More

    ಗ್ಯಾರಂಟಿಗಳ ಕೈ ಹಿಡಿಯದ ಮತದಾರ

    ಚಡಚಣ: ಸ್ಥಳೀಯ ಪಪಂ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲುವುದರ ಮೂಲಕ ಅಧಿಕಾರದ ಗದ್ದುಗೆಗೆ ಸಮೀಪದಲ್ಲಿದ್ದು, ಗ್ಯಾರಂಟಿಗಳ ಲೆಕ್ಕಾಚಾರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮತ್ತೆ ನಿರಾಸೆ ಅನುಭವಿಸಿದೆ.

    ಒಟ್ಟು 16 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗೆಲ್ಲುವ ಮೂಲಕ ಪಾರುಪತ್ಯ ಸಾಧಿಸಿದೆ. ಪಕ್ಷೇತರರು 4 ಸ್ಥಾನ ಹಾಗೂ ಆಡಳಿತಾರೂಢ ಕಾಂಗ್ರೆಸ್ ಕೇವಲ 4 ಸ್ಥಾನ ಗಳಿಸಿದೆ. ಕಳೆದ ಬಾರಿ ಪಪಂನಲ್ಲಿ ಬಿಜೆಪಿ 10, ಕಾಂಗ್ರೆಸ್ 3 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿ ಬಿಜೆಪಿಗೆ 2 ಸ್ಥಾನ ಕಡಿಮೆಯಾಗಿದ್ದು, ಕಾಂಗ್ರೆಸ್ 1 ಸ್ಥಾನ ಹೆಚ್ಚಿಸಿಕೊಂಡು ಅಷ್ಟಕ್ಕೆ ತೃಪ್ತಿ ಪಡುವಂತಾಗಿದೆ.

    ಪಟ್ಟಣದ ಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಮೊದಲ ಸುತ್ತಿನ ಮತ ಎಣಿಕೆಯಲ್ಲಿ 1ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ರಾಜು ಕೋಳಿ ಹಾಗೂ 9ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಗಂಟಗಲ್ಲಿ ಅವರು ಖಾತೆ ತೆರೆದರು. 9.30ಕ್ಕೆ ಪೂರ್ಣ ಲಿತಾಂಶ ಹೊರಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳು ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಸತತ ಎರಡನೇ ಬಾರಿಗೆ ಬಿಜೆಪಿಯು ಪಪಂನಲ್ಲಿ ಅಧಿಕಾರಕ್ಕೇರುವ ಅವಕಾಶ ಪಡೆದಿದ್ದು, ಪೂರ್ಣ ಬಹುಮತಕ್ಕೆ ಒಬ್ಬ ಸದಸ್ಯರ ಬೆಂಬಲದ ಅವಶ್ಯಕತೆಯಿದೆ. ನಾಲ್ವರು ಪಕ್ಷೇತರರು ಆಯ್ಕೆಯಾಗಿರುವುದರಿಂದ ಬಿಜೆಪಿಗೆ ಅಧಿಕಾರಕ್ಕೇರುವ ಅವಕಾಶ ಮತ್ತಷ್ಟು ಇಮ್ಮಡಿಗೊಂಡಿದೆ.

    18 ಮತಗಳ ಅಂತರದ ಗೆಲುವು: 7ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಸುರೇಖಾ ಬನಸೋಡೆ ಅವರು 303 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಬನಸೋಡೆ ಅವರನ್ನು 18 ಮತಗಳ ಅಂತರದಿಂದ ಸೋಲಿಸಿದರು.

    ಅತಿಹೆಚ್ಚು ಮತಗಳ ಅಂತರದ ಗೆಲುವು: ವಾರ್ಡ್ ನಂ. 5ರ ಕಾಂಗ್ರೆಸ್ ಅಭ್ಯರ್ಥಿ ಇಲಾಯಿಸಾಬ ನದಾ ಅವರು 508 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಸೋಮಶೇಖರ ಕಂಬಾರ ಅವರನ್ನು 408 ಮತಗಳ ಅಂತರದಿಂದ ಸೋಲಿಸಿ ಅತಿಹೆಚ್ಚು ಅಂತರದಿಂದ ಗೆಲವು ಸಾಧಿಸಿದ ಸಾಧನೆ ಮಾಡಿದರು.

    ಕಾಂಗ್ರೆಸ್ ಭಾಗ್ಯಗಳಿಗೆ ಒಲಿಯದ ಮತದಾರ: ಈ ಬಾರಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಯಾವುದೇ ಕಾರಣಕ್ಕೂ ಪಪಂನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪಣತೊಟ್ಟಿದ್ದವು. ಆದರೆ, ಕಾಂಗ್ರೆಸ್ ಭಾಗ್ಯಗಳ ಲೆಕ್ಕಾಚಾರ ತಲೆಕೆಳಗಾಗಿ, ಮತದಾರರ ಮನ ಗೆಲ್ಲುವಲ್ಲಿ ವಿಲವಾಗಿದೆ. ಒಟ್ಟು 107 ನೋಟಾ ಮತಗಳು ಚಲಾವಣೆಗೊಂಡಿದ್ದು, ವಾರ್ಡ್ 4ರಲ್ಲಿ ಅತಿಹೆಚ್ಚು 20 ಮತಗಳು ನೋಟಾಕ್ಕೆ ಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts