More

    ಜೆಎನ್​ಯು ಹಿಂಸಾಚಾರ ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯೋರ್ವರು ಹಿಡಿದ ಪೋಸ್ಟರ್​ ನೋಡಿ ಕೆಂಡಾಮಂಡಲರಾಗಿರುವ ಬಿಜೆಪಿ ನಾಯಕರು

    ಮುಂಬೈ: ದೆಹಲಿಯ ಜೆಎನ್​ಯುದಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಮುಂಬೈನ ಗೇಟ್ ವೇ ಆಫ್​ ಇಂಡಿಯಾ ಬಳಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯೋರ್ವರು ಹಿಡಿದಿದ್ದ ಪೋಸ್ಟರ್​ವೊಂದು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

    ಜೆಎನ್​ಯು ಹಿಂಸಾಚಾರ ವಿರೋಧಿ ಪ್ರತಿಭಟನೆಯಲ್ಲಿ ಈ ಮಹಿಳೆ Free Kashmir ( ಸ್ವತಂತ್ರ ಕಾಶ್ಮೀರ) ಎಂಬ ಪೋಸ್ಟರ್​ ಹಿಡಿದಿದ್ದರು. ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮುಖಂಡರು, ಜೆಎನ್​ಯು ಸಂಬಂಧ ಪ್ರತಿಭಟನೆಯಲ್ಲಿ ಕಾಶ್ಮೀರ ವಿಚಾರವೇಕೆ. ಕಾಶ್ಮೀರ ವಿಮುಕ್ತಿಗೊಳಿಸಿ ಎಂಬಂತಹ ಪೋಸ್ಟರ್​ ಏಕೆ? ಇದು ಪ್ರತ್ಯೇಕತಾವಾದಿಗಳ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಮಹಿಳೆಯನ್ನು ವಿಚಾರಣೆಗೆ ಒಳಪಡಿಸುವುದಕ್ಕೋಸ್ಕರ ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಕಾಶ್ಮೀರಕ್ಕೆ ಸಂಬಂಧಪಟ್ಟ ಪೋಸ್ಟರ್ ಹಿಡಿದುಕೊಂಡಿದ್ದಾಗಿ ಮಹಿಳೆ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈ ಪೋಸ್ಟರ್​ ಕಾಣಿಸುತ್ತಿರುವ ಎಲ್ಲ ವಿಡಿಯೋಗಳು, ಫೂಟೇಜ್​ಗಳನ್ನೂ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಫ್ರೀ ಕಾಶ್ಮೀರ್​ ಪೋಸ್ಟರ್​ ಹಿಡಿದ ಮಹಿಳೆ ಮಾಧ್ಯಮವೊಂದರ ಬಳಿ ಮಾತನಾಡಿ, ಕಳೆದ ಆರು ತಿಂಗಳಿಂದಲೂ ಕಾಶ್ಮೀರಿಗಳ ಮೇಲೆ ನಿಯಂತ್ರಣ ಹೇರಲಾಗಿದೆ. ಅವರಿಗೆ ಮೂಲ ಮಾನವ ಹಕ್ಕುಗಳನ್ನು ನೀಡಲು ಆಗ್ರಹಿಸಿ ಈ ಪೋಸ್ಟರ್​ ಹಿಡಿದಿದ್ದಾಗಿ ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಅವರು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬೈನಲ್ಲಿ ಇಂತಹ ಪ್ರತ್ಯೇಕತಾವಾದಿಗಳು ಹೇಗೆ ಹುಟ್ಟಿಕೊಂಡಿದ್ದಾರೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

    ನಿಜಕ್ಕೂ ಪ್ರತಿಭಟನೆ ನಡೆಯುತ್ತಿರುವುದು ಯಾಕೆ. ಇಲ್ಲಿ ಕಾಶ್ಮೀರದ ವಿಚಾರವೇಕೆ? ಇಂತಹ ಪ್ರತ್ಯೇಕತಾವಾದಿಗಳನ್ನು ಮುಂಬೈನಲ್ಲಿ ನಾವು ಹೇಗೆ ಸಹಿಸಿಕೊಳ್ಳಬೇಕು? ಉದ್ಧವ್​ ಜೀ ನೀವು ಇಂತಹ ದೇಶದ್ರೋಹಿ ಪೋಸ್ಟರ್​ಗಳನ್ನು ಹಿಡಿದುಕೊಂಡವರನ್ನು ಸಹಿಸಿಕೊಳ್ಳುತ್ತೀರಾ ಎಂದು ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts