More

    ಬಸವಣ್ಣನ ತತ್ವ ಪಾಲಿಸುವ ಮಹಿಳೆ ಪೂಜ್ಯನೀಯ

    ಹೊಳೆನರಸೀಪುರ: ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ತತ್ವವನ್ನು ಚಾಚೂ ತಪ್ಪದೆ ಪಾಲನೆ ಮಾಡುವ ಮಹಿಳೆಯರು ಪೂಜ್ಯನೀಯರು ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಬಣ್ಣಿಸಿದರು.

    ಪಟ್ಟಣದ ಪುರಸಭೆ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ಸಬಲೀಕರಣ ಎಂಬುದು ನಮ್ಮ ಮನದಲ್ಲಿ ಬರಬೇಕು. ಮಹಿಳೆಯಿಂದ ನಾನಾ ರೀತಿಯ ಸಹಾಯ ಪಡೆಯುವ ಪುರುಷರು ಮಹಿಳಾ ಸಬಲೀಕರಣ ವಿಷಯ ಬಂದಾಗ ಹಿಂದೇಟು ಹಾಕುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

    ಮಹಿಳೆಯರಿಗೆ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ನಾನಾ ರೀತಿಯ ದೈಹಿಕ ಕಸರತ್ತು ಆಗುವ ಕಾರಣದಿಂದ ಅವರಿಗೆ ಯೋಗದ ಅವಶ್ಯಕತೆ ಇಲ್ಲ. ಹೃದಯಾಘಾತವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು. ಇದಕ್ಕೆ ನಾನಾ ರೀತಿಯ ಕಾರಣಗಳು ಇದ್ದರೂ ಮಹಿಳೆ ತನ್ನ ಕಾಯಕವನ್ನು ತನ್ಮಯತೆಯಿಂದ ತೊಡಗಿಸಿಕೊಳ್ಳುವ ಕಾರಣದಿಂದ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ ಮತ್ತು ಸಮಚಿತ್ತವಿರುತ್ತದೆ ಎಂದರು.

    ಮಹಿಳಾ ಸ್ವಸಹಾಯ ಸಂಘದ ರೂಪಾ ಮಾತನಾಡಿ, ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ನಾನಾ ಸ್ತರದಲ್ಲಿ ಕರ್ತವ್ಯ ನಿರ್ವಹಿಸುವ ನಾವು ನಮ್ಮ ಜವಾಬ್ದಾರಿ ಅರಿತು ನಮ್ಮ ತಾಯಿ-ತಂದೆಗೆ ನೀಡವಂತೆ ಪ್ರೀತಿ ಹಾಗೂ ಗೌರವವನ್ನು ನಮ್ಮ ಅತ್ತೆ ಮಾವನವರಿಗೆ ನೀಡಬೇಕು. ಜೀವನದಲ್ಲಿ ಅವರೂ ಸಾಕಷ್ಟು ಶ್ರಮದಿಂದ ಮಕ್ಕಳ ಪಾಲನೆ ಮಾಡಿರುವಾಗ ನಾವು ಅವರನ್ನು ವೃದ್ಧಾ ಶ್ರಮಕ್ಕೆ ಕಳುಹಿಸುವುದು ಸರಿಯಲ್ಲ. ಮುಂದೊದು ದಿನ ನಾವುಗಳೂ ಸಹ ಅತ್ತೆ-ಮಾವ ಆಗುತ್ತೇವೆ ಎಂಬ ಪರಿಜ್ಞಾನ ಇಟ್ಟುಕೊಂಡು ಅವರನ್ನು ಗೌರವದಿಂದ ಕಾಣಬೇಕು ಎಂದರು.

    ಪುರಸಭೆ ಮಾಜಿ ಅಧ್ಯಕ್ಷರಾದ ಸುಧಾ, ನಳಿನಿ, ಜ್ಯೋತಿ, ವೀಣಾ, ಸದಸ್ಯರಾದ ನಿಂಗಯ್ಯ, ಇಂದೂ ನಾಗರಾಜ್ ಮಾತನಾಡಿದರು.
    ಪೌರ ಕಾರ್ಮಿಕರಾದ ರಾಮಮ್ಮ ಹಾಗೂ ಗೌರಿ ಮತ್ತು ಪರಸಭೆ ಕಚೇರಿ ವ್ಯವಸ್ಥಾಪಕಿ ಮೋಹನಕುಮಾರಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
    ಪುರಸಭೆ ಸದಸ್ಯೆಯರಾದ ರಾಧಾ, ತ್ರಿಲೋಚನಾ, ಶಫಿನಾಜ್, ಟಿ.ಶಾಂತಿ, ನಾಗಮಣಿ, ಡಿ.ಜಯಲಕ್ಷ್ಮೀ, ಸಾವಿತ್ರಿ, ಮಮತಾಕುಮಾರಿ, ಅಧಿಕಾರಿಗಳಾದ ರುಚಿದರ್ಶಿನಿ, ಪಂಕಜಾ, ಮೋಹನಕುಮಾರಿ, ನಾಗೇಂದ್ರಕುಮಾರ್, ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts