More

    ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ವಾಮಾಚಾರ? ಪ್ರಾಂಶುಪಾಲರ ಕೊಠಡಿಯಲ್ಲಿ ಕೆಂಪು ದಾರ-ಬೊಂಬೆ ಪತ್ತೆ!

    ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂತ್ರಿಸಿದ ಕೆಂಪು ದಾರದೊಂದಿಗೆ ಬೊಂಬೆ ಪತ್ತೆಯಾಗಿದ್ದು, ವಾಮಾಚಾರದ ಶಂಕೆ ವ್ಯಕ್ತವಾಗಿದೆ.

    ಇತ್ತೀಚಿಗೆ ಶಕುಂತಲಾ ಅವರು ಈ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೊಠಡಿಯನ್ನ ಸ್ವಚ್ಛಗೊಳಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಸಿಬ್ಬಂದಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ದಾರದಿಂದ ಕಟ್ಟಿದ ಪ್ಲಾಸ್ಟಿಕ್ ಪೇಪರ್ ಬೊಂಬೆ, ಮಂತ್ರಿಸಿದ ಕೆಂಪು ದಾರ ಪತ್ತೆಯಾಗಿದೆ.

    ಈ ಕಾಲೇಜು ಮೊದಲಿನಿಂದಲೂ ವಿದ್ಯಾರ್ಥಿಗಳು ದಾಖಲಾತಿ, ಪರೀಕ್ಷೆ, ಪ್ರಾಂಶುಪಾಲರ ಅಧಿಕಾರ ಸ್ವೀಕಾರ, ಉಪನ್ಯಾಸಕರ ವರ್ಗಾವಣೆ ಸೇರಿದಂತೆ ನಾನಾ ವಿಚಾರಗಳಿಗೆ ವಿವಾದಕ್ಕೆ ಗುರಿಯಾಗುತ್ತಿದೆ. ಸೇವಾ ಹಿರಿತನದ ಹೆಸರಿನಲ್ಲಿ ಇಲ್ಲಿನ ಉಪನ್ಯಾಸಕರ ನಿರಂತರ ಗಲಾಟೆಗಳಿಗೆ ಪ್ರಾಂಶುಪಾಲರು ಧೀರ್ಘಕಾಲಿಕವಾಗಿ ಕೆಲಸ ಮಾಡುವುದಿಲ್ಲ. ಬೇಗ ವರ್ಗಾವಣೆಯಾಗಿ ಹೋಗುತ್ತಾರೆ. ಬಹುತೇಕ ಪ್ರಭಾರ ಪ್ರಾಂಶುಪಾಲರು ಇರುತ್ತಾರೆ. ಇದರ ನಡುವೆ ಹೊಸ ಪ್ರಾಂಶುಪಾಲರು ಬಂದ ಸಂದರ್ಭದಲ್ಲಿ ಬೊಂಬೆ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

    ಪ್ರಮೋಷನ್ ಇಲ್ಲವೇ ಯಾರಾದರೂ ಉನ್ನತ ಹುದ್ದೆಗೆ ಬಂದರೆ ಕೆಲಸ ಮಾಡದೇ ಭಯದಲ್ಲಿ ವಾಪಸ್ ಹೋಗಲಿ ಎಂಬ ಕುತಂತ್ರದಲ್ಲಿ ಮಾಟ ಮಂತ್ರ ಮಾಡಿಸಿದರಾ? ಎಂಬ ಶಂಕೆ ವ್ಯಕ್ತವಾಗಿದೆ.
    ಈ ಕುರಿತು ಪ್ರತಿಕ್ರಿಯಿಸಿರುವ ನೂತನ ಪ್ರಾಂಶುಪಾಲೆ ಶಕುಂತಲಾ, ಇಲ್ಲಿ ಯಾವ ಕಾರಣಕ್ಕೆ ಬೊಂಬೆಯನ್ನು ಇಡಲಾಗಿದೆ ಎಂಬುದು ಗೊತ್ತಿಲ್ಲ. ಆದರೆ, ಒಂದು ವೇಳೆ ಯಾರಾದರೂ ಬೆದರಿಸುವ ಉದ್ದೇಶದಿಂದ ಈ ಕೆಲಸ ಮಾಡಿದ್ದರೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಲೇಜಿನ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಪ್ರಾಮಾಣಿಕ ಶ್ರಮಿಸುವುದಾಗಿ ತಿಳಿಸಿದ್ದಾರೆ.

    ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ: ಒಂದೇ ಕಾಲೇಜಿನಲ್ಲಿ ಓದುತ್ತಿದ್ದವರ ಬಾಳಲ್ಲಿ ದುರಂತ

    ಡಿಕೆಶಿ ಒಡೆತನದ ಸ್ಕೂಲ್​ಗೆ ಬಾಂಬ್​ ಬೆದರಿಕೆ ಹಾಕಿದ್ದು ಹುಚ್ಚ ವೆಂಕಟ್​ ಅಲ್ಲ, SSLC ವಿದ್ಯಾರ್ಥಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಉಣಕಲ್​ ಕೆರೆಗೆ ಹಾರಿ ತಮ್ಮ ಆತ್ಮಹತ್ಯೆ: ಸಾವಿನ ಸುದ್ದಿ ಕೇಳಿ ಅಣ್ಣನಿಗೆ ಹೃದಯಾಘಾತ… ಸಹೋದರರಿಬ್ಬರ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts