More

    ಯಾರಿಗೆ ಒಲಿಯಲಿದೆ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ? ರೇಸ್​ನಲ್ಲಿ ಹೆಬ್ಬಾಕರವಿ, ಲಕ್ಷ್ಮೀಶ್​, ಡಾ.ಪರಮೇಶ್​

    | ಜಗನ್ನಾಥ್​ ಕಾಳೇನಹಳ್ಳಿ ತುಮಕೂರು
    ದಿಢೀರ್​ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್​ಗೌಡ ಗುಡ್​ಬೈ ಹೇಳಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬಲ್ಲವರ ಹೆಗಲಿಗೆ ಸಂಘಟನೆ ಹೊಣೆ ಹೊರಿಸಲು ವರಿಷ್ಠರು ನಿರ್ಧರಿಸಿದ್ದಾರೆ. ಜಿಲ್ಲಾ ಟಕದೊಳಗಿನ ಮೂರು ಬಣಗಳನ್ನು ಸಂಭಾಳಿಸಿಕೊಂಡು ಹೋಗಬಲ್ಲಂತವರಿಗೆ ಮಣೆ ಹಾಕುವ ಸಾಧ್ಯತೆಯಿದ್ದು ಜಿಲ್ಲಾ ಪ್ರಧಾನ ಕಾರ್ಯದಶಿರ್ ಎಚ್​.ಎಸ್​.ರವಿಶಂಕರ್​ (ಹೆಬ್ಬಾಕರವಿ) ಹೆಸರು ಮುನ್ನಲೆಗೆ ಬಂದಿದೆ.

    ಪಕ್ಷದೊಳಗಿನ ಬಣ ರಾಜಕಾರಣ, ಆಂತರಿಕ ಕಲಹದಿಂದ ಬೇಸತ್ತು 1 ವರ್ಷ 3 ತಿಂಗಳಲ್ಲೇ ಜಿಲ್ಲಾಧ್ಯಕ್ಷ ಸ್ಥಾನ ಪದತ್ಯಾಗ ಮಾಡಿರುವ ಸುರೇಶ್​ಗೌಡ ಸ್ಥಾನಕ್ಕೆ ಮುಂಬರುವ ಸಾಲು, ಸಾಲು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯ ಜತೆಜತೆಗೆ ಜಾತಿಬಲ, ಹಣಬಲ ಲೆಕ್ಕಾಚಾರ ಆಧಾರದಲ್ಲೇ ನೂತನ ಸಾರಥಿಯನ್ನು ವರಿಷ್ಠರು ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ.

    ರೇಸ್​ನಲ್ಲಿ ಹೆಬ್ಬಾಕರವಿ, ಲಕ್ಷ್ಮೀಶ್​: ಸುರೇಶ್​ಗೌಡರ ಸ್ಥಾನಕ್ಕೆ ಪಕ್ಷದ ವಿಭಾಗೀಯ ಸಹಪ್ರಭಾರಿ ಲಕ್ಷ್ಮೀಶ್​, ಜಿಪಂ ಮಾಜಿ ಸದಸ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್​.ಎಸ್​.ರವಿಶಂಕರ್​ ಪ್ರಬಲ ಆಕಾಂಕ್ಷಿಗಳಾಗಿ ಹೊರಹೊಮ್ಮಿದ್ದಾರೆ. ಜಿಲ್ಲಾ ಕೋಶಾಧ್ಯಕ್ಷ ಡಾ.ಎಸ್​.ಪರಮೇಶ್​, ಮಾಜಿ ಶಾಸಕ ಕೆ.ಎಸ್​.ಕಿರಣ್​ಕುಮಾರ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್​, ಜಿ.ಎನ್​.ಬೆಟ್ಟಸ್ವಾಮಿ ಹೆಸರೂ ಕೇಳಿಬಂದಿದೆ.

    ಜಿಲ್ಲೆಯಲ್ಲಿ ಪಕ್ಷ ಈಗ ಮೂರು ಬಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್​.ಬಸವರಾಜು ಹಾಗೂ ಮಾಜಿ ಜಿಲ್ಲಾಧ್ಯಕ್ಷ ಬಿ.ಸುರೇಶ್​ಗೌಡ ನೇತೃತ್ವದಲ್ಲಿ ಪಕ್ಷದಲ್ಲಿ ಮೂರು ಬಣ ಸೃಷ್ಟಿಯಾಗಿರುವುದು ಬಹಿರಂಗ ಸತ್ಯವೆನಿಸಿದೆ. ಈ ಹಿನ್ನೆಲೆಯಲ್ಲಿ ಮೂರೂ ಬಣಗಳನ್ನು ಸರಿದೂಗಿಸಿಕೊಂಡು ಹೋಗಬಲ್ಲವರಲ್ಲಿ ಹೆಬ್ಬಾಕರವಿ ಒಂದು ತೂಕ ಉಳಿದವರಿಗಿಂತ ಹೆಚ್ಚೆನಿಸಿದ್ದಾರೆ.

    ಅಲ್ಲದೆ, ಮುಂಬರುವ ವಿಧಾನಪರಿಷತ್​, ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷ ಸಂಟನೆಗೆ ಹೆಚ್ಚಿನ ಆರ್ಥಿಕ ಹೊರೆ ಹೊರಬಲ್ಲವರು ತುರ್ತು ಅಗತ್ಯವಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಮೊದಲ ಬಾರಿ ಕಮಲ ಅರಳಿಸಿದ ಕೀರ್ತಿ, ಜಿಪಂನಲ್ಲೂ ಪಕ್ಷ ಖಾತೆ ತೆರೆಯುವಲ್ಲಿ ರವಿ ಶ್ರಮ ಇದೆ ಎಂಬುದನ್ನು ಅಲ್ಲೆಗಳೆಯುವಂತಿಲ್ಲ. ಪಕ್ಷದ ಸರ್ಕಾರ ಇದ್ದರೂ ಸಂಟನೆ ವಿಚಾರದಲ್ಲಿ ಕೈಬಿಚ್ಚುವಂತವರಿಗೆ ವರಿಷ್ಠರು ಮಣೆಹಾಕಲಿದ್ದಾರೆ. ಇನ್ನು ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್​.ಬಸವರಾಜು ಅವರ ಆಪ್ತವಲಯದಲ್ಲಿರುವ ಹೆಬ್ಬಾಕರವಿ ರೇಸ್​ನಲ್ಲಿ ಮಂಚೂಣಿಯಲ್ಲಿದ್ದಂತೆ ಕಾಣುತ್ತಿದ್ದಾರೆ.

    ಸುರೇಶ್​ಗೌಡ ಆಪ್ತ ಲಕ್ಷ್ಮೀಶ್​ ಹೆಸರನ್ನು ಉತ್ತರಾಧಿಕಾರಿಯಾಗಿ ಸೂಚಿಸುವ ಸಾಧ್ಯತೆಗಳಿವೆ. ಆದರೆ, ವರಿಷ್ಠರ ನಡೆಯಿಂದ ಬೇಸರಗೊಂಡಿರುವ ಗೌಡರು ಸ್ವಲ್ಪದಿನ ಪಕ್ಷ, ಸಂಘಟನೆಯಿಂದ ದೂರವಿರುವ ಸಾಧ್ಯತೆಗಳಿವೆ. ಹಾಗಾಗಿ, ಲಕ್ಷ್ಮೀಶ್​ಗೆ ಪಟ್ಟು ಕಟ್ಟುವಂತೆ ಒತ್ತಡ ಹೇರುವುದು ಕಡಿಮೆ. ಇನ್ನೂ ಡಾ.ಪರಮೇಶ್​ ದೊಡ್ಡ ಮಹತ್ವಾಕಾಂಕ್ಷೆಯೊಂದಿಗೆ ಹೊಸ ಜವಾಬ್ದಾರಿ ಹೊರಲು ಉತ್ಸುಕರಾಗಿದ್ದಾರೆ.

    ಮತ್ತೆ ಜ್ಯೋತಿಗಣೇಶ್​ ಹೆಗಲಿಗೆ ?: 2016ರಿಂದ 2020ರವರೆಗೆ ಪಕ್ಷವನ್ನು ಸಮರ್ಥವಾಗಿ ಸಂಘಟಿಸಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಪಕ್ಷ ಸಂಟನೆ ವಿಚಾರದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಸದಸ್ಯತ್ವ ಅಭಿಯಾನ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿತ್ತು. ಇನ್ನು ಅವರ ಅವಧಿಯಲ್ಲಿ ತುಮಕೂರು ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ 4 ಸ್ಥಾನ, 2019ರಲ್ಲಿ ಲೋಕಸಭೆಯಲ್ಲೂ ಪಕ್ಷ ಗೆದ್ದಿತ್ತು. ಗುಡುಗು-ಸಿಡಿಲಿನ ಆರ್ಭಟವಿಲ್ಲದಿದ್ದರೂ ಸಮಚಿತ್ತದಿಂದ ಪಕ್ಷವನ್ನು ಸಂಘಟಿಸಬಲ್ಲ ಜ್ಯೋತಿಗಣೇಶ್​ಗೆ ಮತ್ತೊಮ್ಮೆ ವರಿಷ್ಠರು ಜವಾಬ್ದಾರಿ ವಹಿಸಬಲ್ಲರೇ ಎಂಬುದು ಇನ್ನೆರೆಡು ದಿನಗಳಲ್ಲಿ ನಿರ್ಧಾರವಾಗಲಿದೆ.

    ವಿನಯ್​ ಬಿದರೆ ಡಾರ್ಕ್​ಹಾರ್ಸ್​: ಬಿಜೆಪಿ ರಾಜ್ಯ ಕಾರ್ಯದಶಿರ್ ಗುಬ್ಬಿ ಮೂಲದ ವಿನಯ್​ ಬಿದರೆ ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹರಿಯಬಿಡಲಾಗಿದೆ. ಪಕ್ಷದ ಸಂಟನೆಯಲ್ಲಿ ಜವಾಬ್ದಾರಿ ನಿರ್ವಹಿಸಿರುವ ವಿನಯ್​ಗೆ ಹಾಲಿ ಸ್ಥಳೀಯ ಜನಪ್ರತಿನಿಧಿಗಳ ಜತೆ ಉತ್ತಮ ಒಡನಾಟ ಇಲ್ಲ. ಇನ್ನು ಜಿಲ್ಲಾ ಪ್ರಭಾರಿ, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್​ ಒಲವು ತೋರುವವರನ್ನು ಸಾರಥಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ರಾತ್ರಿ ರಾಜಕೀಯ ಚೆನ್ನಾಗಿ ಗೊತ್ತು: ಬಿಜೆಪಿ ಮಾಜಿ ಶಾಸಕರ ವಿವಾದಾತ್ಮಕ ಹೇಳಿಕೆ

    ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್​ಗೌಡ ರಾಜೀನಾಮೆ: ಸಂಸದ ಜಿಎಸ್​ಬಿ, ಸಚಿವ ಮಾಧುಸ್ವಾಮಿ ಹೆಸರು ತಳುಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts