More

    ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

    ಕೈರೋ: ಬರ್ತ್​ ಡೇ ಪಾರ್ಟಿಗಳ ಕೇಕ್​ ಹೇಗಿರಬೇಕು? ಚಿಕ್ಕ ಮಕ್ಕಳಿಗಾದರೆ ಡಾಲ್​, ಮಿಕ್ಕಿ ಮೌಸ್​ ಹೀಗೆ ವಿಶೇಷ ವಿನ್ಯಾಸದ ಕೇಕ್​ ತಯಾರಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆ ಬರ್ತ್​ ಡೇ ಪಾರ್ಟಿಗಾಗಿ ತಯಾರಿಸಿದ್ದ ಕೇಕ್​ ಅದೆಷ್ಟು ವಿಚಿತ್ರವಾಗಿತ್ತೆಂದರೆ ಕೇಕ್​ ನೋಡಿದ ಪೊಲೀಸರು ಸೀದಾ ಬಂದು ಕೇಕ್​ ಮಾಡಿದ ಮಹಿಳೆಯನ್ನು ಬಂಧಿಸಿ ಕರೆದೊಯ್ದಿದ್ದಾರೆ.

    ಇದನ್ನೂ ಓದಿ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವಂತೆ ಆಗ್ರಹಿಸಬೇಡಿ! ಈ ಮಾತಿನ ಹಿಂದಿದೆ ಮಹತ್ವಪೂರ್ಣ ಸಲಹೆ…

    ಇಂತದ್ದೊಂದು ವಿಚಿತ್ರ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. ಇತ್ತೀಚೆಗೆ ಕೈರೋ ಸ್ಪೋರ್ಟ್​ ಕ್ಲಬ್​ನಲ್ಲಿ ಬರ್ತ್​ ಡೇ ಪಾರ್ಟಿ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಆ ಪಾರ್ಟಿಗೆ ನೋಂದಣಿ ಪಡೆದಿರುವ ಚೆಫ್​ ಮಹಿಳೆ ಪೇಸ್ಟ್ರಿ ತಯಾರಿಸಿ ಕೊಟ್ಟಿದ್ದಾರೆ. ಅಂದ ಹಾಗೆ ಸಣ್ಣ ಸಣ್ಣ ಕಪ್​ ಕೇಕ್​ಗಳನ್ನೇ ಪಾರ್ಟಿಗೆ ತರಿಸಲಾಗಿದೆ. ಈ ಎಲ್ಲ ಕೇಕ್​ಗಳ ಮೇಲೆ ಗಂಡು ಮಕ್ಕಳ ಮರ್ಮಾಂಗ ಮತ್ತು ಹೆಣ್ಣ ಮಕ್ಕಳ ಒಳುಡುಪಿನ ಚಿತ್ರವನ್ನು ಡಿಸೈನ್​ ಮಾಡಲಾಗಿದೆ. ಈ ವಿಶೇಷ ಕೇಕ್​ಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಡಲಾಗಿದೆ.

    ಇದನ್ನೂ ಓದಿ: ಮಾಸ್ಕ್ ಧರಿಸುವುದಿಲ್ಲವೆ? ಹಾಗಿದ್ದರೆ ಹೊಡೆಯಿರಿ ಬಸ್ಕಿ- ಪೊಲೀಸರಿಗಿದೆ ಟಾರ್ಗೆಟ್​!

    ಕೇಕ್​ಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದನ್ನು ನೋಡಿದ ಅಲ್ಲಿನ ಪೊಲೀಸರು ತಕ್ಷಣ ಕೇಕ್​ ತಯಾರಿಸಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಧಾರ್ಮಿಕವಾಗಿ ಇಂತಹ ಕೆಲಸ ಮಾಡುವುದು ನಿಷಿದ್ಧ ಎಂದು ಹೇಳಲಾಗಿದೆ. ಇದೀಗ ಈ ರೀತಿ ಕೇಕ್​ ಮಾಡಿಸುವುದರ ಹಿಂದೆ ಕ್ಲಬ್​ನ ಕೈವಾಡವೂ ಇದೆಯೇ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಧಾರ್ಮಿಕ ಚಿಂತನೆಗಳನ್ನು ನಂಬುವ ದೇಶದಲ್ಲಿ ಈ ರೀತಿ ಅಸಭ್ಯ ಕೆಲಸ ಮಾಡಿರುವುದು ತಪ್ಪು ಎಂದು ತಿಳಿಸಲಾಗಿದೆ. ಬಂಧಿತಳಾಗಿದ್ದ ಮಹಿಳೆ ಜಾಮೀನು ಪಡೆದು ಹೊರಬಂದಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಎಣ್ಣೆ ಕುಡಿಯಲು ಹೋದವನು ವಾಪಾಸು ಬರಲೇ ಇಲ್ಲ; ಸ್ಕೆಚ್​ ಹಾಕಿ ಕೊಲೆ ಮಾಡಿಸಿದಳಾ ಪತ್ನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts