More

    ರುದ್ರಮುನಿ ಶ್ರೀಗಳಿಗೆ ನಾಣ್ಯಗಳ ತುಲಾ ಭಾರ

    ನಿಡಗುಂದಿ: ಪಟ್ಟಣದ ಗೌರೀಶ್ವರ ದೇವಸ್ಥಾನ ಆವರಣದಲ್ಲಿ ನಿಡಗುಂದಿಯ ರುದ್ರೇಶ್ವರ ಸಂಸ್ಥಾನ ಮಠದ ಪೀಠಾಧಿಕಾರಿ ರುದ್ರಮುನಿ ಶ್ರೀಗಳ 75ನೇ ಜನ್ಮದಿನ ನಿಮಿತ್ತ ಶುಕ್ರವಾರ ನಾಣ್ಯಗಳಿಂದ ತುಲಾಭಾರ ನೆರವೇರಿಸಲಾಯಿತು.

    ಕುಂಟೋಜಿ ಚನ್ನವೀರ ದೇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಇತರರಿಗೆ ಪ್ರತಿಕ್ಷಣ ಒಳಿತನ್ನೇ ಬಯಸಬೇಕು. ಅಂದಾಗ ಭಗವಂತ ಅವರ ಜೀವನದಲ್ಲೂ ಒಳ್ಳೆಯದನ್ನೇ ಕರುಣಿಸುತ್ತಾನೆ ಎಂದರು.

    ಮಾತಾಪಿತೃಗಳ, ಸ್ವಾಮೀಜಿಗಳ ತುಲಾಭಾರದಿಂದ ಪುಣ್ಯಸಾಧನೆ ಲಭಿಸಲಿದೆ. ತುಲಾಭಾರವೆಂದರೆ ಎಲ್ಲವೂ ಸ್ವಾಮಿಗಳ ಮೂಲಕ ಭಗವಂತನಿಗೆ ಸಮರ್ಪಿತವಾಗಿದೆ. ಇದರಿಂದ ದೇವರು ಕೊಟ್ಟಿದ್ದು, ದೇವರಿಗೆ ಸಲ್ಲಿತು ಎನ್ನುವ ಸಂತೃಪ್ತಿ ಭಾವನೆ ಬರುತ್ತದೆ. ಭಗವಂತನ ಆರಾಧನೆಯಿಂದ ಲೋಕ ಕಲ್ಯಾಣವಾಗುತ್ತದೆ ಎಂದರು.

    ರುದ್ರಮುನಿ ಶ್ರೀಗಳು ಮಾತನಾಡಿ, ರುದ್ರೇಶ್ವರ ಮಠದ ಶಕ್ತಿ ಅಪಾರವಾಗಿದೆ. ರುದ್ರೇಶ್ವರ ಭಕ್ತಿಗೆ ಹಾಗೂ ಶ್ರೀಗಳ ಮೇಲಿನ ನಂಬಿಕೆಗೆ ಅನೇಕ ಭಕ್ತರ ಕಾರ್ಯ ಸಾಕ್ಷೀಕರಿಸಿದೆ ಎಂದರು.

    ಸಾಹಿತಿ ಅಶೋಕ ಹಂಚಲಿ ಮಾತನಾಡಿದರು. ಹಿರೇಮಠದ ಶಶಿಧರ ಶ್ರೀಗಳು, ಜಿವಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದಣ್ಣ ನಾಗಠಾಣ, ಬಸವರಾಜ ಕುಂಬಾರ, ಶಿವಾನಂದ ಮುಚ್ಚಂಡಿ, ಬಸವರಾಜ ಸಾಲಿಮಠ, ಸಂಗಮೇಶ ಕೆಂಭಾವಿ, ಗಂಗಾಧರ ವಾರದ, ಸಂಗಮೇಶ ಬಳಿಗಾರ, ಈರಣ್ಣ ಮುರನಾಳ, ಶರಣು ಕಾಜಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts