More

    Success Story: ತಂದೆಯ ಅನಾರೋಗ್ಯದಿಂದ ಲಕ್ಷಗಟ್ಟಲೆ ಸಂಬಳ ಬರುತ್ತಿದ್ದ ಕೆಲಸ ಬಿಟ್ಟ ಯುವತಿ ಒಂದೇ ವರ್ಷದಲ್ಲಿ ಕೋಟ್ಯಾಧಿಪತಿಯಾದಳು

    ನವದೆಹಲಿ: ಲಾಭದ ಆಸೆಯಿಂದ ಕೆಲವರು ಕೃಷಿಯನ್ನು ಆದಾಯ ತರುವ ವ್ಯಾಪಾರವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ವಿದ್ಯಾವಂತ ಯುವಕರು ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಇರುವ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹೀಗೆ ಯುವತಿಯೊಬ್ಬಳು ಲಕ್ಷಗಟ್ಟಲೆ ಸಂಬಳ ಬರುವ ಕೆಲಸವನ್ನು ಬಿಟ್ಟು ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ.

    ಸ್ಮೃಕಾ ಚಂದ್ರಕರ್ ಅವರು ಛತ್ತೀಸ್‌ಗಢದ ಧಮ್ತಾರಿ ಜಿಲ್ಲೆಯ ಕುರುದ್ ಬ್ಲಾಕ್‌ನ ಚಾರ್ಮುಡಿಯಾ ಗ್ರಾಮದ ನಿವಾಸಿ. ಈಕೆ ಎಂಬಿಎ ಪಶವಿಧರೆಯಾಗಿದ್ದಾರೆ.  ಸ್ಮೃಕಾ ಓದಿದ್ದು ಪುಣೆಯಲ್ಲಿ. ಅಲ್ಲದೆ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ ಮಾಡಿದ್ದಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ 15 ಲಕ್ಷ ವಾರ್ಷಿಕ ಪ್ಯಾಕೇಜ್‌ನೊಂದಿಗೆ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು.  ಹೀಗೆ ಕೈ ತುಂಬಾ ಸಂಬಳ ಇರುವ ಕೆಲಸ ಮಾಡುತ್ತಿರುವಾಗ ಸ್ಮೃಕಾ ಚಂದ್ರಾಕರ್ ಅವರಿಗೆ ಒಂದು ಆಘಾತ ಎದುರಾಗಿತ್ತು. ಸ್ಮೃಕಾ ತಂದೆಯ ಆರೋಗ್ಯ ಹದಗೆಟ್ಟಿತು. ಇದು ಸ್ಮೃಕಾ ಚಂದ್ರಾಕರ್ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ಎಂದು ಹೇಳಬಹುದು.

    ಸ್ಮೃಕಾ ಚಂದ್ರಾಕರ್ ಅವರ ತಂದೆ ಆ ಗ್ರಾಮದಲ್ಲಿ ಜಮೀನ್ದಾರರಾಗಿದ್ದರು. ಸ್ಮೃಕಾ ಅವರ ಕುಟುಂಬಕ್ಕೆ ಸೇರಿದ ಸಾಕಷ್ಟು ಜಮೀನು ಇದೆ. ಸ್ಮೃಕಾ ತಂದೆ  2020ರಲ್ಲಿ 23 ಎಕರೆಯಲ್ಲಿ ತರಕಾರಿ ಕೃಷಿಯನ್ನು ಪ್ರಾರಂಭಿಸಿದ್ದರು. ಆದರೆ ಸ್ಮ್ರಿಕಾ ತನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲರಲಿಲ್ಲ. ಹೀಗಿರುವಾಗ ಸ್ಮೃಕಾ ಅವರು ಕೆಲಸ ಬಿಡುವ ಅನಿವಾರ್ಯತೆ ಎದುರಾಗುತ್ತದೆ. ನೌಕರಿ ಬಿಟ್ಟು ಹಳ್ಳಿಗೆ ಬಂದ ಸ್ಮೃಕಾ ತಂದೆಗೆ ಕೃಷಿಯಲ್ಲಿ ಸಹಾಯ ಮಾಡಲು ಪ್ರಾರಂಭಿಸಿದಳು.

    ವೈಜ್ಞಾನಿಕ ವಿಧಾನಗಳನ್ನು ಬಳಸಿ ತನ್ನ ಜಮೀನಿನಲ್ಲಿ ಕೃಷಿ ಆರಂಭಿಸಿದಳು. ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಬೆಳೆಯನ್ನು ಆಯ್ಕೆ ಮಾಡಲಾಗುತ್ತದೆ. ಇದರಿಂದಾಗಿ ಒಳ್ಳೆಯ ಉತ್ಪಾದನೆ ಪ್ರಾರಂಭವಾಯಿತು.

    ರಾಜ್ಯಗಳಿಗೂ ತರಕಾರಿ ಪೂರೈಕೆ: ಸ್ವಲ್ಪ ಹಣವನ್ನು ಖರ್ಚು ಮಾಡಿ ತನ್ನ ಜಮೀನನ್ನು ಆಧುನಿಕ ಫಾರ್ಮ್ ಆಗಿ ಪರಿವರ್ತಿಸಿದಳು. ಸ್ಮೃಕಾ ಚಂದ್ರಾಕರ್ ಅವರ “ಧಾರಾ ಕೃಷಿ ಫಾರ್ಮ್” ಈಗ ದಿನಕ್ಕೆ 12 ಟನ್ ಟೊಮ್ಯಾಟೋ ಮತ್ತು 8 ಟನ್ ಬೆಂಡೆಕಾಯಿಯನ್ನು ಉತ್ಪಾದಿಸುತ್ತಿದೆ. ಈಗ ಸ್ಮೃತ  ಅವರ ವಾರ್ಷಿಕ ವಹಿವಾಟು ರೂ. 1 ಕೋಟಿಗೂ ಹೆಚ್ಚು.

    ವಿಶೇಷವೆಂದರೆ ಸ್ಮೃತಿ ಕೃಷಿಯ ಮೂಲಕ ಆದಾಯ ಗಳಿಸುವುದಲ್ಲದೆ ತನ್ನ ಜಮೀನಿನಲ್ಲಿ 150 ಮಂದಿಗೆ ಉದ್ಯೋಗ ನೀಡುತ್ತಿದ್ದಾರೆ. ಸ್ಮೃಕಾ ಫಾರ್ಮ್‌ನಲ್ಲಿ ಬೆಳೆದ ಬಿಳಿಬದನೆ ಮತ್ತು ಟೊಮೆಟೊಗಳನ್ನು ದೆಹಲಿ, ಉತ್ತರ ಪ್ರದೇಶ, ಬಿಹಾರ, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೂ ಸರಬರಾಜು ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts