More

    ಆಧಾರ್ ತಿದ್ದುಪಡಿ ಕೇಂದ್ರ ಪುನಃ ಆರಂಭಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

    ರಾಣೆಬೆನ್ನೂರ: ನಗರದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಬಂದ್ ಆಗಿರುವ ಆಧಾರ್ ತಿದ್ದುಪಡಿ ಸೇವಾ ಕೇಂದ್ರವನ್ನು ಶೀಘ್ರವೇ ಆರಂಭಿಸಬೇಕು. ಇಲ್ಲವಾದರೆ ಅ. 25ರಂದು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ತಾಲೂಕಿನ ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಸ್ವಯಂ ಸೇವಾ ಸಮಿತಿ ವತಿಯಿಂದ ಬಿಎಸ್‌ಎನ್‌ಎಲ್ ಉಪ ವಿಭಾಗದ ಇಂಜಿನಿಯರ್ ಹನುಮಂತಪ್ಪ ಪಾರ್ವತೇರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
    ಈ ಹಿಂದೆ ಸೇವಾ ಕೇಂದ್ರದಲ್ಲಿದ್ದ ಸಿಬ್ಬಂದಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರ ಏಜೆನ್ಸಿ ಪರವಾನಗಿ ರದ್ದು ಪಡಿಸಲಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಸೇವಾ ಕೇಂದ್ರ ಬಂದ್ ಮಾಡಲಾಗಿದೆ. ಆದರೆ, ಪುನಃ ಆರಂಭಿಸಲು 1 ತಿಂಗಳು ಕಳೆಯುತ್ತ ಬಂದರೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಆಧಾರ್ ತಿದ್ದುಪಡಿ ಮಾಡಿಸಲು ತೊಂದರೆ ಉಂಟಾಗಿದೆ.
    ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಆಧಾರ್ ತಿದ್ದುಪಡಿ ಕೇಂದ್ರವನ್ನು ಬೇರೆಯವರಿಗೆ ಕೊಟ್ಟು ಪುನಃ ಆರಂಭಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಒತ್ತಾಯಿಸಿದರು.
    ಗ್ರಾಮಸ್ಥರಾದ ಜದಗೀಶ ಹುಲ್ಲತ್ತಿ, ಗೋವಿಂದ ಲಮಾಣಿ, ಎಲ್ಲಪ್ಪ ಚಿಕ್ಕಣ್ಣನವರ, ರವಿ ಕೆರೂಡಿ, ಮಾಲತೇಶ ವಡ್ಡರ, ಅಜ್ಜಪ್ಪ ನಾಯಕ, ಹುಲಿಗೆಪ್ಪ ಚಲವಾದಿ, ರೇಣುಕವ್ವ ಮೈದೂರ, ಚೆನ್ನವ್ವ ದೊಡ್ಡಮನಿ, ಹನುಮವ್ವ ಕಿತ್ತೂರ, ಪ್ರವೀಣ ಲಮಾಣಿ, ಮನೋಜ ಲಮಾಣಿ, ವಿಕ್ರಂ ಲಮಾಣಿ, ಆರ್.ಎಸ್. ಸಾವಕ್ಕನವರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts