More

    ವಿಧಾನ ಪರಿಷತ್​ ಚುನಾವಣೆ ಮತ ಎಣಿಕೆ: ಗೆದ್ದವರ ಲಿಸ್ಟ್​ ಇಲ್ಲಿದೆ

    ಬೆಂಗಳೂರು: ಡಿ.10ರಂದು 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಈಗಾಗಲೇ ಹಲವರ ಭವಿಷ್ಯ ಏನೆಂದು ಸ್ಪಷ್ಟ ಚಿತ್ರಣ ಸಿಕ್ಕಿದೆ. ಮಧ್ಯಾಹ್ನದ ಹೊತ್ತಿಗೆ ಬಹುತೇಕ ಬಲಾಬಲ ಗೊತ್ತಾಗಲಿದ್ದು, ಸಂಜೆ ವೇಳೆಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಹೊಮ್ಮಲಿದೆ. ಹಾಸನದಲ್ಲಿ ಜೆಡಿಎಸ್​ಗೆ ಗೆದ್ದರೆ, ಕೊಡಗಿನಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.

    ಕೊಡಗಿನಲ್ಲಿ ಬಿಜೆಪಿ
    ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 102 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ ಮಂಥರ್ ಗೌಡ ಅವರು ಸೋಲುಕಂಡಿದ್ದು, ಕೊಡಗು ಬಿಜೆಪಿ ಭದ್ರಕೋಟೆ ಎಂದು ಮತ್ತೊಮ್ಮೆ ಸಾಬೀತಾಗಿದೆ.

    ಹಾಸನದಲ್ಲಿ ಜೆಡಿಎಸ್​
    ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಸೂರಜ್​ ರೇವಣ್ಣ ಗೆಲುವು ಸಾಧಿಸಿದ್ದಾರೆ. 2281 ಮತಗಳನ್ನು ಪಡೆದ ಸೂರಜ್​, 1533 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ 748 ಮತ, ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ 421 ಮತ ಪಡೆದಿದ್ದಾರೆ.

    ಬೀದರ್​ನಲ್ಲಿ ಕಾಂಗ್ರೆಸ್​
    ಗಡಿ ಜಿಲ್ಲೆ ಬೀದರ್​ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ ಪಾಟೀಲ್ 220 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

    ಶಿವಮೊಗ್ಗದಲ್ಲಿ ಬಿಜೆಪಿ
    ಶಿವಮೊಗ್ಗದಲ್ಲಿ ಚಲಾಚಣೆಯಾಗಿದ್ದ 4158 ಮತಗಳು ಪೈಕಿ 2208 ಮತ ಬಿಜೆಪಿ ಅಭ್ಯರ್ಥಿ ಪಾಲಾಗಿದ್ದು, ಅರುಣ್ ಗೆಲುವಿನ ನಗೆ ಬೀರಿದ್ದಾರೆ.

    ಚಿತ್ರದುರ್ಗ ಬ್ರೇಕಿಂಗ್
    ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ 2617 ಮತ, ಕಾಂಗ್ರೆಸ್​ 2263 ಮತ ಪಡೆದಿದ್ದಾರೆ.

    ಬೆಂಗಳೂರಲ್ಲಿ ಬಾಬುಗೆ ಸೋಲು
    ಬೆಂಗಳೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. 1800 ಕೋಟಿ ರೂ. ಆಸ್ತಿ ಒಡೆಯ ಎಂದು ಘೋಷಣೆ ಮಾಡಿಕೊಂಡು ಗಮನ ಸೆಳೆದಿದ್ದ ಕಾಂಗ್ರೆಸ್ ಅಭ್ಯರ್ಥಿ ಗುಜರಿ ಬಾಬು ಎಂದೇ ಹೆಸರಾಗಿದ್ದ ಯೂಸುಫ್ ಸೋಲು ಅನುಭವಿಸಿದ್ದಾರೆ.

    ಉತ್ತರ ಕನ್ನಡದಲ್ಲಿ ಬಿಜೆಪಿ
    ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ಧ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದಾರೆ.

    (ಇದಿಷ್ಟು ಈವರೆಗಿನ ಬಂದ ಮಾಹಿತಿ)

    ಸೂರಜ್​ ರೇವಣ್ಣಗೆ ಭರ್ಜರಿ ಗೆಲುವು: ಮಾಜಿ ಪ್ರಧಾನಿ ದೇವೇಗೌಡರ 3ನೇ ಕುಡಿ ವಿಧಾನಸೌಧ ಪ್ರವೇಶ

    ಬೇರೆ ಬೇರೆ ಮದ್ವೆ ಆಗಿದ್ರೂ ಮಾಗಡಿಯಲ್ಲಿ ದುರಂತ ಅಂತ್ಯ ಕಂಡ ಜೋಡಿ! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ…

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts