More

    ರೌಡಿಶೀಟರ್ ಮನೆಗಳ ದಿಢೀರ್ ತಪಾಸಣೆ

    ಬಾಗಲಕೋಟೆ : ಜಿಲ್ಲಾದ್ಯಂತ ಮಂಗಳವಾರ ಬೆಳ್ಳಂ ಬೆಳಗ್ಗೆ ರೌಡಿಶೀಟರ್ ಹಾಗೂ ಕಮ್ಯುನಲ್ ಗುಂಡಾಗಳ ಮನೆಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

    ಮನೆಗಳ ತಪಾಸಣೆ ಮಾಡಿದಾಗ ಕೆಲ ಬಾಗಲಕೋಟೆ ಹಾಗೂ ನವನಗರದ ರೌಡಿಶೀಟರ್ ಗಳ ಮನೆಗಳಲ್ಲಿ ಎರಡು ತಲವಾರ್, ಚೂರಿ, ಚಾಕು, ಕೊಡಲಿ, ಕೊಯ್ತ, ಬೈಕ್ ಸೈರನ್ಸರ್ ಗಳು ಪತ್ತೆ ಆಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಾಗಲಕೋಟೆ ನಗರ ಸೇರಿದಂತೆ ಜಿಲ್ಲಾದ್ಯಂತ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವು ಕೋಮು ಹಾಗೂ ಇತರೆ ಗಲಾಟೆಗಳ ಹಿನ್ನಲೆಯಲ್ಲಿ ಪೊಲೀಸರು ಈ ತಪಾಸಣೆಯನ್ನು ನಡೆಸಿದ್ದಾರೆ.

    ಜಿಲ್ಲಾದ್ಯಂತ ಒಟ್ಟು 77 ರೌಡಿಶೀಟರ್ ಹಾಗೂ ಕಮ್ಯುನಲ್ ಗುಂಡಾಗಳ ಮನೆಗಳನ್ನು ತಪಾಸಣೆ ಮಾಡಿದ್ದಾರೆ. ಬಾಗಲಕೋಟೆ ಹಾಗೂ ನವನಗರ ವ್ಯಾಪ್ತಿಯಲ್ಲಿ 19 ಮನೆಗಳ ಮೇಲ ದಾಳಿ ನಡೆಸಿದ್ದಾರೆ.

    ನವನಗರ ಮುರಳಿ ಚವ್ಹಾಣ ಎನ್ನುವವರ ಮನೆಯಲ್ಲಿ 16 ಲೀಟರ್ ಕಳ್ಳಬಟ್ಟಿ ಪತ್ತೆ ಆಗಿದ್ದು, ಅವರ ವಿರುದ್ದ ಊರು ದಾಖಲಿಸಿದ್ದಾರೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ಬಾಗಲಕೋಟೆ ಹಾಗೂ ನವನಗರದಲ್ಲಿ ಇತ್ತೀಚಿಗೆ ಕೋಮು ಸಂಘರ್ಷಗಳು ನಡೆದಿದ್ದು, ಘಟನೆಗಳಲ್ಲಿ ದುರುದ್ದೇಶ ಹಾಗೂ ಕೈವಾಡ ಏನಾದರೂ ಇದೆಯಾ ಎನ್ನುವ ಪ್ರಶ್ನೆಗಳು ಉದ್ಭವ ಆಗಿದ್ದರಿಂದ ರೌಡಿಶೀಟರ್ ಹಾಗೂ ಕಮ್ಯುನಲ್ ರೌಡಿಗಳ ಮನೆಗಳನ್ನು ಏಕಕಾಲಕ್ಕೆ ತಪಾಸಣೆ ಮಾಡಲಾಗಿದೆ. ಮನೆಗಳಲ್ಲಿ ಪತ್ತೆ ಆಗಿರುವ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಂಡಿದ್ದು, ಕೆಲ ರೌಡಿಗಳ ಚಲನ, ವಲನಗಳ ಮೇಲೆ ನಿಗಾ ವಹಿಸಲಾಗಿದೆ.

    | ಜಯಪ್ರಕಾಶ್
    ಎಸ್ಪಿ, ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts