More

    ಗರ್ಲ್​ ಫ್ರೆಂಡ್​ ಸಮ್ಮುಖದಲ್ಲೇ ಯುವತಿಯ ಮೇಲೆ ಅತ್ಯಾಚಾರ

    ಬೆಂಗಳೂರು: ರ‍್ಯಾಪಿಡೋ ಬೈಕ್ ಚಾಲಕನೋರ್ವ, ಸ್ನೇಹಿತನೊಂದಿಗೆ ಸೇರಿಕೊಂಡು ಕೇರಳ ಮೂಲದ ಯುವತಿಯನ್ನು ತನ್ನ ಗರ್ಲ್​ಫ್ರೆಂಡ್​ ಸಮ್ಮುಖದಲ್ಲೇ ಅತ್ಯಾಚಾರ ಮಾಡಿದ್ದಾನೆ. ಈ ಪೈಶಾಚಿಕ ಕೃತ್ಯ ಕಳೆದ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಪ್ರಕರಣದ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಗಳಾದ ಬಿಹಾರ ಮೂಲದ ರ‍್ಯಾಪಿಡೋ ಬೈಕ್ ಚಾಲಕ ಶಹಬುದ್ದೀನ್ (26) ಮತ್ತು ಆತನ ಸ್ನೇಹಿತೆ, ಅರ್ಪತ್ ಶರೀಫ್​​ (24)ನನ್ನು ಬಂಧಿಸಿದ್ಧಾರೆ.

    ಸಂತ್ರಸ್ತ ಯುವತಿ ಕುಡಿದ ಮತ್ತಿನಲ್ಲಿ ಬಾಯ್ ಫ್ರೆಂಡ್ ಮಿಟ್ ಮಾಡಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ದಾರಿ ಮಧ್ಯೆ ಯುವತಿ ಚಾಲಕ ಶಹಬುದ್ಧೀನ್ ಬಳಿ ಸಿಗರೇಟ್ ಕೇಳಿದ್ದಾಳೆ. ಹೀಗಾಗಿ ಬೈಕ್ ನಿಲ್ಲಿಸಿ ಶಹಬುದ್ಧೀನ್ ಸಿಗರೇಟ್ ತರಲು ಹೋಗಿದ್ದಾನೆ. ಈ ವೇಳೆ ಮೊಬೈಲ್​ನಲ್ಲಿ ಫೋನ್​ ಪೇ ಕೆಲಸ ಮಾಡಿಲ್ಲವೆಂದು, ತನ್ನ ಸ್ನೇಹಿತ ಅರ್ಪತ್ ಶರೀಫ್​ಗೆ ಕರೆ ಮಾಡಿ ಹಣ ಕೇಳಿದ್ದಾನೆ.

    ಅರ್ಪತ್ ಶರೀಫ್​ ಹಣ ಯಾಕೆಂದು ಕೇಳಿದ್ದಾನೆ. ಆಗ ಶಹಬುದ್ಧೀನ್, ಹುಡುಗಿಯೊಬ್ಬಳನ್ನು ಡ್ರಾಪ್ ಮಾಡಲು ಹೋಗುತ್ತಿದ್ದೇನೆ. ಆಕೆ ಕುಡಿದ ಮತ್ತಿನಲ್ಲಿ ಸಿಗರೇಟ್ ಕೇಳಿದ್ದಾಳೆ ಎಂದು ಸಂಪೂರ್ಣ ವಿಷಯ ತಿಳಿಸಿದ್ದಾನೆ. ಈ ವೇಳೆ ಇವರಿಬ್ಬರು ಯುವತಿಯನ್ನು ಅತ್ಯಾಚಾರ ಮಾಡುವ ಪ್ಲಾನ್ ಮಾಡಿ, ಮಾತನಾಡಿಕೊಂಡಿದ್ದಾರೆ.

    ಸ್ನೇಹಿತರಿಬ್ಬರು ಮಾತನಾಡಿಕೊಂಡಂತೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಶಹಬುದ್ಧೀನ್ ತನ್ನ ರೂಮಿಗೆ ಕರೆದೊಯ್ದಿದ್ದಾನೆ. ನಂತರ ಇಬ್ಬರು ಸೇರಿಕೊಂಡು ಆಕೆಯ ಮೇಲೆ ಪೈಶಾಚಿಕಿ ಕೃತ್ಯ ನಡೆಸಿದ್ದಾರೆ. ಈ ವೇಳೆ ಶಹಬುದ್ಧೀನ್ ಸ್ನೇಹಿತೆಯೂ ಇದ್ದಳು.

    ಪಾನಮತ್ತಳಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು, ಪ್ರಜ್ಞೆ ಬಂದ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಈ ವೇಳೆ ಏನೂ ಅರಿಯದಂತೆ ವರ್ತಿಸಿದ್ದಾರೆ.

    ಮನೆಗೆ ಹೋದ ನಂತರ ಯುವತಿಗೆ ದೇಹದಲ್ಲಿ ನೋವು ಕಾಣಿಸಿಕೊಂಡಿದ್ದರಿಂದ, ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬ ಅನುಮಾನ ಬಂದಿದೆ. ಕೂಡಲೇ ತನ್ನ ಬಾಯ್​ಫ್ರೆಂಡ್​​ಗೆ ಕರೆ ಮಾಡಿ, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ವೇಳೆ ಅತ್ಯಾಚಾರ ನಡೆದಿರುವುದು ಖಾತ್ರಿಯಾಗಿದೆ.

    ‘ಕಳೆದ ಶುಕ್ರವಾರ ನ. 25ರ ರಾತ್ರಿ ಈ ಘಟನೆ ನಡೆದಿದ್ದು, ಕೇರಳ ಮೂಲದ 22 ವರ್ಷದ ಯುವತಿ ಸ್ನೇಹಿತನ ಮನೆಯಿಂದ ತನ್ನ ಮನೆಗೆ ಹೋಗಲು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಾಳೆ. ಈ ವೇಳೆ ಯುವತಿಯನ್ನು ಬೈಕ್ ಮೇಲೆ ಕೂರಿಸಿಕೊಂಡ ಆರೋಪಿ ಶಹಬುದ್ಧೀನ್, ತನ್ನ ಸ್ನೇಹಿತನ ರೂಮ್​ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಇಬ್ಬರೂ ಸೇರಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವಕರ ಪೈಶಾಚಿಕ ಕೃತ್ಯಕ್ಕೆ ಒರ್ಬ ಯುವತಿ ಕೂಡ ಸಾಥ್ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮೂವರನ್ನು ಬಂಧನ ಮಾಡಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts