿಕೆ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು.
ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, ಪಕ್ಷ ಆಹಾರ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಬದ್ಧತೆ ಹೊಂದಿದೆ. ಅಲ್ಲದೆ ದೆಹಲಿ ಜನರಿಗೆ 24 ತಾಸು ವಿದ್ಯುತ್ ಪೂರೈಕೆ ಮಾಡಲಿದೆ ಎಂದು ಹೇಳಿದರು.
10 ಲಕ್ಷ ಮಂದಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ರವಾನೆಯಾಗಲಿದೆ, ಯುವಕರು, ಮಹಿಳೆ ಹಾಗೂ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಖಂಡರಾದ ಗೋಪಾಲ್ ರೈ, ಸಂಜಯ್ ಸಿಂಗ್, ಜಾಸ್ಮಿನ್ ಶಾ ಮತ್ತು ಡಾ.ಅಜಯ್ ಕುಮಾರ್ ಇದ್ದರು. (ಏಜೆನ್ಸೀಸ್)
Aam Aadmi Party (AAP) releases party manifesto for #DelhiElections2020 pic.twitter.com/S3DSXZPGAw
— ANI (@ANI) February 4, 2020