More

    ನನ್ನ ಹತ್ಯೆಗೆ ಸ್ಕೆಚ್ ಹಾಕಿದ್ದರ ಬಗ್ಗೆ 15 ದಿನಗಳ ಮುಂಚೆಯೇ ತಿಳಿದಿತ್ತು ಎಂದ ಶಾಸಕ ವಿಶ್ವನಾಥ್

    ಬೆಂಗಳೂರು: ಯಲಹಂಕ ಶಾಸಕ ವಿಶ್ವನಾಥ್​ ಹತ್ಯೆಗೆ ಕಾಂಗ್ರೆಸ್​ ಮುಖಂಡ ಗೋಪಾಲಕೃಷ್ಣ ಸ್ಕೆಚ್ ಹಾಕಿದ್ದರು ಎನ್ನಲಾದ ಮಹತ್ವದ ವಿಡಿಯೋ ಸಿಸಿಬಿ ಕೈಗೆ ಸಿಕ್ಕಿದ್ದು, ರಾಜ್ಯರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ವಿಶ್ವನಾಥ್ ದೂರು ದಾಖಲಿಸಿದ್ದಾರೆ. ಬಳಿಕ ಈ ಪ್ರಕರಣ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

    ಸುಪಾರಿ ಕೊಟ್ಟು ಶಾಸಕರ ಹತ್ಯೆ ಪಿತೂರಿ ನಡೆಸಿರುವುದು ದಿಗ್ಭ್ರಾಂತಿ ಹುಟ್ಟಿಸಿದೆ. ಕರ್ನಾಟಕ ರಾಜಕಾರಣದಲ್ಲಿ ಆತಂಕ ಹುಟ್ಟಿಸುವ ಬೆಳವಣಿಗೆ ಇದಾಗಿದ್ದು, ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಒತ್ತಾಯಿಸಿದರು. ವಿಧಾನಸೌಧದ ಪಕ್ಷದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಶಾಸಕರು, ನನ್ನ ಹತ್ಯೆಗೆ ಸ್ಕೆಚ್ ಹಾಕಿದ್ದರ ಬಗ್ಗೆ 15 ದಿನಗಳ ಮುಂಚೆಯೇ ತಿಳಿದಿತ್ತು. ನಾನೆಂದೂ ದ್ವೇಷದ‌ ರಾಜಕಾರಣ ಮಾಡಿಲ್ಲ. ಯಾವುದೇ ಭಯವೂ ಇಲ್ಲ. ಭದ್ರತೆ ಕೊಡಿ ಎಂದು ಕೇಳಲ್ಲ. ಆದರೆ ಸರ್ಕಾರವೇ ನೀಡಿದರೆ ಬೇಡವೆನ್ನಲ್ಲ ಎಂದರು. ಶಾಸಕ ವಿಶ್ವನಾಥ್ ಹೇಳಿಕೆ. ಕುಳ್ಳ ದೇವರಾಜ್ ಹೆಸರಿನಲ್ಲಿ ಕ್ಷಮಾಪಣಾ ಪತ್ರವೊಂದು ನಿನ್ನೆ ಸಂಜೆ 7.30ಕ್ಕೆ ಮನೆಗೆ ಹೋದಾಗ ಸಿಕ್ಕಿತು. ಅದರಲ್ಲಿ ವಿಡಿಯೋ ಕೂಡ‌ ಇತ್ತು. ನನ್ನ ವಿರುದ್ಧ ಸೋತಿದ್ದ ಗೋಪಾಲಕೃಷ್ಣ ಕೊಲೆಗೆ ಸಂಚು ಮಾಡಿದ್ದಾರೆ. ವಿಡಿಯೋ ಯಾವಾಗಿನದ್ದು ಎಂಬುದು ನನಗೆ ಗೊತ್ತಿಲ್ಲ. ಕುಳ್ಳ ದೇವರಾಜನೇ ವಿಡಿಯೋ ಮತ್ತು ಪತ್ರವನ್ನು ಸಿಎಂ ಹಾಗೂ ಗೃಹ ಸಚಿವರಿಗೆ ಕಳುಹಿಸಿದ್ದಾನೆ. ಕುಳ್ಳ ದೇವರಾಜ್ ಸಹ ಕ್ರಿಮಿನಲ್. ವಿಡಿಯೋ ಸುಮಾರು ಮೂರೂವರೆ ಗಂಟೆ ಇದೆ. ಗೋಪಾಲಕೃಷ್ಣ ಇಲ್ಲವೇ, ಕುಳ್ಳ ದೇವರಾಜ್ ಜತೆಗೆ ಯಾವುದೇ ವ್ಯವಹಾರ ಇಟ್ಟುಕೊಂಡಿಲ್ಲ. ತನಿಖೆ ಮಾಡಿ, ಸತ್ಯಾಸತ್ಯತೆ ಬೆಳಕಿಗೆ ಬರಬೇಕು ಎಂದು ಒತ್ತಾಯಿಸಿದರು.

    ನನ್ನ ಹತ್ಯೆಗೆ ಸ್ಕೆಚ್ ಹಾಕಿದ್ದರ ಬಗ್ಗೆ 15 ದಿನಗಳ ಮುಂಚೆಯೇ ತಿಳಿದಿತ್ತು ಎಂದ ಶಾಸಕ ವಿಶ್ವನಾಥ್

    ಹಿರಿಯ ರಾಜಕಾರಣಿ ಒತ್ತಡ ಹಾಕಿ ಗೋಪಾಲಕೃಷ್ಣರನ್ನು ಬಿಡಿಸಿದ್ದಾರೆ ಎಂದ ಎಸ್.ಆರ್.ವಿಶ್ವನಾಥ್, ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ. ಸಂಪೂರ್ಣ ತನಿಖೆ ಮಾಡುತ್ತಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು‌ ಸೂಕ್ತ ತನಿಖೆಯ ಭರವಸೆ ನೀಡಿದ್ದು, ಎಲ್ಲ ಪಕ್ಷಗಳ ಶಾಸಕರು ಕರೆ ಮಾಡಿ ಧೈರ್ಯ‌ ತುಂಬಿದ್ದಾರೆ ಎಂದರು.

    ರೌಡಿಗಳ ಜತೆಗೆ ಸ್ನೇಹವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ವಿಶ್ವನಾಥ್, ಡಿ.ಕೆ.ಶಿವಕುಮಾರ್ ಕೂಡ ನನ್ನ ಸ್ನೇಹಿತರೇ. ಹಾಗಿದ್ದರೆ ಅವರೇನು ಎಂಬುದು ಅವರೇ ನಿರ್ಧರಿಸಲಿ. ಡಿಕೆಶಿ ಹಿನ್ನೆಲೆ ಏನೆಂಬುದು ಗೊತ್ತಿದೆ ಎಂದು ಮಾತಿನಲ್ಲೇ ತಿವಿದರು.

    ಯಲಹಂಕ ಶಾಸಕ ವಿಶ್ವನಾಥ್​ ಹತ್ಯೆಗೆ ಕಾಂಗ್ರೆಸ್​ ಮುಖಂಡ ಸ್ಕೆಚ್? ಸಿಸಿಬಿ ಕೈಗೆ ಸಿಕ್ಕಿದೆ ಮಹತ್ವದ ವಿಡಿಯೋ

    https://www.vijayavani.net/devraguda-high-school-teacher-mallappa-talawara-case/

    ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬು! ಸಚಿವರೇ ನಿಮಗೆ ಅಕ್ಕ-ತಂಗಿಯರು ಇಲ್ವಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts