More

  ಕಾಲು ಜಾರಿ ನದಿಗೆ ಬಿದ್ದು ಯುವತಿ ಸಾವು

  ಮುಳಬಾಗಿಲು: ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಯುವತಿ ಶನಿವಾರ ಮಧ್ಯಾಹ್ನ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದಾಳೆ.
  ಮುದಿಗೆರೆ ಗ್ರಾಮದ ಮಂಜುನಾಥ್​ ಪುತ್ರಿ ವೆನ್ನೆಲಾ (18) ಮೃತೆ.

  ತಾಲೂಕಿನ ನಂಗಲಿ ಸಮೀಪದ ಮುದಿಗೆರೆ&ಮುಷ್ಟೂರು ಮಧ್ಯೆ ಹಾದುಹೋಗಿರುವ ಕೌಂಡಿನ್ಯ ನದಿಯ ನಾಲೆಗೆ ತಂಗಿ ವಂದನಾ ಹಾಗೂ ಸಂಬಂಧಿ ಅನುಷಾರೊಂದಿಗೆ ಮಧ್ಯಾಹ್ನ ಬಟ್ಟೆ ತೊಳೆಯಲು ಹೋಗಿದ್ದಳು. ಬಟ್ಟೆ ತೊಳೆಯುವಾಗ ಕಾಲುಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾಳೆ. ನಂಗಲಿ ಠಾಣೆ ಪಿಎಸ್​ಐ ವಿ.ವರಲಕ್ಷ$್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts