More

    ಸಾಮಾನ್ಯ ಕಾರ್ಯಕರ್ತನೇ ನಿಜವಾದ ಜನನಾಯಕ, ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

    ಮಂಗಳೂರು: ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೇ ನಿಜವಾದ ಜನನಾಯಕ. ಈ ಸಾಮಾನ್ಯ ನಾಯಕನಿಂದಲೇ ದೇಶದ ರಾಜಕೀಯ ಚಿತ್ರಣವನ್ನು ಬದಲಿಸಲು ಸಾಧ್ಯ ಎಂದು ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಹೇಳಿದರು.
    ಶುಕ್ರವಾರ ಸಂಜೆ ಕಾವೂರಿನಲ್ಲಿ ನಡೆದ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಪದಾಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಭಾರತೀಯ ಜನತಾ ಪಾರ್ಟಿಯ ಅಭ್ಯಾರ್ಥಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುವುದು ನಿಶ್ಚಿತ. ಇದಕ್ಕೆ ಕಾರ್ಯಕರ್ತರ ಪರಿಶ್ರಮದಿಂದ ಸಾಧ್ಯವಾಗುತ್ತದೆ ಎಂಬ ನಂಬಿಕೆಯಿದೆ ಎಂದರು.
    ಶಾಸಕ ಡಾ.ಭರತ್ ವೈ ಶೆಟ್ಟಿ ಮಾತನಾಡಿ, ಜನಾಯಕನಾಗಿ ಬೆಳೆಯಬೇಕಾದರೆ ಹುದ್ದೆ ಅಗತ್ಯವಿಲ್ಲ. ನಿಮ್ಮ ನಿಮ್ಮ ಸ್ಥಳದಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂಧಿಸಿದರೆ ಸಾಕು. ನಿಮ್ಮನ್ನು ಪಕ್ಷದ ಪ್ರಮುಖರು ಗುರುತಿಸುತ್ತಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ತಳಮಟ್ಟದ ಕಾರ್ಯಕರ್ತರು ಕೆಲಸ ಮಾಡಿದರೆ ಮಾತ್ರ ನಮ್ಮ ಅಭ್ಯಾರ್ಥಿ ಗೆಲುವು ಸಾಧಿಸುವುದು ಸಾಧ್ಯ ಎಂದರು.
    ಉತ್ತರಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಅವರು ನೂತನ ಅಧ್ಯಕ್ಷ ರಾಜೇಶ್ ಕೊಠಾರಿ ಅವರಿಗೆ ಬಿಜೆಪಿ ಧ್ವಜ ಹಸ್ತಾಂತರಿಸಿದರು.
    ಮಾಜಿ ಸಚಿವರಾದ ನಾಗರಾಜ ಶೆಟ್ಟಿ , ಕೃಷ್ಣ ಜೆ.ಪಾಲೇಮಾರ್, ಶಾಂತಿ ಪ್ರಸಾದ್ ಹೆಗ್ಡೆ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ, ಉಪಮೇಯರ್ ಸುನೀತಾ, ಪಾಲಿಕೆ ಸದಸ್ಯರಾದ ಕಿರಣ್ ಕೋಡಿಕಲ್ ಸೇರಿದಂತೆ ಹಲವರು ಇದ್ದರು.


    ರಾಷ್ಟ್ರ ಜಾಗೃತಿಗಾಗಿ ಸಂಘಟನೆಗೆ ಬಲ
    ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಇದನ್ನು ನೋಡಿಯೂ ನಾವು ಸುಮ್ಮನಿದ್ದರೆ ಬದುಕಿದ್ದೂ ಸತ್ತಂತೆ. ರಾಷ್ಟ್ರ ಜಾಗೃತಿಗಾಗಿ ಸಂಘಟನೆಯನ್ನು ಬಲಪಡಿಸಬೇಕು. ಕಾಂಗ್ರೆಸ್ ಅಭ್ಯಾರ್ಥಿ ಗೆದ್ದಾಗ ಪಾಕಿಸ್ತಾನ ಪರ ಘೋಷಣೆ ಕೂಗುವ ದೇಶದ್ರೋಹಿಗಳ ಸಂಖ್ಯೆ ಬೀದಿ ಬೀದಿಯಲ್ಲೂ ಹೆಚ್ಚಗದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ರಾಷ್ಟ್ರಭಕ್ತಿಯ ಚಿಂತನೆಗಳನ್ನು ಕಾರ್ಯಕರ್ತರು ಪ್ರಚಾರಪಡಿಸುವ ಅನಿವಾರ್ಯತೆ ಇದೆ ಎಂದು ಶಾಸಕ ಡಾ.ಭರತ್ ವೈ ಶೆಟ್ಟಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts