More

    ಚಿಕ್ಕ ಮಗುವನ್ನು ಟಾರ್ಗೆಟ್​ ಮಾಡಲಾಗ್ತಿದೆ: ಸನಾತನ ವಿವಾದದ ಬಗ್ಗೆ ನಟ ಕಮಲ್​ ಹಾಸನ್​ ಪ್ರತಿಕ್ರಿಯೆ

    ಕೊಯಮತ್ತೂರು: ಸನಾತನ ಧರ್ಮದ ಬಗ್ಗೆ ಮಾತನಾಡಿರುವ ಡಿಎಂಕೆ ನಾಯಕ ಮತ್ತು ತಮಿಳುನಾಡು ಯುವ ಸಬಲೀಕರಣ ಸಚಿವ ಉದಯನಿಧಿ ಸ್ಟಾಲಿನ್​ರನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದು ಮಕ್ಕಳ್​ ನಿಧಿ ಮೈಯಂ ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲ್​ ಹಾಸನ್ ಅಭಿ​ಪ್ರಾಯಪಟ್ಟಿದ್ದಾರೆ.

    ನಿನ್ನೆ (ಸೆ.22) ಕೊಯಮತ್ತೂರಿನಲ್ಲಿ ನಡೆದ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಮಲ್​ ಹಾಸ್​ನ, ಉದಯನಿಧಿ ಹೆಸರೇಳದೆ, ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ಸನಾತನ ಧರ್ಮದ ಬಗ್ಗೆ ಮಾತನಾಡಿದ ಚಿಕ್ಕ ಮಗುವನ್ನು ಟಾರ್ಗೆಟ್​ ಮಾಡುತ್ತಿವೆ ಎಂದು ಟೀಕಿಸಿದರು.

    ಸನಾತನ ಧರ್ಮದ ಬಗ್ಗೆ ಸಚಿವರು ನೀಡಿರುವ ಹೇಳಿಕೆಯಲ್ಲಿ ಹೊಸದೇನೂ ಇಲ್ಲ ಎಂದು ಹೇಳಿದ ಕಮಲ್​ ಹಾಸನ್​, ದ್ರಾವಿಡ ಚಳವಳಿಯ ನಾಯಕರಾದ ಉದಯನಿಧಿ ಅವರ ತಾತ ಮತ್ತು ಮಾಜಿ ಸಿಎಂ ದಿವಂಗತ ಎಂ ಕರುಣಾನಿಧಿ ಕೂಡ ಈ ಬಗ್ಗೆ ಹಿಂದೆ ಮಾತನಾಡಿದ್ದಾರೆ. ಸುಧಾರಣಾವಾದಿ ನಾಯಕ ಪೆರಿಯಾರ್ ವಿ. ರಾಮಸಾಮಿ ಅವರ ಸಾಮಾಜಿಕ ಅನಿಷ್ಟಗಳ ವಿರುದ್ಧ ಎಷ್ಟು ಕೋಪವಿದೆ ಎಂಬುದನ್ನು ನಾಯಕನ ಜೀವನದಿಂದ ಅರ್ಥಮಾಡಿಕೊಳ್ಳಬಹುದು. ಸನಾತನ ಎಂಬ ಪದವನ್ನು ನಮ್ಮಂಥವರು ಅರ್ಥ ಮಾಡಿಕೊಂಡಿರುವುದು ಪೆರಿಯಾರ್ ಅವರಿಂದ ಮಾತ್ರ ಎಂದರು.

    ಇದನ್ನೂ ಓದಿ: 15 ಲಕ್ಷ ಬಿಯರ್​ ಬಾಟಲಿಗಳಿಂದ ಬೌದ್ಧ ಮಂದಿರ ನಿರ್ಮಾಣ: ಈ ವಿಸ್ಮಯ ತಾಣದ ಹಿಂದಿದೆ ಸನ್ಯಾಸಿಗಳ ಶ್ರಮ

    ಪೆರಿಯಾರ್ ಅವರು ದೇವಾಲಯದ ಆಡಳಿತಗಾರರಾಗಿದ್ದರು ಮತ್ತು ಕಾಶಿಯಲ್ಲಿದ್ದಾಗ ಪೂಜೆಯನ್ನು ಸಹ ಮಾಡಿದ್ದರೂ, ಅವರು ಎಲ್ಲವನ್ನೂ ತ್ಯಜಿಸಿದರು ಮತ್ತು ತಮ್ಮ ಇಡೀ ಜೀವನವನ್ನು ಜನರ ಸೇವೆಗೆ ಮುಡಿಪಾಗಿಟ್ಟರು. ಆಡಳಿತಾರೂಢ ಡಿಎಂಕೆಯಾಗಲಿ ಅಥವಾ ಯಾವುದೇ ಪಕ್ಷವಾಗಲಿ ಪೆರಿಯಾರ್ ತಮಗೆ ಮಾತ್ರ ಸೇರಿದವರು ಎಂದು ಹೇಳಿಕೊಳ್ಳುವಂತಿಲ್ಲ, ಇಡೀ ತಮಿಳುನಾಡು ಅವರನ್ನು ತಮ್ಮ ನಾಯಕ ಎಂದು ಆಚರಿಸಬೇಕು. ಪೆರಿಯಾರ್ ಅವರನ್ನು ಗೌರವಿಸುವವರಲ್ಲಿ ನಾವೂ ಕೂಡ ಒಬ್ಬರು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ 2024ರ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಕಮಲ್​ ಹಾಸನ್​, ಬಿಜೆಪಿ ಆಡಳಿತವು ಅವರ ಅನುಕೂಲಕ್ಕೆ ಅನುಗುಣವಾಗಿ ಚುನಾವಣೆಯನ್ನು ಮುನ್ನಡೆಸಲು ಪ್ರಯತ್ನಿಸಬಹುದು ಎಂದರು. (ಏಜೆನ್ಸೀಸ್​)

    ಕಾವೇರಿ ಕಿಚ್ಚಿಗೆ ಸಕ್ಕರೆ ನಾಡು ಸ್ತಬ್ಧ: ಮಂಡ್ಯ ಬಂದ್​ಗೆ JDS-BJP ನಾಯಕರ ಸಾಥ್​, ಇಂದು ಸಂಚಾರದಲ್ಲಿ ವ್ಯತ್ಯಯ

    ಏಷ್ಯಾಡ್​ನಲ್ಲಿ ಎಲ್ಲ ಪದಕಕ್ಕೂ ಒಂದೇ ಮೌಲ್ಯವಿಲ್ಲ! ವ್ಯತ್ಯಾಸ ಮೂಡಲು ಕಾರಣ ಹೀಗಿದೆ…

    ಏಷ್ಯನ್​ ಗೇಮ್ಸ್​ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ವಿಶೇಷತೆಗಳು ಹೀಗಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts