More

    ಪರಿಷತ್​​ನ ಎಸ್​.ಆರ್​.ಪಾಟೀಲ್​ ಸೇರಿ 14 ಸದಸ್ಯರು ಅಮಾನತು: ಸಭಾಪತಿ ಬಸವರಾಜ ಹೊರಟ್ಟಿ ಆದೇಶ

    ಬೆಳಗಾವಿ: ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಪರಿಷತ್​ನ ವಿಪಕ್ಷ ನಾಯಕ ಎಸ್​.ಆರ್​.ಪಾಟೀಲ್​ ಸೇರಿ ಕಾಂಗ್ರೆಸ್​ನ 14​ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಸಭಾಪತಿ ಬಸವರಾಜ ಹೊರಟ್ಟಿ ಬುದವಾರ ಅಮಾನತು ಮಾಡಿದ್ದಾರೆ.

    ಸಚಿವ ಬೈರತಿ ಬಸವರಾಜ ವಿರುದ್ಧದ ಭೂ ಕಬಳಿಕೆ ಆರೋಪಕ್ಕೆ ಸಬಂಧಿಸಿದಂತೆ ಪ್ರತಿಪಕ್ಷ ನಾಯಕರು ಚರ್ಚೆಗೆ ಆಗ್ರಹಿಸಿದರು. ಆದರೆ, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುವುದರಿಂದ ಚರ್ಚೆಗೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ನಿರಾಕರಿಸಿದರು. ಬೈರತಿ ಬಸವರಾಜು ವಿರುದ್ಧದ ಚರ್ಚೆ ಕೊನೆಗೊಳಿಸಲಾಗಿದೆ ಎಂದು ಸಭಾಪತಿ ಪ್ರಕಟಿಸುತ್ತಿದ್ದಂತೆ ಗರಂ ಆದ ಕಾಂಗ್ರೆಸ್​ ಸದಸ್ಯರು, ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಕೂಗುತ್ತಾ ಭಿತ್ತಿಪತ್ರ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

    ಮಧ್ಯ ಪ್ರವೇಶಿಸಿದ ಸಚಿವ ವಿ‌.ಸೋಮಣ್ಣ, ಸಭಾಪತಿ ಈಗಾಗಲೇ ರೂಲಿಂಗ್ ನೀಡಿದ್ದಾರೆ. ಸದನ ಉತ್ತಮವಾಗಿ ನಡೆಸಬೇಕು. ಕೋರ್ಟ್​ನಲ್ಲಿರುವ ಪ್ರಕರಣವನ್ನು ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಸದನ ನಡೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಆದರೂ ಪಟ್ಟು ಬಿಡದ ಕಾಂಗ್ರೆಸ್ ಸದಸ್ಯರು ಭೈರತಿ ಬಸವರಾಜ ರಾಜೀನಾಮೆಗೆ ಆಗ್ರಹಿಸಿದರು. ಕೊನೆಗೆ 14 ಸದಸ್ಯರನ್ನ ಒಂದು ದಿನ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಆದೇಶ ಹೊರಡಿಸಿದರು.

    ಒಂದು ದಿನದ ಅವಧಿಗೆ ಅಮಾನತು ಆದವರು ಎಸ್.ಆರ್ ಪಾಟೀಲ್, ಕಾಂಗ್ರೆಸ್ ಸಚೇತಕ ಎನ್.ನಾರಾಯಣಸ್ವಾಮಿ, ಪಿಆರ್. ರಮೇಶ್, ಬಿ.ಕೆ. ಹರಿಪ್ರಸಾದ್, ಪ್ರತಾಪ್ ಚಂದ್ರಶೆಟ್ಟಿ, ಯು.ಬಿ. ವೆಂಕಟೇಶ, ವೀಣಾ ಅಚ್ಚಯ್ಯ, ಸಿ.ಎಂ. ಇಬ್ರಾಹಿಂ, ಹರೀಶ್ ಕುಮಾರ್, ನಜೀರ್ ಅಹ್ಮದ್, ಆರ್.ಬಿ. ತಿಮ್ಮಾಪೂರ್, ಬಸವರಾಜ್ ಪಾಟೀಲ್ ಇಟಗಿ, ವಿ.ಆರ್. ರಮೇಶ್ ಮತ್ತು ಗೋಪಾಲಸ್ವಾಮಿ.

    ಕಪಿಲಾ ನದಿಗೆ ತಳ್ಳಿ ಗರ್ಭಿಣಿ ಪತ್ನಿಯನ್ನ ಕೊಂದ! ಸ್ಕ್ಯಾನಿಂಗ್​ ನೆಪದಲ್ಲಿ ಕರೆದೊಯ್ದವನ ಹಿಂದಿತ್ತು ಮಹಾ ಸಂಚು

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts